ಜಮೀನಿನಲ್ಲಿ ಕಳೆ ಹುಟ್ಟುವುದು ಸರ್ವೇ ಸಾಮಾನ್ಯ. ಆದರೆ ಜಮೀನಿನಲ್ಲಿ ಕಳೆ ಬೆಳೆದಿದ್ದರೆ ಬೆಳೆಗಳನ್ನು ಬೆಳೆಯುವುದು ಸ್ವಲ್ಪ ಕಷ್ಟ. ಕಳೆ ತೆಗಿಸೋಕೆ ಅಂತಲೇ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗುವುದು. ಆದರೆ ಯಾರಿಗೂ ಯಾವುದಕ್ಕೂ ಬೇದವಾದಂತಹ ತೋಟದ ಕಳೆ ಇಲ್ಲಿ ಒಬ್ಬ ರೈತನಿಗೆ ಅದೇ ವರವಾಗಿದೆ. ಆ ರೈತ ಯಾರು? ಕಳೆ ಹೇಗೆ ವರವಾಗಿ ಪರಿಣಮಿಸಿತು ಎನ್ನುವ ಎಲ್ಲಾ ವಿಷಯಗಳ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.
ಚಿಕ್ಕಮಂಗಳೂರು ಜಿಲ್ಲೆಯ ನೈಸರ್ಗಿಕ ಕೃಷಿಕರಾದ N S ಚಂದ್ರಶೇಖರ್ ಅವರು ಪ್ರಾಯೋಗಿಕ ಮನುಷ್ಯ. ಇವರು ತಮ್ಮ ಹತ್ತಾರು ಎಕರೆ ಕೃಷಿ ಜಮೀನಿನಲ್ಲಿ ಅಡಕೆ , ಕಾಳು ಮೆಣಸು, ತೆಂಗು , ಬಾಳೆ ಹೀಗೆ ಎಲ್ಲ ರೀತಿಯ ವೈವಿಧ್ಯತೆ ಇರುವ ಬೆಳೆಗಳನ್ನು ಬೆಳೆಯುತ್ತಾರೆ. ಇವರಿಗೆ ಕಳೆಗಳು ಇಲ್ಲದೆಯೇ ಇವರಿಗೆ ವರ್ಷದ ಬೆಳೆಗಳನ್ನು ಬೆಳೆಯಲು ಸಾಧ್ಯ ಇಲ್ಲ. ನೈಸರ್ಗಿಕ ಕೃಷಿಗೆ ಈ ಕಳೆಗಳೆ ಒಂದು ವರದಾನ ಎಂದು N S ಚಂದ್ರಶೇಖರ್ ಅವರು ಹೇಳುತ್ತಾರೆ. ಕಳೆಗಳ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆ ಇದೆ. ನಾವು ಬೆಳೆಗಳಿಗೆ ನೀಡುವ ಅಥವಾ ಸಿಂಪಡಿಸುವ ಔಷಧಿಗಳನ್ನು ಅಥವಾ ಪೋಷಕಾಂಶಗಳನ್ನು ಈ ಕಳೆಗಳು ತೆಗೆದುಕೊಳ್ಳುತ್ತವೆ ಇದರಿಂದಾಗಿ ಬೆಳೆಗಳಿಗೆ ಸರಿಯಾಗಿ ಪೋಷಣೆ ನೀಡಿದಂತೆ ಆಗುವುದಿಲ್ಲ ಎಂದು ಕೆಲವುರು ಹೇಳುತ್ತಾರೆ. ಕಳೆಗಳು ಹೆಚ್ಚು ಬೆಳೆದಾಗ ಕ್ರಿಮಿ ಕೀಟಗಳು ಬರುವುದು ಹೆಚ್ಚಾಗಿ ಈ ಕ್ರಿಮಿ ಕೀಟಗಳು ಕ್ರಮೇಣ ಬೆಳೆಗಳನ್ನು ಸಹ ಹಾಳು ಮಾಡುತ್ತವೆ ಹಾಗಾಗಿ ಕಳೆಗಳನ್ನು ತೆಗೆಯಬೇಕು ಎಂದು ಹೇಳುತ್ತಾರೆ. ಇನ್ನೊಂದು ಎಂದರೆ , ಕಳೆಗಳು ಹೆಚ್ಚಾಗಿ ಇರುವುದರಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂದು ಈ ಮೂರು ಕಾರಣಗಳಿಂದಾಗಿ ಕಳೆ ಎಂದರೆ ಬೇಡವಾದ ವಸ್ತು ಎಂದೇ ಪರಿಗಣಿಸಿ ಶತ್ರುಗಳ ತರಾ ನೋಡುತ್ತಾರೆ ಎಂದು ನೈಸರ್ಗಿಕ ಕೃಷಿಕರಾದ N S ಚಂದ್ರಶೇಖರ್ ಅವರು ಹೇಳುತ್ತಾರೆ.
ಇನ್ನೂ ಈ ಕಳೆಯಿಂದ ಪ್ರಯೋಜನ ಏನು ಅಂತ ನೋಡುವುದಾದರೆ, ಕಳೆಗಳು ಬೇಳೆದಷ್ಟು ಪ್ರಯೋಜನ ಹೆಚ್ಚು. ಕಳೆ ಬೆಳೆದು ಬೆಳಕಿನಿಂದ ತನ್ನ ಆಹಾರವನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ. ಇದರಲ್ಲಿ ೬೦ ಭಾಗವನ್ನು ತನ್ನ ಬೆಳವಣಿಗೆಗೆ ಉಪಯೋಗಿಸಿಕೊಂಡು ಇನ್ನುಳಿದ ೪೦ ಭಾಗವನ್ನು ಬೇರಿನ ಮೂಲಕ ಭೂಮಿಗೆ ನೀಡುತ್ತದೆ. ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಬೇಕು ಎನ್ನುವ ಹಾಗೆ ಕಳೆ ಕೂಡಾ ಕೇವಲ ನಾಲ್ಕು ತಿಂಗಳು ಜೀವಿತ ಅವಧಿಯನ್ನು ಹೊಂದಿರುತ್ತದೆ. ಈ ಕಳೆಗಳು ಸತ್ತಾಗ ಅದು ತನ್ನ ಬೆಳವಣಿಗೆಗೆ ಅಂತ ಇಟ್ಟುಕೊಂಡಿರುವ ೬೦ ಭಾಗ ಪೋಷಕಾಂಶ ಕೂಡಾ ಭೂಮಿಗೆ ಸೇರಿ ಹಂಚಿ ಹೋಗುತ್ತದೆ. ಇದರ ಪಳಿಯುಳಿಕೆಗಳು ಭೂಮಿಗೆ ಸೇರಿದಾಗ ಬಯೋ ಮಾಸ್ಕ್ ಉತ್ಪತ್ತಿ ಆಗಿ ಆರ್ಗ್ಯಾನೀಕ್ ಕಾರ್ಬನ್ ನ ಪ್ರಮಾಣ ಹೆಚ್ಚುತ್ತದೆ. ಈ ಕಾರಣಕ್ಕೆ ಕಳೆಗಳು ಹೆಚ್ಚು ಇದ್ದರೆ ಒಳ್ಳೆಯದು ಎನ್ನುತ್ತಾರೆ ಚಂದ್ರಶೇಖರ್ ಅವರು.