ತಲೆಯಲ್ಲಿ ಹೇನು ಉಂಟಾಗುವುದು ಇದು ಸ್ತ್ರೀಯರು ಪುರುಷರು ಮತ್ತು ಮಕ್ಕಳಿಂದ ಹಿಡಿದು ಎಲ್ಲರಿಗೂ ಉಂಟಾಗುವ ಸಮಸ್ಯೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಆದರೆ ನಾವು ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಬಳಸಿಕೊಂಡು ತಲೆಯಲ್ಲಿ ಉಂಟಾಗುವ ಹೇನಿನಿಂದ ಮುಕ್ತಿ ಪಡೆಯಬಹುದು. ಮನೆಯಲ್ಲಿ ಯಾವ ರೀತಿ ನಾವು ಹೇನಿನಿಂದ ಮುಕ್ತಿ ಪಡೆಯಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಟಿಪ್ ಗೆ ನಮಗೆ ಮುಖ್ಯವಾಗಿ ಬೇಕಾಗಿರುವುದು ಕರ್ಪೂರ. ಒಂದು ಬೌಲ್ ನಲ್ಲಿ ನಾಲ್ಕು ಕರ್ಪೂರವನ್ನು ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು. ಕರ್ಪೂರದ ವಾಸನೆ ನಮಗೇನು ಹಿತವಾಗಿರುತ್ತದೆ ಆದರೆ ಹೇನುಗಳಿಗೆ ಕರ್ಪೂರದ ವಾಸನೆ ಆಗುವುದಿಲ್ಲ. ಕರ್ಪೂರದ ವಾಸನೆಗೆ ಹೇನು ಉಸಿರುಗಟ್ಟಿ ಸಾಯುತ್ತವೆ. ಕರ್ಪೂರದಲ್ಲಿ ಇರುವಂತಹ ಆಂಟಿ ಇನ್ಫ್ಲೋಮೇಟರಿ ಗುಣಗಳು ಹಾಗೂ ಆಂಟಿ ಫಂಗಲ್ ಗುಣಗಳು ಇರುವುದರಿಂದ ಇದು ಹೇನು ಗಳನ್ನು ನಿವಾರಣೆ ಮಾಡಲು ಸಹಾಯಕಾರಿ ಆಗಿರುತ್ತದೆ. ನಂತರ ಪುಡಿ ಮಾಡಿಕೊಂಡ ಕರ್ಪೂರಕ್ಕೆ ಅರ್ಧ ಟೇಬಲ್ ಸ್ಪೂನ್ ನಷ್ಟು ನಿಂಬೆರಸವನ್ನು ಸೇರಿಸಬೇಕು. ನಿಂಬೆಹಣ್ಣಿನಲ್ಲಿ ಕೂಡ ಹೇನನ್ನು ಓಡಿಸುವ ಶಕ್ತಿ ಇರುತ್ತದೆ. ನಂತರ ಇದಕ್ಕೆ ಒಂದೆರಡು ಟೇಬಲ್ ಸ್ಪೂನ್ ನಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮೂರು ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಕರ್ಪೂರ ಎಣ್ಣೆಯಲ್ಲಿ ಕರಗುವವರೆಗೂ ಮಿಕ್ಸ್ ಮಾಡಬೇಕು.
ಈ ಮಿಶ್ರಣವನ್ನು ಐದು ನಿಮಿಷ ಹಾಗೆಯೇ ಬಿಟ್ಟು, ತಲೆಗೆ ಸ್ನಾನ ಮಾಡುವ ಅರ್ಧಗಂಟೆ ಮೊದಲು ತಲೆಗೆ ಪ್ರತಿಯೊಂದು ಬುಡಕ್ಕೆ ಹಚ್ಚಬೇಕು. ಇದನ್ನು ತಲೆಗೆ ಹಚ್ಚಿ ಆದನಂತರ 20ರಿಂದ 30 ನಿಮಿಷ ಮಾತ್ರ ಬಿಡಬೇಕು ಹೆಚ್ಚು ಹೊತ್ತು ಬಿಡಬಾರದು ಯಾವುದೇ ಹರ್ಬಲ್ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಬಹುದು. ತಲೆ ಸ್ನಾನ ಆದ ನಂತರ ಒಂದು ಬಾರಿ ಕೂದಲನ್ನು ಬಾಚಿ ಕೊಳ್ಳುವುದರಿಂದ ಸತ್ತ ಹೇನುಗಳು ಕೆಳಗೆ ಬೀಳುತ್ತವೆ. ಹೀಗೆ ಮಾಡುವುದರಿಂದ ತಲೆಯಲ್ಲಿರುವ ಹೇನು ಹಾಗೂ ಅದರ ಮೊಟ್ಟೆಗಳೂ ಸಹ ನಿವಾರಣೆ ಆಗುವುದು. ಇಲ್ಲಿ ಬಳಸಿದ ಪದಾರ್ಥಗಳಿಂದ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಇರುವುದರಿಂದ ಯಾರೂ ಬೇಕಿದ್ದರೂ ಇದನ್ನು ಬಳಸಬಹುದು.