ಎಲ್ಲಾ ಹಣ್ಣುಗಳಿಂದಲೂ ಸಾಕಷ್ಟು ಉಪಯೋಗವಿದೆ. ಯಾವ ಹಣ್ಣು ಯಾವರೀತಿ ಉಪಯುಕ್ತ ಎಂದು ತಿಳಿದಿರುವುದಿಲ್ಲ ಕರಬೂಜ ಹಣ್ಣು ತಿನ್ನೋದ್ರಿಂದ ಸಾಕಷ್ಟು ಲಾಭವಿದೆ. ಕರಬೂಜ ಹಣ್ಣಿನ ಉಪಯೋಗವನ್ನು ಈ ಲೇಖನದ ಮೂಲಕ ತಿಳಿಯೋಣ.
ಹೊರಗಿನಿಂದ ಬೂದು ಹಸಿರು ಮಿಶ್ರಿತ ಸಿಪ್ಪೆ ಹೊಂದಿದ್ದು ಒಳಗಿನ ತಿರುಳು ಕೇಸರಿ ಅಥವಾ ಕಿತ್ತಳೆ ಬಣ್ಣ ಹೊಂದಿದ ಕೇಸರಿ ಕರಬೂಜ ಇತರೆ ಹಣ್ಣಿನಂತೆ ಸಿಹಿಯಾಗಿದ್ದು ಹೆಚ್ಚು ನೀರಿನಂಶ ಹೊಂದಿರುತ್ತದೆ. ಈ ಹಣ್ಣಿನ ಸೇವನೆಯಿಂದ ಎದುರಾಗುವ ನಿರ್ಜಲೀಕರಣವನ್ನ ಬಹುಬೇಗನೆ ಪರಿಹರಿಸಿಕೊಳ್ಳಬಹುದು. ಈ ಹಣ್ಣಿನಲ್ಲಿ ನೀರಿನಂಶ ಪೋಷಕಾಂಶ ಹೆಚ್ಚಿದ್ದರೂ ಕ್ಯಾಲರಿ ಕಡಿಮೆ ಇರುವುದರಿಂದ ಕೊಬ್ಬು ಹೆಚ್ಚಿಸದೇ ದೇಹದ ಆರೋಗ್ಯವನ್ನು ಈ ಹಣ್ಣಿನಿಂದ ಕಾಪಾಡಿಕೊಳ್ಳಬಹುದು. ದಿನಕ್ಕೊಮ್ಮೆ 1 ಗ್ಲಾಸ್ ಕರಬೂಜ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕರಗುವ ನಾರು, ಬೀಟಾ ಕೆರೋಟಿನ್, ಕಬ್ಬಿಣ, ಪೋಲಿಕಾಮ್ಲ, ವಿಟಮಿನ್ A ಮತು C ಜೊತೆಗೆ ಅನೇಕ ಪೋಷಕಾಂಶಗಳು ದೊರೆಯುತ್ತದೆ. ಈ ಹಣ್ಣು ರುಚಿಕರವಾಗಿರುವುದರ ಜೊತೆಗೆ ಅಡುಗೆಗೆ ಬಳಸುವುದರಿಂದ ಪರಿಮಳಯುಕ್ತವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಈ ಹಣ್ಣಿನ ಸೇವನೆಯಿಂದ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಿಕೊಳ್ಳಬಹುದು. ಇದರಲ್ಲಿರುವ ಪೊಟ್ಯಾಷಿಯಂ ಪ್ರಮಾಣ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೆ ಇದರಲ್ಲಿರುವ ಪೊಟ್ಯಾಷಿಯಂ ಹೃದಯದಲ್ಲಿರುವ ಕ್ಷಮತೆಯನ್ನು ಹೆಚ್ಚಿಸಿ ಅದರಲ್ಲಿರುವ ಅಡೋನಿಸಿಲ್ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವ ಗುಣ ಇರುವುದರಿಂದ ರಕ್ತ ತೆಳುವಾಗಿರಲು ಮತ್ತು ರಕ್ತ ನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುವುದರ ಮೂಲಕ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದನ್ನು ಸೇವಿಸುವುದರಿಂದ ಮಧುಮೇಹವು ನಿಯಂತ್ರಣಕ್ಕೆ ಬರುತ್ತದೆ ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಸಮತೋಲಿತ ಪ್ರಮಾಣದಲ್ಲಿ ಇರಿಸುತ್ತದೆ. ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಕೊಲೆಸ್ಟ್ರಾಲನ್ನು ಕಡಿಮೆ ಮಾಡುತ್ತದೆ. ಹೊಟ್ಟೆಯಲ್ಲಿರುವ ಹುಣ್ಣುಗಳನ್ನು ಕಡಿಮೆಮಾಡಿ ಮಲಬದ್ಧತೆಯಿಂದ ರಕ್ಷಿಸುತ್ತದೆ. ಕ್ಯಾನ್ಸರ್ ನಿಂದ ರಕ್ಷಣೆ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಬಿಟಾ ಕೆರೋಟಿನ್ ಅಂಶ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ. ಗರ್ಭಿಣಿಯರಿಗೆ ಇದು ಉತ್ತಮವಾಗಿದೆ. ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರೆಯ ಬದಲು ಈ ಹಣ್ಣನ್ನು ಸೇವಿಸುವುದರಿಂದ ಮೆದುಳಿಗೆ ಸಾಕಷ್ಟು ಆಮ್ಲಜನಕ ದೊರೆತು ಮೆದುಳು ಒತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಸ್ನಾಯುಗಳಲ್ಲಿನ ಕೊಲೆಜಿನ್ ಕಣವನ್ನು ಹೆಚ್ಚಿಸುತ್ತದೆ ಇದರಿಂದ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗೆ ಕೇಸರಿ ಕರಬೂಜ (ಮಸ್ಕ್ ಮೆಲನ್) ಸೇವನೆಯಿಂದ ಹಲವಾರು ರೀತಿಯಲ್ಲಿ ಉಪಯೋಗವಿದೆ.