ಹಿಂದಿನ ಕಾಲದಲ್ಲಿ ಬಹಳಷ್ಟು ಜನರ ಮನೆಯಲ್ಲಿ ತಾಮ್ರದ ತಂಬಿಗೆಗಳು ಇರುತ್ತಿದ್ದವು, ಇದರಿಂದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದರು. ಅಷ್ಟೇ ಅಲ್ದೆ ಆರೋಗ್ಯಕ್ಕೂ ಕೂಡ ತಾಮ್ರದ ತಂಬಿಗೆ ಉತ್ತಮ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತಿತ್ತು, ಆದ್ದರಿಂದ ಹಿಂದಿನ ಕಾಲದಲ್ಲಿ ಮನೆಯಲ್ಲಿ ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುತ್ತುದ್ದರು ಹಾಗೂ ಮನೆಯಲ್ಲಿ ತಾಮ್ರದ ಹಂಡೆಯಲ್ಲಿ ನೀರು ಶೇಖರಣೆ ಮಾಡುತ್ತಿದ್ದರು. ಮನೆಯಲ್ಲಿ ತಾಮ್ರದ ತಂಬಿಗೆ ಇದ್ರೆ ಮನೆಯ ವಾಸ್ತು ದೋಷ ಕೂಡ ನಿವಾರಣೆಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ, ಮನೆಯಲ್ಲಿನ ಕೆಟ್ಟ ಶಕ್ತಿಗಳು ತೊಲಗಿ ಮನೆಯಲ್ಲಿ ಯಾವಾಗಲು ಪಾಸಿಟಿವ್ ಎನರ್ಜಿಯನ್ನು ಪಸರಿಸುವಂತೆ ಮಾಡುತ್ತದೆ ಈ ತಾಮ್ರದ ತಂಬಿಗೆ. ಹಾಗಾದರೆ ಇದನ್ನು ಹೇಗೆ ಬಳಸಬೇಕು ಅನ್ನೋದನ್ನ ತಿಳಿಯೋಣ.
ಇತ್ತೀಚಿನ ದಿನಗಳಲ್ಲಿ ಆಧುನಿಕ ಜೀವನ ಶೈಲಿಯ ಪ್ರಭಾವದಿಂದ ಮನೆಯಲ್ಲಿ ತಾಮ್ರದ ತಂಬಿಗೆಗಳು ಮರೆಯಾಗಿವೆ. ಮನೆಯಲ್ಲಿ ತಾಮ್ರದ ತಂಬಿಗೆಯನ್ನು ಬಳಸುವುದಾದರೆ ಪ್ರತಿದಿನ ಅದನ್ನು ಒಳಗೆ ಹೊರಗೆ ಚನ್ನಾಗಿ ಶುದ್ಧವಾಗಿ ತೊಳೆಯ ಬೇಕು, ಮನೆಯಲ್ಲಿನ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಲು ಪ್ರತಿದಿನ ಶುಭ್ರವಾದ ಗಂಗಾ ಜಲವನ್ನು ತಾಮ್ರದ ತಂಬಿಗೆಯಲ್ಲಿ ಹಾಕಿ ಆ ತಂಬಿಗೆಯನ್ನ ಒಂದು ವಿಳ್ಳೆದೆಯ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಅರಿಶಿನ ಕುಂಕುಮ, ಹೂವು ಹಾಗೂ ಒಂದು ರೂಪಾಯಿಯ ನಾಣ್ಯ ಪಚ್ಚೆ ಕರ್ಪುರ ಹಾಕಿ. ಇದಾದ ಮೇಲೆ ಮನೆಯ ಪ್ರದಾನ ಬಾಗಿಲು ಅಂದರೆ ಮುಖ್ಯ ದ್ವಾರದ ಹಿಂದೆ ಇಡಬೇಕು ಇದರಿಂದ ಮನೆಯಲ್ಲಿನ ಕೆಟ್ಟ ಶಕ್ತಿಗಳು ನಿವಾರಣೆಯಾಗಿ ಮನೆಯ ದೋಷ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಯಾವಾಗಲು ನೆಮ್ಮದಿಯ ವಾತಾವರಣ ನಿರ್ಮಾಣವಾಗುವುದು.
ಅಷ್ಟೇ ಅಲ್ದೆ ದೃಷ್ಟಿ ದೋಷ ನಿವಾರಣೆಯಾಗಿ ಮನೆಯವರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸುವುದು ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ತರದ ಸಮಸ್ಯೆಗಳು ಹಾಗೂ ಮಾಡುವಂತ ಕೆಲಸದಲ್ಲಿ ವಿಳಂಬ ಶುಭ ಕಾರ್ಯದಲ್ಲಿ ಅಡೆ ತಡೆ ಏನೇ ಇದ್ದರು ಶ್ರೀ ಗುರೂಜಿಯವರ ಮೂಲಕ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ಪಂಡಿತ್ ಎಂಪಿ ಶರ್ಮ 9845559 493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ.