ಇತ್ತೀಚೆಗೆ ಎಲ್ಲರೂ ಒಂದಲ್ಲ ಒಂದು ಅನಾರೋಗ್ಯದಿಂದ ಬಳಲುವುದು ಸಾಮಾನ್ಯ ಎಂಬಂತಾಗಿದೆ. ಕೈ ಕಾಲು ಜೊಮು ಹಿಡಿಯುವುದು. ಯಾವುದಾದರೂ ಜಗಳ ಗಲಾಟೆ ನೋಡಿದರೂ ಹೃದಯ ಬಡಿತದ ವೇಗ ಹೆಚ್ಚಳವಾಗುವುದು. ಸಣ್ಣ ಪುಟ್ಟ ಕೆಲಸ ಮಾಡಿದಾಗಲೂ ಬಹಳ ಬೇಗ ಸುಸ್ತಾಗುವುದು. ಭಾರವಿಲ್ಲದ ವಸ್ತುಗಳನ್ನು ಎತ್ತಲು ಆಗದೆ ಇರುವುದು. ಇವೆಲ್ಲವೂ ನರ ದೌರ್ಬಲ್ಯ ಅಥವಾ ನರ ಬಲಹೀನತೆಯ ಲಕ್ಷಣಗಳು. ಇಂತಹ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿಯೆ ಇದೆ. ಮೆದುಳು ಹಾಗೂ ಬೆನ್ನೆಲುಬು ಮನುಷ್ಯನ ಚಾಲನೆಗೆ ಎಷ್ಟು ಪ್ರಮುಖವೊ ಅಷ್ಟೇ ಮಹತ್ವವಿದೆ. ಮೆದುಳಿನಿಂದ ಬಂದ ಸಂದೇಶಗಳನ್ನು ರವಾನಿಸುವುದೆ ಈ ನರಗಳು. ನರಗಳಿಂದ ಸಂದೇಶ ರವಾನೆಯಾದ ನಂತರವೇ ಆ ಕೆಲಸ ಆಗುವುದು. ಯಾವಾಗ ನರಗಳು ದುರ್ಬಲಗೊಳ್ಳುತ್ತದೆಯೊ ಆವಾಗ ಸ್ಪರ್ಶವಿಲ್ಲದಂತೆ ಆಗುವುದು, ಕೈಕಾಲು ಚಾಲನೆ ಕಳೆದುಕೊಂಡಂತೆ ಭಾಸವಾಗುವುದು, ನಡೆಯಲಾಗದಂತೆ ಆಗುವುದು ಇವುಗಳು ನರಸಂಬಂಧಿ ಸಮಸ್ಯೆಗಳ ಲಕ್ಷಣಗಳಲ್ಲಿ ಕೆಲವು.
ಈ ಸಮಸ್ಯೆಗಳು ಹೆಚ್ಚು ಮಧುಮೇಹ ಸಮಸ್ಯೆಯಿರುವವರಿಗೆ ಹಾಗೂ ಧೂಮಪಾನ, ಮದ್ಯಪಾನ ಮಾಡುವವರಲ್ಲಿ ಹೆಚ್ಚಾಗಿ ಕಾಣಬಹುದು. ಒಂದು ಅಧ್ಯಯನದ ಪ್ರಕಾರ ಕೇವಲ ಸಸ್ಯಹಾರ ಸೇವನೆಯನ್ನು ಮಾಡುವವರಲ್ಲಿಯೂ ಈ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ. ಕೆಲವರಿಗೆ ಮಾತ್ರೆಗಳಿಂದ ಪರಿಹಾರ ಸಿಕ್ಕಿರುವುದಿಲ್ಲ. ಅಂತಹವರು ಪ್ರಾಣಾಯಾಮ ಯೋಗಾಸನ ಮಾಡುವುದರಿಂದ ರಕ್ತದ ಸಂಚಾರ ಸರಿಯಾಗಿ ಆಗಿ ನರ ದೌರ್ಬಲ್ಯ ಕಡಿಮೆಯಾಗಬಹುದು. ಬೆಳಗಿನ ಬಿಸಿಲು