ದೇಶದ ಬೆನ್ನೆಲುಬು ನಮ್ಮ ರೈತ. ಅಂತಹ ರೈತನ ಜೀವನಾಡಿ ಗದ್ದೆ, ತೋಟ, ಬೆಳೆಗಳು. ರೈತರಿಗೆ ಕರ್ನಾಟಕ ರಾಜ್ಯ ತೋಟಗಾರಿಕಾ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ ನಿರ್ಮಿಸಲು ರೈತರಿಗೆ ಸಹಾಯಧನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೆಲಮಟ್ಟಕಿಂತ ಕೆಳಗೆ ರಚಿಸುವ ವೈಯಕ್ತಿಕ ಸಮುದಾಯ ನೀರು ಸಂಗ್ರಹಣಾ ಘಟಕದ ಸಾಮರ್ಥ್ಯ 4000, 6000, ಹಾಗೂ 8000 ಘನ ಮೀಟರ್ ಅಳತೆಯ ಸಾಮರ್ಥ್ಯ ಸಂಗ್ರಹಣಾ ಘಟಕಕ್ಕೆ ಶೇಕಡಾ 50ರಷ್ಟು ಅಂದರೆ ಗರಿಷ್ಠ 5 ಲಕ್ಷದಷ್ಟು ಪ್ರತಿ ಫಲಾನುಭವಿಗೆ ಸಹಾಯಧನ ನೀಡಲಾಗುವುದು. ಫಲಾನುಭವಿಯು ಪ್ರತಿ 4000 ಘ.ಮೀ. ಅಳತೆಗೆ ಕನಿಷ್ಠ 1 ಹೆಕ್ಟೇರ್ ಜಮೀನು ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಕಡ್ಡಾಯವಾಗಿದೆ. ಅದೇರೀತಿ 6000ಘ.ಮೀ.ಅಳತೆ ಯಲ್ಲಿ ಕನಿಷ್ಠ 2 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಗಳನ್ನು ಬೆಳೆಯಬೇಕಾಗುತ್ತದೆ. ಹಾಗೂ 8000 ಘ.ಮೀ. ಗೆ ಕನಿಷ್ಠ 4 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಲೆಗಳನ್ನು ಬೆಳೆಯುವುದು ಕಡ್ಡಾಯವಾಗಿರುತ್ತದೆ.
ನೆಲಮಟ್ಟಕ್ಕಿಂತ ಮೇಲೆ ಸ್ಟೀಲ್ ಟ್ಯಾಂಕ್ ನಿರ್ಮಿಸಲಾಗುತ್ತದೆ. ವಯಕ್ತಿಕ ಹಾಗೂ ಸಮುದಾಯ ಸಾಮರ್ಥ್ಯ 1,00,000 , 2,00,000, ಹಾಗೂ 5,00,000 ಲೀಟರ್ ಗಳಷ್ಟು ನೀರಿನ ಸಾಮರ್ಥ್ಯ ಹೊಂದಿರುತ್ತದೆ. ಫಲಾನುಭವಿಗಳಿಗೆ ಒಂದು ನೀರಿನ ಘಟಕಕ್ಕೆ ಶೇ. 50 ರಂತೆ ಗರಿಷ್ಠ 7,50,000 ರೂಪಾಯಿಗಳ ವರೆಗೂ ಸಬ್ಸಿಡಿ ಅಂದರೆ ಸಹಾಯಧನ ನೀಡಲಾಗುತ್ತದೆ.
ಫಲಾನುಭವಿಯು ಪ್ರತಿ ಒಂದು ಲಕ್ಷ ಲೀಟರ್ ಗೆ ಕನಿಷ್ಠ 1 ಹೆಕ್ಟೇರ್ ಜಮೀನು ಪ್ರದೇಶವಿರಬೇಕು. ಎರಡು ಲಕ್ಷ ಲೀಟರ್ ಗೆ ಕನಿಷ್ಠ 2 ಹೆಕ್ಟೇರ್ ಜಮೀನನ್ನು ಹೊಂದಿರಬೇಕು. ಹಾಗೂ ಐದು ಲಕ್ಷ ಲೀಟರ್ ಗೆ ಕನಿಷ್ಠ 4 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯಲ್ಲಿ ಲಾಭ ಪಸೆಯಲು ಇಚ್ಚಿಸುವಂತಹ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಮೈಸೂರು ಜಿಲ್ಲೆಯಲ್ಲಿ ಇರುವಂತಹ ಜಿಲ್ಲಾ ಪಂಚಾಯತ್ ತೋಟಗಾರಿಕಾ ಇಲಾಖೆಯಲ್ಲಿ ಅರ್ಜಿಗಳನ್ನು ಪಡೆದು ಸಂಬಂಧಿಸಿದ ದಾಖಲೆಗಳನ್ನು ಅಟ್ಯಾಚ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು. ಮೈಸೂರಿನ ರೈತರಾಗಿದ್ದರೆ ಹಿರಿಯ ಸಹಾಯಕ ತೋಟಗಾರಿಕೆ ಕಛೇರಿಯ 0821-2430450 ಈ ನಂಬರ್ ಗೆ ಕರೆಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.ಹಾಗೇಯೇ ಎಚ್.ಡಿ. ಕೋಟೆಯಲ್ಲಿರುವ ರೈತರು 082258-255262..ಹುಣಸೂರಿನ ರೈತರು 08222-252447 ಈ ನಂಬರ್ ಗೆ ಕರೆಮಾಡಿ.
ಕೆ.ಆರ್. ನಗರದ ರೈತರು 08223-262792 ಈ ನಂಬರ್ ಗೆ ಕರೆಮಾಡಿ.
ನಂಜನಗೂಡಿನ ರೈತರು 08221-226201 ಈ ನಂಬರ್ ಗೆ ಕರೆಮಾಡಿ.
ಪಿರಿಯಾಪಟ್ಟಣದ ರೈತರು 08223-273535 ಈ ನಂಬರ್ ಗೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದು. ಹಾಗೂ ಟಿ. ನರಸೀಪುರದ ರೈತರು 08227-260086 ಈ ನಂಬರ್ ಗೆ ಕರೆಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದೆಂದು ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.