ಪ್ರತಿದಿನ ನಾವು ಅಡುಗೆಮನೆ ಚೊಕ್ಕವಾಗಿ ಇಟ್ಟುಕೊಳ್ಳಬೇಕು ಅಂತ ಎಷ್ಟು ಪ್ರಯತ್ನ ಮಾಡುತ್ತೇವೆ ಆದರೂ ಕೆಲವೊಮ್ಮೆ ಎಲ್ಲಿಯಾದರೂ ಏನಾದರೂ ಒಂದು ತಪ್ಪು ಮಾಡಿಯೇ ಮಾಡಿರುತ್ತೇವೆ. ಹೆಣ್ಣುಮಕ್ಕಳಿಗೆ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಂದು ದೊಡ್ಡ ಕೆಲಸವೇ ಸರಿ ಹಾಗಾಗಿ ಈ ಲೇಖನದ ಮೂಲಕ ಮನೆಯಲ್ಲಿ ನಾವು ಬಳಸಬಹುದಾದಂತಹ ಕೆಲವು ವಸ್ತುಗಳ ಬಗ್ಗೆ ಅಡುಗೆಮನೆ ಬಗ್ಗೆ ಕೆಲವೊಂದಿಷ್ಟು ಟಿಪ್ಸ್ ಗಳನ್ನೂ ತಿಳಿದುಕೊಳ್ಳೋಣ.

ನಾವು ಕೆಲವೊಮ್ಮೆ ಸೇಬುಹಣ್ಣು ಕಟ್ ಮಾಡಿದಾಗ ಅರ್ಧ ತಿಂದು ಇನ್ನರ್ಧ ಭಾಗವನ್ನು ಹಾಗೆಯೇ ಇಟ್ಟಿರುತ್ತೇವೆ. ಆದರೆ ಅರ್ಧ ಇಟ್ಟ ಭಾಗ ಕಟ್ ಮಾಡಿದಾಗ ಹೇಗೆ ಇರುತ್ತದೆ ಹಾಗೆ ಇರದೆ ಬಣ್ಣ ಬದಲಾಗಿರುತ್ತದೆ. ಕಟ್ ಮಾಡಿ ಉಳಿದರ್ಧ ಭಾಗ ಬಣ್ಣ ಬದಲಾಗದ ಹಾಗೆ ಇರುವುದಕ್ಕೆ ಅದಕ್ಕೆ ಉಪ್ಪು ಅಥವಾ ನಿಂಬೆ ರಸವನ್ನು ಹಚ್ಚಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಒಂದು ದಿನದವರೆಗೂ ಬಣ್ಣ ಬದಲಾಗದೆ ಹಾಗೆಯೇ ಫ್ರೆಶ್ ಆಗಿರುತ್ತದೆ. ಇನ್ನು ಕೆಲವೊಮ್ಮೆ ನಾವು ಅಡುಗೆಗೆ ಬೆಣ್ಣೆಯನ್ನು ಬಳಕೆ ಮಾಡುತ್ತೇವೆ ಆದರೆ ಅದನ್ನು ಫ್ರಿಜ್ಜಿನಲ್ಲಿ ಇಟ್ಟು ಗಟ್ಟಿಯಾಗಿರುತ್ತದೆ ಎಷ್ಟೇ ಪ್ರಯತ್ನಿಸಿದರೂ ಹಾಗೆ ತೆಗೆಯಲು ಬರುವುದೇ ಇಲ್ಲ ಬೆಣ್ಣೆಯನ್ನು ಸುಲಭವಾಗಿ ಕಟ್ ಮಾಡಿ ತೆಗೆಯಲು ನಾವು ಸ್ಪೂನ್ ಅಥವಾ ಚಾಕುವನ್ನು ಗ್ಯಾಸ್ ನಲ್ಲಿ ಬಿಸಿ ಮಾಡಿಕೊಂಡು ನಂತರ ಅದರಿಂದ ಬೆಣ್ಣೆಯನ್ನು ಕಟ್ ಮಾಡಿದರೆ ಸುಲಭವಾಗಿ ಬೆಣ್ಣೆ ಕರಗಿ ಬರುತ್ತದೆ. ಹಾಗೆಯೇ ನಾವು ಏನಾದರೂ ಕರಿಯಲು ಇಟ್ಟಾಗ ಎಣ್ಣೆ ಕಾದಿದೆಯೋ ಇಲ್ಲವೇ ಎನ್ನುವುದನ್ನು ನೋಡಲು ಕೈಯನ್ನು ಮೇಲೆ ಅಡ್ಡವಾಗಿ ಹಿಡಿದು ನೋಡುವುದು ಸಾಮಾನ್ಯವಾಗಿ ಎಲ್ಲರಿಗೂ ಅಭ್ಯಾಸ. ಇದರ ಬದಲು ಒಂದು ಮರದ ಸ್ಪೂನ್ ಅನ್ನು ಎಣ್ಣೆಯಲ್ಲಿ ಹಾಕಿ ನೋಡಿದಾಗ ಗುಳ್ಳೆಗಳು ಬಂದಾಗ ಎಣ್ಣೆ ಕಾದಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಹಾಗೆ ನಾವು ಪೂರಿ ಅಥವಾ ಹಪ್ಪಳ ಏನಾದ್ರೂ ಕರಿಯುವಾಗ ಕೆಲವೊಮ್ಮೆ ಪುರಿಯಲ್ಲಿ ಅಥವಾ ಹಪ್ಪಳದಲ್ಲಿ ಹೆಚ್ಚಾಗಿ ಎಣ್ಣೆಯನ್ನು ಹೀರಿಕೊಂಡಿರುತ್ತದೆ ಹಾಗಾಗಬಾರದು ಎಂದರೆ ಅದಕ್ಕೆ ಒಂದು ಸ್ವಲ್ಪ ಕಲ್ಲುಪ್ಪು ಯಾವುದಾದರೂ ಸ್ವಲ್ಪ ಉಪ್ಪನ್ನು ಹಾಕಿ ಕೊಳ್ಳಬೇಕು. ಹೀಗೆ ಮಾಡುವುದರಿಂದ ನಾವು ಕರೆಯುವ ಪದಾರ್ಥದಲ್ಲಿ ಎಣ್ಣೆ ಹೀರಿಕೊಳ್ಳುವುದಿಲ್ಲ.

ಇನ್ನು ಕೆಲವರ ಮನೆಯಲ್ಲಿ ತೆಂಗಿನಕಾಯಿ ತುರಿಯುವುದಕ್ಕೆ ಅಂತ ತುರಿಯೋ ಮಣೆ ಇರಲ್ಲ. ಹಾಗಿದ್ದಾಗ ನಾವು ಪಲ್ಯ ಅಥವಾ ಬೇರೆ ಯಾವುದಕ್ಕಾದರೂ ತೆಂಗಿನಕಾಯಿಯನ್ನು ಬಳಕೆ ಮಾಡಬೇಕು ಅಂತ ಇದ್ದಾಗ ತೆಂಗಿನಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಿಕೊಂಡು ಅದನ್ನು ಮಿಕ್ಸಿಗೆ ಹಾಕಿ ತಿರುಗಿಸಿಕೊಂಡರೂ ಮಣೆಯಲ್ಲಿ ತುರಿದುಕೊಂಡ ಹಾಗೆ ಕಾಯಿತುರಿ ನಮಗೆ ಸಿಗುತ್ತದೆ. ಯಾವುದೇ ರೀತಿಯ ಬೇಳೆಗಳು ಬೇಗ ನೆನೆಯಬೇಕು ಅಂತಿದ್ದರೆ ನೀರನ್ನು ಸ್ವಲ್ಪ ಬಿಸಿ ಮಾಡಿ ನಂತರ ಬಿಸಿ ನೀರಿನಲ್ಲಿ ಬೇಳೆಯನ್ನು ನೆನೆಯಲು ಹಾಕಿದರೆ ಅರ್ಧ ಗಂಟೆಯಲ್ಲಿ ಬೇಳೆ ನೆನೆಯುತ್ತದೆ. ಅಡುಗೆ ಮಾಡಿದ ಕೆಲವೊಂದು ಪಾತ್ರಗಳು ತಳ ಹಿಡಿದುಕೊಳ್ಳುತ್ತದೆ. ಪಾತ್ರೆಗಳು ತಳ ಹಿಡಿದಾಗ ತೊಳೆಯಲು ತುಂಬ ಸಮಯ ತೆಗೆದುಕೊಳ್ಳುತ್ತದೆ ಹೀಗಾಗದೆ ಇರುವಹಾಗೆ ತಳ ಹಿಡಿದ ಪಾತ್ರಗಳನ್ನು ಗ್ಯಾಸ್ ಮೇಲೆ ಇಟ್ಟು ಮುಳುಗುವಷ್ಟು ನೀರನ್ನು ಹಾಕಿ ಅದಕ್ಕೆ ಸ್ವಲ್ಪ ವಿನಿಗರ್ ಹಾಗೂ ಸೋಡಾವನ್ನು ಹಾಕಿ ಕಾಯಿಸಿ ನಂತರ ತೊಳೆಯುವುದರಿಂದ ಸ್ವಚ್ಛವಾಗಿರುತ್ತದೆ ಪಾತ್ರೆ ಕೂಡಾ ಸ್ವಚ್ಛವಾಗುತ್ತದೆ. ಇನ್ನು ಹಸಿಮೆಣಸಿನ ಕಾಯಿಯನ್ನು ಚಿಕ್ಕದಾಗಿ ಕಟ್ ಮಾಡಬೇಕು ಅಂದಾಗ ಕೆಲವೊಮ್ಮೆ ಚಾಕುವಿನಲ್ಲಿ ಬೇಗ ಬೇಗ ಕಟ್ ಮಾಡಲು ಬರಲ್ಲ ಅಥವಾ ಕೈ ಇಂದ ಮುಖ ಕಣ್ಣು ಮುಟ್ಟಿಕೊಂಡು ಉರಿ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗಾಗಿ ಕತ್ತರಿಯ ಸಹಾಯದಿಂದ ಆದಷ್ಟು ನಮಗೆ ಎಷ್ಟು ಚಿಕ್ಕದಾಗಿ ಬೇಕು ಅಷ್ಟು ಚಿಕ್ಕದಾಗಿ ಕಟ್ ಮಾಡಿಕೊಳ್ಳಬಹುದು. ಇನ್ನು ಈರುಳ್ಳಿ ಕಟ್ ಮಾಡುವಾಗ ಕಣ್ಣಿನಲ್ಲಿ ನೀರು ಬರತ್ತೆ ಹೀಗೆ ಆಗದಂತೆ ಈರುಳ್ಳಿ ಮಧ್ಯದಲ್ಲಿ ಕಟ್ ಮಾಡಿ ಸಿಪ್ಪೆ ತೆಗೆದುಕೊಂಡು ಸ್ವಲ್ಪ ಹೊತ್ತು ನೀರಿನಲ್ಲಿ ಹಾಕಿಟ್ಟು ನಂತರ ಕಟ್ ಮಾಡುವುದರಿಂದ ಕಣ್ಣಿನಲ್ಲಿ ನೀರು ಬರುವುದಿಲ್ಲ. ಇವೆಲ್ಲ ನಾವು ಪ್ರತಿನಿತ್ಯ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಕೆ ಮಾಡಿಕೊಳ್ಳಬಹುದಾದ ಟಿಪ್ಸ್ ಆಗಿದೆ.

Leave a Reply

Your email address will not be published. Required fields are marked *