ಹಲವಾರು ಸ್ವ ಉದ್ಯೋಗ ಗಳಿವೆ ಅದರಲ್ಲಿ ಮೊಬೈಲ್ ಕ್ಯಾಂಟೀನ್ ಮಾಡುವ ವಿಧಗಳು, ಬಂಡವಾಳ, ಲೈಸೆನ್ಸ್ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಮೊಬೈಲ್ ಕ್ಯಾಂಟೀನ್ ಮಾಡುವುದರಲ್ಲಿ ಹಲವು ವಿಧಗಳಿವೆ. ಮೊದಲಿಗೆ ಬ್ರೇಕ್ ಫಾಸ್ಟ್ ಮತ್ತು ಮಧ್ಯಾಹ್ನ ಮೀಲ್ಸ್ ಕೊಡುವುದು. ಮಧ್ಯಾಹ್ನ ಊಟ ವೆಜ್ ಮತ್ತು ನಾನ್ ವೆಜ್ ಮಾಡಲೇಬೇಕು ನಾನ್ ವೆಜ್ ಮಾಡುವುದರಿಂದ ಲಾಭ ಜಾಸ್ತಿ. ಎರಡನೆಯದಾಗಿ ಮೀಲ್ಸ್ ಮತ್ತು ಚಾಟ್ಸ್ . ಮಧ್ಯಾಹ್ನ ಊಟ ಮತ್ತು ನಂತರ ಚಾಟ್ಸ್ ಕೊಡಬಹುದು. ಚಾಟ್ಸ್ ಗಳಲ್ಲಿ ಗೋಬಿ, ನೂಡಲ್ಸ್, ಪುರಿ ಬೇಸ್ಡ್ ಪಾನಿಪುರಿ, ಮಸಾಲ ಪುರಿ ಮಾಡಬಹುದು. ಮೂರನೆಯದಾಗಿ ಫಾಸ್ಟ್ ಫುಡ್ ಇದು ಫಾರಿನ್ ಗಳಲ್ಲಿ ಹೆಚ್ಚು ಫೇಮಸ್ ಆಗಿದೆ ಒಂದು ಫುಡ್ ಟ್ರಕ್ ನಿಂದ ಪ್ರಾರಂಭಿಸಿ ಸಾವಿರಾರು ಫುಡ್ ಟ್ರಕ್ ಇಟ್ಟುಕೊಂಡಿರುವ ನಿದರ್ಶನಗಳಿವೆ. ಇದರಲ್ಲಿ ಪಿಜ್ಜಾ ಬರ್ಗರ್, ಫ್ರೆಂಚ್ ಪ್ರೈಸ್, ಸಲಾಡ್, ಕೇಕ್ಸ, ಜ್ಯೂಸಸ್ ಇತರೆ ಮಾಡಬಹುದು. ಮೊಬೈಲ್ ಕ್ಯಾಂಟೀನ್ ಇದರ ವೀಶೇಷತೆಯೆಂದರೆ ಇದರಲ್ಲಿ ನಷ್ಟವಾಗುವುದಿಲ್ಲ. ಜನಸಂಖ್ಯೆ. ಹೆಚ್ಚಿರುವಕಡೆ ಮೊಬೈಲ್ ಕ್ಯಾಂಟೀನ್ ಮಾಡುವುದರಿಂದ ಲಾಭ ಗಳಿಸಬಹುದು. ಇದಕ್ಕೆ ರೆಂಟ್ ಕೊಡಬೇಕಾಗಿಲ್ಲ ಆ ಹಣದಲ್ಲಿ ಇನ್ ವೆಸ್ಟ್ ಮಾಡಬಹುದು. ಮನೆಯವರೆ ಸೇರಿ ಮಾಡಬಹುದು. ಇದರಲ್ಲಿ ಟ್ಯಾಕ್ಸ್ ಮತ್ತು ಲೈಸೆನ್ಸ್ ಅವಶ್ಯಕತೆ ಇರುವುದಿಲ್ಲ.
ಗಾಡಿಯನ್ನು ತೆಗೆದುಕೊಳ್ಳುವುದೇ ಇನ್ ವೆಸ್ಟ್ ಮೆಂಟ್. ಒಮಿನಿಯಂಥ ಗಾಡಿಯನ್ನು ತೆಗೆದುಕೊಳ್ಳಬೇಕು ಸೆಕೆಂಡ್ ಹ್ಯಾಂಡ್ ಗಾಡಿಯನ್ನು ತೆಗೆದುಕೊಳ್ಳಬೇಕು. ಗಾಡಿಗೆ 50,000-1 ಲಕ್ಷ ಹಣವನ್ನು ಖರ್ಚು ಮಾಡಬೇಕು. ನಂತರ ಕಮರ್ಷಿಯಲ್ ಸ್ಟೋವ್ ಬೇಕಾಗುತ್ತದೆ ಅದಕ್ಕೆ 1,500ರೂ ಇರುತ್ತದೆ, ಕಮರ್ಷಿಯಲ್ ಗ್ಯಾಸ್ 3000ರೂ ಇರುತ್ತದೆ. ಪಾತ್ರೆಗಳು ಮುಖ್ಯವಾಗಿದೆ ತವಾಗಳು, ರಿಯುಸೇಬಲ್ ಪ್ಲೇಟ್ಸ್ ಗಳು, ಲೋಟಗಳು, ಡಬ್ಬಿಗಳನ್ನು, 1-2 ಹಾಟ್ ಬಾಕ್ಸ್ ಗಳು ಬೇಕಾಗುತ್ತದೆ. ನಂತರ ನೀರಿನ ಕ್ಯಾನ್, ಕ್ಲೀನ್ ಮಾಡಲು ಬಟ್ಟೆ, ಹ್ಯಾಂಡ್ ಗ್ಲೌಸ್ ಇತರೆ ಅಸೆಸರಿಸ್ ಎನ್ನುವರು ಇದಕ್ಕೆ 2000ರೂ ಬೇಕಾಗುತ್ತದೆ. ನಂತರ ಫುಡ್ಐಟಮ್ಸ್ ಗೆ 5,000ರೂ ಬೇಕಾಗುತ್ತದೆ. ನಂತರ ಪ್ರತ್ಯೇಕವಾಗಿ ಸ್ವಲ್ಪ ಕ್ಯಾಶ್ ಬೇಕಾಗುತ್ತದೆ. 1,500 ರೂ ಇಟ್ಟುಕೊಂಡರೆ ಸಾಕು. ಒಟ್ಟೂ 20,000ರೂದಲ್ಲಿ ಮೊಬೈಲ್ ಕ್ಯಾಂಟೀನ್ ಮಾಡಬಹುದು ಗಾಡಿ ಇದ್ದರೆ ಒಳ್ಳೆಯದು. ಮುನ್ಸಿಪಲ್ ಕಾರ್ಪೋರೇಷನ್ ಅಥವಾ ಗ್ರಾಮ ಪಂಚಾಯತ್ ದಿಂದ ಲೈಸೆನ್ಸ್ ಬೇಕಾಗುತ್ತದೆ. ಮೂವಿಂಗ್ ಹೋಟೆಲ್ ಸಂಬಂಧಿಸಿ ಲೈಸೆನ್ಸ್ ಕೊಡಲಾಗುತ್ತದೆ. ಇದರ ಲಾಭ ನೋಡುವುದಾದರೆ ಸಿಟಿಯಲ್ಲಿ ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟ ಇಟ್ಟರೆ ವೆಜ್ ಮತ್ತು ನಾನ್ ವೆಜ್ ಇದ್ದರೆ 2000-4000ರೂ ದವರೆಗೆ ಲಾಭ ಬರುತ್ತದೆ. ಸಣ್ಣ ಊರುಗಳಲ್ಲಿ 1-2000ರೂ ಲಾಭ ಸಿಗುತ್ತದೆ. ಮದ್ಯಾಹ್ನ ಊಟ ಮತ್ತು ಚಾಟ್ಸ್ ಇದ್ದರೆ ಸಿಟಿಗಳಲ್ಲಿ 2000-4000ರೂ ಲಾಭ ಸಿಗುತ್ತದೆ. ಚಿಕ್ಕ ಊರುಗಳಲ್ಲಿ 2000-3000ರೂ ಲಾಭ ಬರುತ್ತದೆ. ಫಾಸ್ಟ್ ಫುಡ್ ಮಾಡಿದರೆ ಸಿಟಿಗಳಲ್ಲಿ 4,000ರೂ ಅಥವಾ ಅದಕ್ಕಿಂತ ಹೆಚ್ಚು ಲಾಭ ದೊರೆಯುತ್ತದೆ. ಈ ಮಾಹಿತಿಯನ್ನು ಮೊಬೈಲ್ ಕ್ಯಾಂಟೀನ್ ಮಾಡುವ ಆಸಕ್ತಿಇರುವವರಿಗೆ ಕಳುಹಿಸಿ.