ಆಯುರ್ವೇದದ ಪ್ರಕಾರ ನಾವು ನಮ್ಮ ಕಿವಿಗಳಿಗೆ ಒಂದೆರಡು ಹನಿ ಎಣ್ಣೆಯನ್ನು ಹಾಕುವುದರಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಅಥವಾ ಲಾಭ ಇದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಆಯುರ್ವೇದ ಶಾಸ್ತ್ರದಲ್ಲಿ ಅಭ್ಯಂಗ ಸ್ವೇದವನ್ನು ಪ್ರತಿನಿತ್ಯ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ ಪ್ರತಿನಿತ್ಯವೂ ಅಭ್ಯಂಗ ಸ್ನಾನವನ್ನು ಮಾಡಲು ಆಗದೆ ಇದ್ದಲ್ಲಿ ನಮ್ಮ ದೇಹದ ಕೆಲವೊಂದಿಷ್ಟು ಭಾಗಗಳಿಗೆ ನಾವು ಒಂದೆರಡು ಹನಿಗಳಷ್ಟು ಎಣ್ಣೆಯನ್ನು ಹಾಕಿಕೊಳ್ಳಲೇಬೇಕು. ನಮ್ಮ ದೇಹದ ನಾಭಿ , ಕಿವಿ , ತಲೆ ಮತ್ತು ಪಾದ ಈ ನಾಲ್ಕು ಅಂಗಗಳಿಗೆ ಪ್ರತಿನಿತ್ಯ ಎಣ್ಣೆಯನ್ನು ಹಚ್ಚಿ ಕೊಳ್ಳಲೇಬೇಕು. ಪ್ರತಿನಿತ್ಯ ಸ್ನಾನ ಮಾಡುವಾಗ ಪಾದಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಅದೇ ರೀತಿಯಾಗಿ ನಮ್ಮ ತಲೆ ಕಿವಿ ಮತ್ತು ನಾಭಿಗೆ ಕೂಡ ಎಣ್ಣೆಯನ್ನು ಹಾಕಲೇಬೇಕು. ಇದು ದಿನನಿತ್ಯದ ಕರ್ಮ ವಾಗಿದ್ದು ಒಂದು ದಿನವೂ ಕೂಡ ಬಿಡಬಾರದು. ನಮಗೆ ಏನಾದರೂ ಕಾಯಿಲೆ ಬಂದಾಗ ನಾವು ಕರ್ಣಪೂರಣ ವನ್ನು ಮಾಡುತ್ತೇವೆ. ಕರ್ಣಪೂರಣ ಎಂದರೆ ನಮ್ಮ ಭುಜದ ಮೇಲಿನ ಮೇಲ್ಭಾಗವನ್ನು ಯಾವುದೇ ರೋಗ ಬರದಂತೆ ತಡೆಗಟ್ಟುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ನಾವು ಒಂದೆರಡು ಹನಿ ಕಿವಿಗೆ ಎಣ್ಣೆಯನ್ನು ಹಾಕಬೇಕಾಗುತ್ತದೆ. ಇದನ್ನು ಕರ್ಣಪೂರಣ ಎನ್ನುತ್ತಾರೆ.
