ಫ್ಲಾಕ್ಸ್ ಸೀಡ್ ಜಲ್ ಹೇಗೆ ಮನೆಯಲ್ಲಿ ತಯಾರಿಸುವುದು, ಜಲ್ನನ್ನು ತಲೆಗೆ ಹೇಗೆ ಅಪ್ಲೈ ಮಾಡುವುದು ಹಾಗೂ ಇದರ ಉಪಯೋಗಗಳ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಪ್ಲಾಕ್ಸ್ ಸೀಡ್ ಜಲ್ ಮಾಡುವ ವಿಧಾನವೆಂದರೆ ಒಂದು ಪಾತ್ರೆಯಲ್ಲಿ 2ವರೆ ಕಪ್ ನೀರನ್ನು ಹಾಕಬೇಕು. ಇದಕ್ಕೆ 5 ಸ್ಪೂನ್ ಪ್ಲಾಕ್ಸ್ ಸೀಡ್ಸ್ ಹಾಕಿ ಮಿಕ್ಸ್ ಮಾಡಬೇಕು ಕುದಿಸುತ್ತಿರಬೇಕು ನೊರೆ ಬರುತ್ತದೆ ಮತ್ತು ನೀರು ಗಟ್ಟಿಯಾಗುತ್ತಾ ಬರುತ್ತದೆ. ಇದನ್ನು ಫಿಲ್ಟರ್ ಮಾಡಬೇಕು ಬಿಸಿ ಆರಿದ ನಂತರ ಇನ್ನು ಗಟ್ಟಿಯಾಗಿ ಜಲ್ ಆಗಿರುತ್ತದೆ. ಈ ಜಲ್ ನ್ನು ಕೂದಲನ್ನು ಚಿಕ್ಕ ಚಿಕ್ಕದಾಗಿ ಪ್ರತ್ಯೇಕ ಮಾಡಿಕೊಂಡು ಬ್ರಷ್ ಸಹಾಯದಿಂದ ಕೂದಲಿನ ಬುಡಕ್ಕೆ ಹಚ್ಚಬೇಕು ಮಸಾಜ್ ಮಾಡಿಕೊಳ್ಳಬೇಕು. ಮಸಾಜ್ ಮಾಡುವುದರಿಂದ ಕೂಲ್ ಎನಿಸುತ್ತದೆ. ಬೇಸಿಗೆ ಕಾಲದಲ್ಲಿ ಇದು ಉತ್ತಮವಾಗಿದೆ. ಕೂದಲಿಗೆ ಹಚ್ಚಿ 2 ಗಂಟೆ ಬಿಟ್ಟು ಹೇರ್ ವಾಷ್ ಮಾಡಿಕೊಳ್ಳಬೇಕು.
ಇದರಿಂದ ಕೂದಲು ಸ್ಮೂತ್ ಮತ್ತು ಶೈನ್ ಆಗುತ್ತದೆ ಮತ್ತು ಹೇರ್ ವಾಷ್ ನಂತರವು ಕೂಲ್ ಆಗಿರುತ್ತದೆ. ಯಾವುದೇ ಅಡ್ಡ ವಾಸನೆ ಇರುವುದಿಲ್ಲ. ಕೂದಲಿಗೆ ಇದರಿಂದ ಡೀಪ್ ನರೀಷ್ ಮೆಂಟ್ ಸಿಗುತ್ತದೆ. ಈ ಜಲ್ ಕೂದಲು ಉದ್ದ ಬೆಳೆಯಲು ಸಹಕಾರಿಯಾಗಿದೆ. ಮನೆಯಲ್ಲೆ ಸುಲಭವಾಗಿ ಜಲ್ ತಯಾರಿಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈಗಿನ ಧೂಳು, ಆಹಾರದ ಅಸಮತೋಲನದಿಂದ ಕೂದಲು ಹಾಳಾಗಿರುತ್ತದೆ. ಆದ್ದರಿಂದ ಈ ಜಲ್ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.