ಸಾಮಾನ್ಯವಾಗಿ ಜಾಂಡೀಸ್ ಅಂದರೆ ಕಾಮಾಲೆ ರೋಗ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲಾ ವರ್ಗದ ಜನರಲ್ಲಿಯೂ ಕಂಡುಬರುತ್ತಿರುವಂತಹ ಅವರನ್ನು ಬಾದಿಸುತ್ತಿರುವಂತಹ ಒಂದು ಮಹಾಮಾರಿ ಕಾಯಿಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಹೊರಗಿನ ತಿಂಡಿಗಳನ್ನು ಅಂದರೆ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದಲೋ ಅವರ ಬದಲಾದ ಸತ್ವವಿಲ್ಲದ ಆಹಾರ ಕ್ರಮದಿಂದಲೋ ಈ ಮಹಾಮಾರಿ ಜಂಡೀಸ್ ಜನರಲ್ಲಿ ಬಹು ಮುಖ್ಯವಾಗಿ ಕಾಣಿಸತೊಡಗಿದೆ.

ಒಮ್ಮೆ ಜಾಂಡೀಸ್ ರೋಗ ವ್ಯಕ್ತಿಯಲ್ಲಿ ಬಂತೆಂದರೆ ಆತನಿಗೆ ಊಟ ಸೇರುವುದೇ ಕಡಿಮೆಯಾಗುತ್ತದೆ, ಅಲ್ಲದೇ ತಿಂದ ಆಹಾರ ಜೀರ್ಣವಾಗದೆ ವಾಂತಿಯಾಗುವುದೂ ಉಂಟು ಮತ್ತು ಜಾಂಡೀಸ್ ರೋಗ ತಗುಳಿದ ವ್ಯಕ್ತಿಯ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಕೈ ಕಾಲು ಬೆರಳುಗಳ ಉಗುರುಗಳು ಮತ್ತು ದೇಹದ ಬಣ್ಣ ಮುಖವೂ ಕೊಂಚ ಹಳದಿ ಬಣ್ಣವಾದಂತೆ ಭಾಸವಾಗುತ್ತಿರುತ್ತದೆ.

ವ್ಯಕ್ತಿಯ ಮೂತ್ರ ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ ಹಲವಾರು ಜನರು ಈ ಜಾಂಡೀಸ್ ನಿಂದ ಬಳಲಿ ಬೇಸತ್ತು ಡಾಕ್ಟರ್ ಗಳ ಬಳಿ ಹೋಗಿ ಊಟದಲ್ಲಿ ಪಥ್ಯ ಮಾಡಿ ಆರೋಗ್ಯಕರ ಔಷಧಿಗಳನ್ನು ಸೇವಿಸಿ ಜಾಂಡೀಸ್ ಕಾಯಿಲೆಯನ್ನು ನಿಯಂತ್ರಣಕ್ಕೆ ತಂದುಕೊಂಡಿದ್ದಾರೆ, ಆದರೆ ನೆಲ ನೆಲ್ಲಿ ಗಿಡದಲ್ಲಿ ಈ ಜಾಂಡೀಸ್ ಅನ್ನು ಹೋಗಲಾಡಿಸುವ ಗುಣ ಅಡಗಿದೆಯಂತೆ ಇದನ್ನು ಈ ರೀತಿಯಾಗಿ ಬಳಸುವುದರಿಂದ ಜಾಂಡೀಸ್ ಸಂಪೂರ್ಣ ವಾಸಿಯಾಗುವುದಂತೆ ಹಾಗಾದ್ರೆ ಆ ಬಗ್ಗೆ ಅಂದರೆ ಈ ನೆಲ ನೆಲ್ಲಿ ಯನ್ನು ಜಾಂಡೀಸ್ ರೋಗಿಗಳು ಯಾವ ರೀತಿ ಸೇವಿಸಬೇಕಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಒಂದು ತಾಜಾ ನೆಲನೆಲ್ಲಿ ಗಿಡವನ್ನು ಬೇರು ಸಮೇತ ಕಿತ್ತುಕೊಳ್ಳಬೇಕು ನಂತರದಲ್ಲಿ ಕಿತ್ತಂತಹ ಗಿಡದ ಬೇರನ್ನು ಬೇರ್ಪಡಿಸಬೇಕು ನಂತರ ಉಳಿದ ನೆಲನೆಲ್ಲಿ ಗಿಡದ ಭಾಗವನ್ನು ಚೆನ್ನಾಗಿ ಅರೆದು ರುಬ್ಬಿ ಅದನ್ನು ಒಂದು ಪೇಸ್ಟ್ ನ ರೂಪದಲ್ಲಿ ಮಾಡಿಕೊಳ್ಳಬೇಕು ಹೀಗೆ ಮಾಡಿಕೊಂಡ ನೆಲನೆಲ್ಲಿ ಗಿಡದ ಪೇಸ್ಟ್ ಅನ್ನು ದಿನಕ್ಕೆ ನಾಲ್ಕು ಬಾರಿಯಂತೆ ಊಟಕ್ಕೂ ಮೊದಲು ಸೇವಿಸುತ್ತಾ ಬಂದರೆ ಜಾಂಡೀಸ್ ರೋಗವು ಕ್ರಮೇಣ ನಿಯಂತ್ರಣಕ್ಕೆ ಬರುವುದರಲ್ಲಿ ಎರಡು ಮಾತಿಲ್ಲ.

ಅಲ್ಲದೇ ಈ ರೀತಿಯ ತಾಜಾ ನೆಲನೆಲ್ಲಿ ಗಿಡವನ್ನು ಕಿತ್ತುಕೊಂಡು ಅದರ ಎಲೆ ಮತ್ತು ಚಿಕ್ಕ ಚಿಕ್ಕ ಕಾಯಿಗಳನ್ನು ಜಗಿದು ಹಾಗೆ ತಿನ್ನುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ಶೀಘ್ರದಲ್ಲಿಯೇ ಗುಣಪಡಿಸಿಕೊಳ್ಳಬಹುದು ಈ ರೀತಿಯಾಗಿ ಈ ನೆಲ ನೆಲ್ಲಿ ಗಿಡವು ಬರಿಯ ಜಾಂಡೀಸ್ ರೋಗಕ್ಕೆ ಮಾತ್ರವಲ್ಲದೆ ಕಿಡ್ನಿ ಸ್ಟೋನ್ ಗೂ ಕೂಡಾ ರಾಮಬಾಣದಂತೆ ಕೆಲಸ ಮಾಡುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!