ಕಿವಿಗೆ ಎಣ್ಣೆಯನ್ನು ಹಾಕುವುದರಿಂದ ನಾವು ಮನೆಯಲ್ಲಿ ಸಿಗುವಂತಹ ಕೊಬ್ಬರಿ ಎಣ್ಣೆಯನ್ನು ಬಳಕೆಮಾಡಬೇಕು. ಕೊಬ್ಬರಿ ಎಣ್ಣೆ ಕಾಯಿಸಿ ಆರಿಸಿರುವುದನ್ನು ಹಾಕಬೇಕು. ನಮ್ಮ ಎರಡು ಕಿವಿಗಳಿಗೂ ಒಂದೆರಡು ಹನಿ ಎಣ್ಣೆಯನ್ನು ಹಾಕಿ ಎಣ್ಣೆ ಹಾಕಿದ ನಂತರ ಎರಡೂ ಕಿವಿಗೆ ಹತ್ತಿಯನ್ನು ಹಾಕಿಕೊಂಡು ಐದು ನಿಮಿಷಗಳ ಕಾಲ ಬಿಟ್ಟು ನಂತರ ಹತ್ತಿಯನ್ನು ತೆಗೆದು ಸ್ನಾನ ಮಾಡಬೇಕು. ಈ ರೀತಿಯಾಗಿ ಪ್ರತಿದಿನವೂ ಮಾಡಬೇಕು. ಹೀಗೆ ಮಾಡುವುದರಿಂದ ನಮ್ಮ ಪಂಚೇಂದ್ರಿಯಗಳ ಆರೋಗ್ಯ ಸಮತೋಲನದಲ್ಲಿರುತ್ತದೆ. ಇದು ಹೇಗೆ ಅಂತ ನೋಡುವುದಾದರೆ ವಾತ. ವಾತಕ್ಕೂ ನರಮಂಡಲಕ್ಕು ನೇರ ಸಂಪರ್ಕ ಇರುತ್ತದೆ ಹಾಗೆ ನರಮಂಡಲಕ್ಕೆ ಮತ್ತು ಇಂದ್ರಿಯಗಳಿಗೆ ನೇರ ಸಂಪರ್ಕ ಇರುತ್ತದೆ. ವಾತವನ್ನು ಕಡಿಮೆ ಮಾಡಬೇಕು ಅಂದರೆ ತೈಲವನ್ನು ಬೆಳಕೆ ಮಾಡಬೇಕು. ತೈಲ ಅಂದರೆ ಇಲ್ಲಿ ನಾವು ಕೊಬ್ಬರಿ ಎಣ್ಣೆಯನ್ನು ಮಾತ್ರವೇ ಬಳಸಬೇಕು. ಕೊಬ್ಬರಿ ಎಣ್ಣೆಯನ್ನು ನಾವು ಕಿವಿಯಲ್ಲಿ ಹಾಕುವುದರಿಂದ ವಾತ ಪ್ರಾಕೃತ ಅವಸ್ಥೆಗೆ ಬರುತ್ತದೆ. ವಾತ ಪ್ರಾಕೃತ ಅವಸ್ಥೆಗೆ ಬಂದರೆ ನರಮಂಡಲ ಕೂಡ ಪ್ರಾಕೃತ ಅವಸ್ಥೆಗೆ ಬರುತ್ತದೆ ನರಮಂಡಲ ಸರಿಯಾಗಿ ಇದ್ದರೆ ಮಾತ್ರ ನಮ್ಮ ಇಂದ್ರಿಯಗಳು ಜ್ಞಾನೇಂದ್ರಿಯಗಳು ಸರಿಯಾಗಿ ತಮ್ಮ-ತಮ್ಮ ಕಾರ್ಯನಿರ್ವಹಿಸುತ್ತವೆ. ದೃಷ್ಟಿ, ಸ್ಪರ್ಶ ಜ್ಞಾನ , ಆಲಿಸುವಿಕೆ ಇವೆಲ್ಲವೂ ನೂರುಕಾಲ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ನಮ್ಮ ಜ್ಞಾನೇಂದ್ರಿಯಗಳು ಸರಿಯಾಗಿ ತಮ್ಮ ಕೆಲಸ ಮಾಡಬೇಕು ಅಂದರೆ ಕರ್ಣಪೂರಣ ವಿಧಿಯನ್ನು ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮುನ್ನ ನಿಮ್ಮ ಹತ್ತಿರದ ಆಯುರ್ವೇದದ ವೈದ್ಯರನ್ನು ಒಮ್ಮೆ ಭೇಟಿ ಮಾಡಿ