ಮನುಷ್ಯನ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಏನಾದರು ವ್ಯತ್ಯಾಸ ಆದ್ರೂ ಅನಾರೋಗ್ಯ ಸಮಸ್ಯೆ ಕಾಡುತ್ತದೆ, ಹಾಗಾಗಿ ಆರೋಗ್ಯದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ದೇಹದಲ್ಲಿನ ರಕ್ತ ಕಣಗಳು ಕಡಿಮೆ ಪ್ರಮಾಣದಲ್ಲಿಇದ್ದರೆ ರಕ್ತ ಹೀನತೆ ಸಮಸ್ಯೆ ಕಾಡುತ್ತದೆ ಹಾಗೂ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತದೆ. ಆದ್ದರಿಂದ ನಾವುಗಳು ಪ್ರತಿದಿನ ಸೇವನೆ ಮಾಡುವಂತ ಆಹಾರಗಳನ್ನು ಉತ್ತಮ ರೀತಿಯಲ್ಲಿ ಸೇವನೆ ಮಾಡಬೇಕು ಹಾಗೂ ಪೌಷ್ಟಿಕಾಂಶ ಭರಿತವಾದ ಹಣ್ಣು ತರಕಾರಿಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ರಕ್ತಕಣಗಳು ವೃದ್ಧಿಯಾಗುತ್ತದೆ, ಇದರ ಜೊತೆಗೆ ದೇಹದ ಹಲವು ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.
ಹಾಗದರೆ ಆರೋಗ್ಯದ ದೃಷ್ಟಿಯಿಂದ ಯಾವೆಲ್ಲ ರೀತಿಯ ಆಹಾರ ಸೇವನೆ ಮಾಡಬೇಕು ಅನ್ನೋದನ್ನ ಹೇಳುವುದಾದರೆ. ಹಣ್ಣು ತರಕಾರಿಗಳು ಹಾಗೂ ಡ್ರೈ ಫುಡ್ಸ್ ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸಿ ಕೊಡುತ್ತದೆ. ಅಷ್ಟೇ ಅಲ್ಲದೆ ವೈದ್ಯರು ಕೂಡ ಈ ರೀತಿಯ ಹಣ್ಣು ತರಕಾರಿಗಳನ್ನು ತಿನ್ನಲು ಹೇಳುತ್ತಾರೆ. ದೇಹಕ್ಕೆ ವಿಟಮಿನ್ ಹಾಗೂ ಪೋಷಕಾಂಶಗಳನ್ನು ಒದಗಿಸುವಂತ ಈ ಬಿಟ್ರೋಟ್ ಜ್ಯುಸ್ ಮಾಡಿ ಸೇವನೆ ಮಾಡುವುದು ಸೂಕ್ತ. ಇನ್ನು ಇದನ್ನು ಅಡುಗೆಗೆಳಲ್ಲಿ ಬಳಸುವುದು ಕೂಡ ಅಷ್ಟೇ ಪ್ರಾಮುಖ್ಯವಾಗಿದೆ.
ಇನ್ನು ಹಸಿ ತರಕಾರಿಗಳಾದ ಎಲೆಕೋಸು ಮೂಲಂಗಿ ಹೂವು ಕೋಸು ಗೆಣಸು ಹಸಿ ತರಕಾರಿಗಳು ದೇಹಕ್ಕೆ ರಕ್ತಕಣಗಳನ್ನು ವೃದ್ಧಿ ಮಾಡುತ್ತದೆ. ಅಷ್ಟೇ ಅಲ್ದೆ ದೇಹಕ್ಕೆ ಬೇಕಾಗುವಂತ ಪೋಷಕಾಂಶಗಳನ್ನು ಒದಗಿಸಿ ಕೊಡುತ್ತದೆ. ಮನುಷ್ಯನ ದೇಹದ ಮೂಳೆಗಳು ಗಟ್ಟಿಯಾಗಿ ಬೆಳೆಯಲು ಸಹ ಇವುಗಳು ಸಹಕಾರಿಯಾಗಿದೆ, ಹಾಗಾಗಿ ಪ್ರತಿದಿನದ ಆಹಾರ ಶೈಲಿಯಲ್ಲಿ ಹಣ್ಣು ತರಕಾರಿ ಸೊಪ್ಪುಗಳನ್ನು ಬಳಸಿ ಅಡುಗೆ ಮಾಡುವುದು ಅತಿ ಉತ್ತಮವಾಗಿದೆ.
ಡ್ರೈ ಫುಡ್ಸ್ ಒಣ ಅಂಜೂರ ಬಾದಾಮಿ ಗೋಡಂಬಿ ಪಿಸ್ತಾ ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುವುದು ಹಾಗೂ ದೇಹದ ಬೆಳವಣಿಗೆಯನ್ನು ನೀಡುವಂತ ಹಣ್ಣುಗಳು ಸಪೋಟ ಕಿತ್ತಳೆಹಣ್ಣು ಸೇಬು ಇವುಗಳು ಆರೋಗ್ಯದ ನಿಧಿ ಅಂತಲೇ ಕರೆಸಿಕೊಳ್ಳುತ್ತವೆ ಹಾಗಾಗಿ ಇವುಗಳನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ.