ಹಣದ ಬಗ್ಗೆ ಚಾಣಿಕ್ಯ ಹೇಳಿದ ಚಾಲಾಕಿ ಮಾತು ನೋಡಿ

0 1

ಆಚಾರ್ಯ ಚಾಣಕ್ಯ ತಮ್ಮ ಅರ್ಥಶಾಸ್ತ್ರ ಗ್ರಂಥದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಅದರಲ್ಲಿ ಹಣದ ಮಹತ್ವ, ಹಣವನ್ನು ಗಳಿಸುವುದು ಹೇಗೆ ಬಳಸುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ. ಚಾಣಕ್ಯ ಅವರು ಹಣದ ಬಗ್ಗೆ ತಮ್ಮ ಅರ್ಥಶಾಸ್ತ್ರದಲ್ಲಿ ಹೇಳಿದ್ದಾರೆ. ಹಣವನ್ನು ಗಳಿಸುವುದು ಹೇಗೆ ಗಳಿಸಿದ ಹಣವನ್ನು ಬಳಸುವುದು ಹೇಗೆಂದು ತಿಳಿಸಿದ್ದಾರೆ ಅದೇನೆಂದರೆ ಶ್ರೀಮಂತರಿಗೆ ಆಪತ್ಕಾಲದ ಅರಿವು ಆಗದು ಎಂದು ಹೇಳಿದ್ದಾರೆ. ಉದಾಹರಣೆಗೆ ಕೊರೋನ ಬಂದ ಸಮಯದಲ್ಲಿ ಬಡವರಿಗೆ ಸಮಸ್ಯೆ ಆಯಿತೆ ಹೊರತು ಶ್ರೀಮಂತರಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಹಣವಿದ್ದರೆ ಎಂತಹ ಆಪತ್ಕಾಲವನ್ನು ಎದುರಿಸಬಹುದು ಎಂದು ಅವಾಗಲೆ ಚಾಣಕ್ಯ ತಿಳಿಸಿದ್ದರು ನಾವು ಅದನ್ನು ಈಗ ನೋಡುತ್ತಿದ್ದೇವೆ ಚಾಣಕ್ಯ ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.

ಹಣದ ಬಗ್ಗೆ ಚಾಣಕ್ಯ ಹೇಳಿರುವ ಎರಡನೇ ಸಂಗತಿಯೆಂದರೆ ಹಣ ಸಂಗ್ರಹದಲ್ಲಿ ಮಡದಿಯ ಸಹಕಾರ ಇರಬೇಕು. ಪುರುಷ ಕಷ್ಟ ಕಾಲಕ್ಕಾಗಿ ಹಣ ಸಂಗ್ರಹ ಮಾಡಬೇಕು ಅದರ ಜೊತೆಗೆ ಮಡದಿಯ ರಕ್ಷಣೆಯ ಜವಾಬ್ದಾರಿ ವಹಿಸಿ ಆಕೆಯ ಮೂಲಕ ತಾನು ತನ್ನ ಸ್ವಯಂರಕ್ಷಣೆ ಮಾಡಿಕೊಳ್ಳಬೇಕು ಎಂದು ಚಾಣಕ್ಯ ಹೇಳಿದ್ದಾರೆ ಪುರುಷ ಕಷ್ಟ ಕಾಲಕ್ಕಾಗಿ ಹಣ ಸಂಗ್ರಹ ಮಾಡಬೇಕು ಮಡದಿಯ ಸಹಕಾರ ಬಹಳ ಮುಖ್ಯ ಎಂದು ಚಾಣಕ್ಯ ಹೇಳಿದ್ದಾರೆ. ಪುರುಷ ಎಷ್ಟೇ ಹಣ ಗಳಿಸಿದರು ಮಡದಿ ಹಣ ಖರ್ಚು ಮಾಡುವವಳಾದರೆ ಲಕ್ಷ್ಮಿ ಅವರ ಮನೆಯಲ್ಲಿ ಉಳಿಯುವುದಿಲ್ಲ ಮನೆಯಲ್ಲಿರುವ ಮಡದಿಗೆ ಶಿಸ್ತು, ಸಂಯಮ ಇರದಿದ್ದರೆ ಅಂತಹ ಮನೆ ಉದ್ಧಾರವಾಗುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ.

ಚಾಣಕ್ಯ ಹಣದ ಬಗ್ಗೆ ಮೂರನೇ ಸಂಗತಿ ತಿಳಿಸಿದ್ದಾರೆ ಹಣವಿಲ್ಲದವನ ಬಾಳು ನಿಷ್ಪ್ರಯೋಜಕ ಎಂದು ಚಾಣಕ್ಯ ಹೇಳಿದ್ದಾರೆ ಹಣದ ಮಹಿಮೆ ಮಹತ್ತರವಾದದ್ದು ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಹಣವಿಲ್ಲದಿದ್ದರೆ ಸಮಾಜದಲ್ಲಿ ಒಳ್ಳೆಯ ಸ್ಥಾನವಿರುವುದಿಲ್ಲ ಹೆಣಕ್ಕೆ ಸಮಾನ ಎಂದು ಚಾಣಕ್ಯ ಹೇಳಿದ್ದಾರೆ. ಅವರು ಮನುಷ್ಯ ತನ್ನ ಹೆಚ್ಚಿನ ಜೀವಿತ ಅವಧಿಯನ್ನು ವಿದ್ಯೆ, ಜ್ಞಾನ ಗಳಿಸಲು ಬಳಸಬೇಕು ಉಳಿದ ಸಮಯವನ್ನು ಹಣ ಗಳಿಸಲು ಮೀಸಲಿಡಬೇಕು. ಹಣವಿಲ್ಲವೆಂದರೆ ಯಾರೂ ಮರ್ಯಾದೆ ಕೊಡುವುದಿಲ್ಲವೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ ಇದು ಅಂದಿಗೂ ಪ್ರಸ್ತುತ ಇಂದಿಗೂ ಪ್ರಸ್ತುತವಾಗಿದೆ.

ಚಾಣಕ್ಯ ಹೇಳಿದ ಹಣದ ಬಗೆಗಿನ ನಾಲ್ಕನೇ ಸಂಗತಿಯೆಂದರೆ ಹಣವಿಲ್ಲದವನನ್ನು ಸೂಳೆಯು ಧಿಕ್ಕರಿಸುವಳು. ರಾಜನಾಗಲಿ, ಸಿರಿವಂತನಾಗಲಿ ಹಣವಿದ್ದರೆ ಮಾತ್ರ ವೇಶ್ಯೆ ಸಮ್ಮಾನ ಕೊಡುತ್ತಾಳೆ. ಹಣವಿಲ್ಲದವನು ಬಂದರೆ ಸೂಳೆ ತಿರಸ್ಕರಿಸುತ್ತಾಳೆ ಫಲವನ್ನೆ ನೀಡದ ಮರದ ಬಳಿ ಪ್ರಾಣಿ, ಪಕ್ಷಿಗಳಾಗಲಿ, ಸ್ತ್ರೀ, ಪುರುಷರಾಗಲಿ ಸುಳಿಯುವುದಿಲ್ಲ ಅದೇ ರೀತಿ ಮನುಷ್ಯನ ಬಳಿ ಹಣವಿದ್ದರೆ ಮಾತ್ರ ಬಂಧುಗಳು, ಮಿತ್ರರು ಬರುತ್ತಾರೆ ಹಣ ಪಡೆಯಲು ಹಣವಿಲ್ಲವೆಂದರೆ ಮನುಷ್ಯ ಒಬ್ಬಂಟಿಯಾಗಿರುತ್ತಾನೆ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಹಣ ಮನುಷ್ಯನಿಗೆ ಬಹಳ ಮುಖ್ಯವಾಗಿದೆ.

Leave A Reply

Your email address will not be published.