ಈ ಲೇಖನದ ಮೂಲಕ ಸಂಧಿವಾತ, ಮೂಳೆ ನೋವು ಎಲ್ಲ ರೀತಿಯ ನೋವುಗಳಿಗೆ ನಾವು ಮನೆಯಲ್ಲಿ, ನಮ್ಮ ಮನೆಯಲ್ಲಿ ಹಾಗೂ ಮನೆಯ ಸುತ್ತಮುತ್ತಲೂ ಸಿಗುವಂತಹ ಪದಾರ್ಥಗಳನ್ನು ಬಳಸಿಕೊಂಡು ಸುಲಭವಾಗಿ ಮಾಡಿಕೊಳ್ಳಬಹುದಾದಂತಹ ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಈ ಮನೇಮದ್ದನ್ನು ನಮಗೆ ಮಾಡಲು ಏನೆಲ್ಲಾ ಪದಾರ್ಥಗಳು ಬೇಕು ಹಾಗೂ ಇದನ್ನು ಮಾಡುವುದು ಹೇಗೆ ಎನ್ನುವುದನ್ನು ನೋಡೋಣ. ಈ ಮನೇಮದ್ದು ಮಾಡಲು ಬೇಕಾಗಿರುವ ಪದಾರ್ಥಗಳು ಮೊದಲಿಗೆ ಕಹಿ ಬೇವಿನ ಎಲೆ ಇಪ್ಪತ್ತರಿಂದ ಇಪ್ಪತ್ತೈದು, ಪಪ್ಪಾಯ ಬೀಜ ಒಂದು ಟೀ ಸ್ಪೂನ್, ನೀರು 2 ಕಪ್ ಹಾಗೂ ನಿಂಬೆ ಹಣ್ಣಿನ ರಸ ಒಂದು ಟೀ ಸ್ಪೂನ್. ಇವಿಷ್ಟು ನಮಗೆ ಈ ಸಂಧಿವಾತ, ಮೂಳೆ ನೋವು, ಎಲ್ಲಾ ರೀತಿಯ ನೋವುಗಳ ನಿವಾರಣೆಗಾಗಿ ನಾವು ಮಾಡಿಕೊಳ್ಳುವ ಮನೆಮದ್ದಿಗೆ ಬೇಕಾದ ಸಾಮಗ್ರಿಗಳು. ಇನ್ನು ಇದನ್ನು ಹೇಗೆ ಮಾಡುವುದು ಅಂತಾ ನೋಡುವುದಾದರೆ , ಮೊದಲು ಸ್ಟೋವ್ ಮೇಲೆ ಒಂದು ಪಾತ್ರೆಯನ್ನು ಇಟ್ಟು ಎರಡು ಲೋಟ ನೀರು ಹಾಕಿ ಕುದಿಯಲು ಇಡಬೇಕು. ಇನ್ನೊಂದು ಕಡೆ ಕಹಿಬೇವಿನ ಎಲೆಯನ್ನು ಚೆನ್ನಾಗಿ ತೊಳೆದು, ಅದನ್ನು ಕುಟ್ಟಿಕೊಂಡು ಕುದಿಯುತ್ತಿರುವ ನೀರಿಗೆ ಹಾಕಬೇಕು. ಹಾಗೆ ಪಪ್ಪಾಯ ಬೀಜವನ್ನು ಸಹ ಹಾಕಿ ಎರಡು ಲೋಟ ನೀರು ಒಂದು ಲೋಟಕ್ಕೆ ಬರುವವರೆಗೂ ಚೆನ್ನಾಗಿ ಕುದಿಸಬೇಕು. ಒಂದು ಲೋಟಕ್ಕೆ ಕುದಿದ ನಂತರ ಕಷಾಯವನ್ನು ಶೋಧಿಸಿಕೊಂಡು ನಂತರ ಅದಕ್ಕೆ ಒಂದು ಟೀ ಸ್ಪೂನ್ ಅಷ್ಟು ನಿಂಬೆ ರಸ ಹಾಕಿಕೊಂಡು, ಒಂದು ಲೋಟ ಕಷಾಯವನ್ನು ದಿನಕ್ಕೆ ಎರಡು ಬಾರಿ ತೆಗೆದುಕೊಳ್ಳಬೇಕು.
ನಾವು ತಿಳಿಸಿದ ಈ ಮನೇ ಮದ್ದನ್ನು ಒಂದು ದಿನ ಮಾಡಿಟ್ಟುಕೊಂಡು ಅದನ್ನು ಎರಡು ಭಾಗ ಮಾಡಿಕೊಂಡು ಪ್ರತೀ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಬಹಳ ಉತ್ತಮ. ಬೆಳಿಗ್ಗೆ ಒಂದುಸಲ ಹಾಗೂ ಸಾಯಂಕಾಲ ಖಾಲಿ ಹೊಟ್ಟೆಯಲ್ಲಿ ಅಂದರೆ ಆಹಾರ ಸೇವಿಸಿದ ಮೂರು ನಾಲ್ಕು ಗಂಟೆಗಳ ನಂತರ ಒಂದು ಸಲ ಈ ಮನೇಮದ್ದನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಯಾವುದೇ ರೀತಿಯ ನೋವು ಇದ್ದರೂ ಸಹ ಗುಣಪಡಿಸಿಕೊಳ್ಳಬಹುದು.