ವಿಟಮಿನ್ ಡಿ ಯನ್ನು ನೀಡುವುದರಿಂದ ಬೆಳಗಿನ ಬಿಸಿಲಿಗೆ ಸ್ವಲ್ಪ ಕಾಲ ಮೈಯೊಡ್ಡುವುದು ಉತ್ತಮ. ಇನ್ನೂ ಆಯುರ್ವೇದದಲ್ಲಿ ಇದಕ್ಕೆ ಒಂದು ಚಿಕ್ಕ ಪರಿಹಾರವಿದೆ. ಅದುವೆ ಅಶ್ವಗಂಧ ಪುಡಿ. ಅಶ್ವಗಂಧ ಪುಡಿಯನ್ನು ನುಣ್ಣಗೆ ಪುಡಿಮಾಡಿಕೊಂಡು ಅದರ ಜೊತೆಗೆ ಕಲ್ಲುಸಕ್ಕರೆ ಪುಡಿ ಬೆರೆಸಿ ಮಿಶ್ರಣ ಮಾಡಿಕೊಂಡು ಉಗುರು ಬೆಚ್ಚಗಿನ ಹಾಲಿನಲ್ಲಿ ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ ಎರಡು ಮೂರು ತಿಂಗಳಲ್ಲಿ ನರದ ದುರ್ಬಲತೆ ಕಡಿಮೆಯಾಗುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು. ಮಧುಮೇಹ ಇರುವವರು ಕಲ್ಲುಸಕ್ಕರೆ ಬದಲಿಗೆ ಹಳೆಯ ಬೆಲ್ಲವನ್ನು ಉಪಯೋಗಿಸಬಹುದು.
ಪ್ರತಿ ದಿನ ಹಾಲು ಸೇವಿಸುವುದು ನರಗಳ ದೌರ್ಬಲ್ಯ ಇರುವವರಿಗೆ ಒಳ್ಳೆಯದು ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಂದ ನರಗಳು ಸ್ವಲ್ಪ ಮಟ್ಟಿಗೆ ಬಲವಾಗುತ್ತವೆ ಖಾಲಿ ಹಾಲಿಗಿಂತ ಸ್ವಲ್ಪ ಅರಿಶಿನ ಹಾಕಿ ಸೇವಿಸಿದರೆ ತುಂಬಾ ಒಳ್ಳೆಯದು. ಉಗುರು ಬೆಚ್ಚಗಿನ ನೀರಲ್ಲಿ ಸ್ವಲ್ಪ ಅರಿಶಿನ, ಸ್ವಲ್ಪ ಜೇನು, ಸ್ವಲ್ಪ ನಿಂಬೆರಸ ಬೆರೆಸಿ ಕುಡಿಯುವುದು ನರಗಳ ದೌರ್ಬಲ್ಯಕ್ಕೆ ತುಂಬಾ ಒಳ್ಳೆಯದು. ಪ್ರತಿ ನಿತ್ಯ ವಾಕಿಂಗ್ ಹಾಗೂ ಜಾಗಿಂಗ್ ಮಾಡುವುದು ಉತ್ತಮ ಇದರಿಂದಾಗಿ ರಕ್ತ ಪರಿಚಲನೆ ಉತ್ತಮಗೊಂಡು ನರಗಳ ಬಲಹೀನತೆ ಕ್ರಮೇಣ ಕಡಿಮೆಯಾಗುತ್ತದೆ. ಒಂದು ವೇಳೆ ಈ ತರಹದ ನರಗಳ ಬಲಹೀನತೆ ಇದ್ದಲ್ಲಿ ಇದನ್ನು ಪ್ರಯೋಗಿಸಿ ನೋಡಿ ಇದನ್ನು ಕ್ರಮೇಣ ಉಪಯೋಗಿಸುವುದರಿಂದ ನರಗಳ ಬಲಹೀನತೆಗೆ ಪರಿಹಾರ ಸಿಗುತ್ತದೆ.