ಮಹಾನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಧಾರವಾಹಿಯಲ್ಲಿ ಭೀಮರಾವ್ ಪಾತ್ರದಲ್ಲಿ ನಟನೆ ಮಾಡುತ್ತಿರುವ ಪುಟಾಣಿ ಹುಡುಗ ಯಾರು ಅನ್ನೋದು ನಿಮಗೆ ತಿಳಿದಿದೆಯಾ ಈ ಮುದ್ದು ಹುಡುಗನನ್ನು ಈಗಾಗಲೇ ಸಾಕಶ್ಟೂ ಬಾರಿ ನೋಡಿರುತ್ತೇವೆ. ಆದರೆ ಆ ಪುಟಾಣಿ ಹುಡುಗ ಯಾರೂ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ. ಬಾಬಾ ಸಾಹೇಬ್ ಅಂಬೇಡ್ಕರ್, ತಾನು ನೋವುಂಡು ಸುಖವನ್ನು ಉಣಬಡಿಸಿದ ತ್ಯಾಗಿ. ಶತ ಶತಮಾನಗಳ ತಾರತಮ್ಯವನ್ನು ಅಳಿಸಿಹಾಕುವ ಕನಸು ಕಂಡ ಮಹಾನ್ ಕನಸುಗಾರ. ಅಸಮಾನತೆಯನ್ನು ಅಳಿಸಿ, ಸಮಾನತೆಯ ಚಲ ಕಲಿಸಿದ ಮಹಾ ಗುರು ಸಂವಿಧಾನ ಶಿಲ್ಪಿ, ಭಾರತ
ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್. ಇಂತಹ ಮಹಾನ್ ನಾಯಕನ ಜೀವನವನ್ನು ಆಧರಿಸಿದ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಮಹಾನ್ ನಾಯಕ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಈ ಹೆಸರಿನಲ್ಲಿ ಪ್ರಸಾರ ಆಗುತ್ತಿದೆ. ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಹಾನ್ ನಾಯಕನ ಅಬ್ಬರ ಜೋರಾಗಿದೆ. ಇಲ್ಲಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತ ಇರುವುದು ಮಹಾನ್ ನಾಯಕ ಧಾರವಾಹಿಯಲ್ಲಿ ಬಾಲ ನಟನಾಗಿ ಅಂಬೇಡ್ಕರ್ ಆಗಿ ಕಾಣಿಸಿಕೊಂಡ ಈ ಮುದ್ದು ಹುಡುಗ. ಈ ಪುಟ್ಟ ಹುಡುಗ ಯಾರಿರಬಹುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೆ ಇದೇ. ಈ ಪುಟ್ಟ ಮುದ್ದು ಹುಡುಗನ ಹೆಸರು ಆಯುದ್ ಭಾನುಷಾಲಿ.
ಎಂಟು ವರ್ಷದ ಆಯುದ್ ಎಂಬ ಮುದ್ದು ಹುಡುಗನೇ ಅಂಬೇಡ್ಕರ್ ಪಾತ್ರವನ್ನು ಮಾಡುತ್ತಾ ಇರುವುದು. ಆಯುದ್ ಜನಿಸಿದ್ದು 2012 ರಲ್ಲಿ ಮುಂಬೈನಲ್ಲಿ ಜನನ. ತಂದೆ ಮಯೂರ್ ಭಾನುಶಾಲಿ , ತಾಯಿ ದೀಪಾ ಭಾನುಶಾಲಿ. ಬಾಲಕ ಅಂಬೇಡ್ಕರ್ ಪಾತ್ರ ಮಾಡುತ್ತಿರುವ ಆಯುದ್ ಮಯೂರ್ ಮತ್ತು ದೀಪಾ ದಂಪತಿಗಳ ಎರಡನೇ ಮಗ. ಮಯೂರ್ ಮತ್ತು ದೀಪಾ ದಂಪತಿಗಳಿಗೆ ಒಬ್ಬ ಮಗಳು ಇದ್ದು , ಆಯುದ್ ಗೆ ಒಬ್ಬ ಅಕ್ಕ ಕೂಡಾ ಇದ್ದಾಳೆ. ಅವಳ ಹೆಸರು ಸ್ಮೃತಿ ಭಾನುಶಾಲಿ. ಆಯುದ್ ತನ್ನ ಐದನೇ ವರ್ಷದಿಂದಲೂ ಬಣ್ಣ ಹಚ್ಚುತ್ತ ಇದ್ದಾನೆ. ಮಹಾನ್ ನಾಯಕ ಅಂಬೇಡ್ಕರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಈ ಮುದ್ದು ಹುಡುಗ ಇದಕ್ಕೂ ಮೊದಲೇ ಟಿವಿಯಲ್ಲಿ ಬಹಳಷ್ಟು ಮಿಂಚಿದ್ದ. ಒಂದು ಜಾಹೀರಾತಿನಲ್ಲಿ ಆಯುದ್ ನಟಿಸಿದ್ದ. 2017 ರಲ್ಲೀ ಅಂದರೆ ತನ್ನ ಐದನೇ ವಯಸ್ಸಿನಲ್ಲಿ ಆಯುದ್ ವಿಕ್ಸ್ ಜಾಹೀರಾತಿನಲ್ಲಿ ಕೆಮ್ಮುತ್ತಾ ಕಾಣಿಸಿಕೊಂಡಿದ್ದ.
ಹದಿನೇಳು ಸೆಕೆಂಡ್ ನ ಜಾಹೀರಾತಿನಲ್ಲಿ ಅಮ್ಮನ ಜೊತೆ ಕುಳಿತು ಕೆಮ್ಮುತ್ತ ಕಾಣಿಸಿಕೊಂಡಿದ್ದ. ಇದರ ನಂತರ ಹಿಂದೀ ಕಲರ್ಸ್ ಚಾನೆಲ್ ನಲ್ಲಿ ಪ್ರಸಾರಾಗೊಂಡ , ಚಂದ್ರಕಾಂತ್ ಏಕ್ ಮಾಯಾವಿ ಪ್ರೇಮ್ ಗಾಥಾ ಧಾರವಾಹಿಯಲ್ಲಿ ಆಯುದ್ ಕಾಣಿಸಿಕೊಂಡಿದ್ದ. ಸ್ಟಾರ್ ಪ್ಲಸ್ ನಲ್ಲಿ ಪ್ರಸಾರಾಗೊಂಡ ಇಷ್ಕ್ ಬಾಜ್ ಧಾರವಾಹಿಯಲ್ಲಿ ಕೂಡಾ ಈ ಪುಟ್ಟ ಬಾಲಕ ಕಾಣಿಸಿಕೊಂಡಿದ್ದ. ವಿಶೇಷ ಎಂದರೆ ಆಯುದ್ ಭಾನುಶಾಲೀ ಸಲ್ಮಾನ್ ಖಾನ್ ಜೊತೆ ಕೂಡಾ ಕೆಲಸ ಮಾಡಿದ್ದಾನೆ. ಈ ಪುಟ್ಟ ಕಂದನ ಭವಿಷ್ಯ ಉಜ್ವಲವಾಗಿರಲಿ ಎಂದು ಆಶಿಸೋಣ.