ಕರ್ನಾಟಕ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಾಜ್ಯದಲ್ಲಿ ವಾಸಿಸುವ ನಾಗರಿಕರಿಗೆ ನೀಡುವಂತಹ ವಂಶಾವಳಿಯ ವಂಶವೃಕ್ಷದ ಪ್ರಮಾಣ ಪತ್ರವನ್ನು ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು ಹೇಗೆ ಅರ್ಜಿ ಸಲ್ಲಿಸಬೇಕು ಯಾವ ದಾಖಲೆಗಳನ್ನು ನೀಡಬೇಕು ಎನ್ನುವುದರ ಕುರಿತಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು ಎಂದರೆ, ಹಾಗೆ ಹೋಗಿ ನಮಗೆ ಪ್ರಮಾಣಪತ್ರ ಬೇಕು ಎಂದರೆ ಅದನ್ನು ಯಾರೂ ಸಹ ನೀಡುವುದಿಲ್ಲ ಅದಕ್ಕಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಆ ದಾಖಲೆಗಳು ಏನು ಅನ್ನೋದನ್ನು ಒಂದೊಂದಾಗಿ ನೋಡೋಣ. ಮೊದಲಿಗೆ ನೀವು ನಿಮ್ಮ ಮನೆಯಲ್ಲಿ ಇರುವ ಸದಸ್ಯರ ಎಷ್ಟು ಜನರ ಹೆಸರನ್ನು ವಂಶವೃಕ್ಷದ ಲಿಸ್ಟಿನಲ್ಲಿ ಸೇರಿಸಬೇಕು ಎಂದು ಕೊಂಡಿರುವಿರೋ ಅವರೆಲ್ಲರ ಆಧಾರ್ ಕಾರ್ಡ್, ಪಡಿತರ ಚೀಟಿ, e-stamp ಪೇಪರ್, 20 ರೂಪಾಯಿ ಸ್ಟ್ಯಾಂಪ್ ಪೇಪರ್ ಅನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಯಾವುದೇ ಟೈಪಿಂಗ್ ಸೆಂಟರ್ ಗೆ ಹೋಗಿ ವಂಶವೃಕ್ಷದ ಪ್ರಮಾಣಪತ್ರಕ್ಕಾಗಿ ಎಂದು ಹೇಳಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರನ್ನು ಬರೆಸಿ ಅದನ್ನು ಜೆರಾಕ್ಸ್ ಪ್ರತಿ ತೆಗೆದುಕೊಡುತ್ತಾರೆ ಅದರ ಮೇಲೆ ನಿಮ್ಮ ಸಹಿಯನ್ನು ಮಾಡಿ ಲಾಯರ್ ಬಳಿ ತೆಗೆದುಕೊಂಡು ಹೋಗಿ ನೋಟರಿ ಮಾಡಿಸಬೇಕು.
ಇನ್ನು ನಾವು ವಂಶವೃಕ್ಷದ ಪ್ರಮಾಣಪತ್ರವನ್ನು ಪಡೆಯಬೇಕು ಎಂದರೆ ಎಲ್ಲಿ ಯಾರಿಗೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎನ್ನುವುದನ್ನು ನೋಡೋಣ. ಮೇಲೆ ಹೇಳಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನೆಮ್ಮದಿ ಕೇಂದ್ರ, ಡಿಜಿಟಲ್ ಸೇವಾ ಕೇಂದ್ರ, ಬೆಂಗಳೂರು ಒನ್, ಸಿಎಸ್ಸಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಮನೆಯಲ್ಲಿ ಕಂಪ್ಯೂಟರ್ ಇದ್ದರೆ ನೀವು ಮನೆಯಲ್ಲಿ ಕೂಡ ಅರ್ಜಿಯನ್ನು ಹಾಕಬಹುದು ಆದರೆ ಮನೆಯಲ್ಲಿ ಅರ್ಜಿಯನ್ನು ಹಾಕುವವರು ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಹಾಕಬೇಕು. ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿದಾಗ ಅದರ ಸೈಜ್ 2mb ಗಿಂತಲೂ ಕಡಿಮೆ ಇರಬೇಕು ಹಾಗೂ ನಂತರ ನಾಡಕಚೇರಿ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನಾಡಕಚೇರಿ ವೆಬ್ಸೈಟ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಅನ್ನೋದನ್ನು ನೋಡೋಣ.
ಯಾವುದೇ ಬ್ರೌಸರ್ ಅನ್ನು ಓಪನ್ ಮಾಡಿ ಅದರಲ್ಲಿ nadakacheri.karnataka.gov.in ಎಂದು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ , ಅಪ್ಲೈ ಅಂತ ಇರುವಲ್ಲಿ ಮತ್ತೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ನಂಬರನ್ನು ಟೈಪ್ ಮಾಡಿ ಪ್ರೋಸೀಡ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಎಡಗಡೆ ಭಾಗದಲ್ಲಿ ನ್ಯೂ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೂರನೇ ಆಯ್ಕೆ ಅಟೇಸ್ಟೇಷನ್ ಆಫ್ ಫ್ಯಾಮಿಲಿ ಟ್ರೀ ಇದರ ಮೇಲೆ ಕ್ಲಿಕ್ ಮಾಡಿದಾಗ ಕುಟುಂಬ ದೃಢೀಕರಣ ವಂಶವೃಕ್ಷ ಎನ್ನುವ ಪೇಜ್ ಓಪನ್ ಆಗುತ್ತೆ ಅಲ್ಲಿ ಭಾಷೆಯನ್ನು ಸಹ ಬದಲಾಯಿಸಿಕೊಂಡಿರುವ ಎಲ್ಲವನ್ನು ಒಂದೊಂದಾಗಿ ತುಂಬಬೇಕು. ಈ ರೀತಿಯಾಗಿ ಮನೆಯ ಎಲ್ಲ ಸದಸ್ಯರ ಹೆಸರನ್ನು ಹಾಗೂ ಅವರ ಎಲ್ಲ ದಾಖಲೆಗಳನ್ನು ತುಂಬಿ ನಂತರ ಸಬ್ಮಿಟ್ ಕೊಡಬೇಕು. ನಂತರ ಈಗಾಗಲೇ ಸ್ಕ್ಯಾನ್ ಮಾಡಿಟ್ಟುಕೊಂಡು ಅಂತಹ ಎಲ್ಲಾ ದಾಖಲೆಗಳನ್ನು ಸಹ ಅಪ್ಲೋಡ್ ಮಾಡಬೇಕು. ನಂತರ 50kb ಗಿಂತ ಕಡಿಮೆ ಇರುವ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕೂಡ ಅಪ್ಲೋಡ್ ಮಾಡಿ ಸೇವ್ ಮಾಡಬೇಕು. ಇಷ್ಟ ಆದ ನಂತರ ಒಂದು ನಂಬರ್ ನಿಮ್ಮ ಮೊಬೈಲ್ಗೆ ಬರುತ್ತದೆ. ಆನಂತರದಲ್ಲಿ ಸೀಸನ್ ಮಾಡಿ ಕೆಲವು ಪೇಮೆಂಟ್ ಮಾಡಬೇಕಾಗುತ್ತದೆ ಅವುಗಳನ್ನು ಮುಗಿಸಿ ಪ್ರಿಂಟ್ ತೆಗೆದುಕೊಳ್ಳಬಹುದು. ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಸರ್ಕಾರ ಹಣವನ್ನು ನಿಗದಿಪಡಿಸಿರುತ್ತಾರೆ. ಹಣವನ್ನು ತುಂಬಲು ಹೋದಾಗ ತಾನಾಗಿಯೇ ಕೇವಲ ಇಪ್ಪತ್ತೈದು ರೂಪಾಯಿ ಕಾಣಿಸಿಕೊಳ್ಳುತ್ತದೆ. ಈ ರೀತಿಯಾಗಿ ವಂಶವೃಕ್ಷದ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ನಂತರ ಸರ್ಕಾರದ ಕಡೆಯಿಂದ ಪ್ರಕ್ರಿಯೆ ಹೇಗಿರುತ್ತೆ ಅಂತ ನೋಡುವುದಾದರೆ, ಕಂದಾಯ ಇಲಾಖೆಯ ಗ್ರಾಮಲೇಖ ಪಾಲಕರು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಕಂದಾಯ ನಿರೀಕ್ಷಕರ ಬಳಿ ಕಳುಹಿಸುತ್ತಾರೆ ಅವರು ಸಹ ಅಲ್ಲಿ ಅರ್ಜಿಯನ್ನು ಪರಿಶೀಲಿಸಿಒಂದು ವೇಳೆ ಸಲ್ಲಿಸಿದ ಅರ್ಜಿಯಲ್ಲಿ ಏನಾದರೂ ತಪ್ಪು ಕಂಡು ಬಂದಲ್ಲಿ ಅದನ್ನು ತಿರಸ್ಕರಿಸುವ ಅಧಿಕಾರವನ್ನು ಸಹ ಇವರು ಹೊಂದಿರುತ್ತಾರೆ. ಹಾಗಾಗಿ ಅರ್ಜಿಯನ್ನು ಸಲ್ಲಿಸುವವರು ಮೊದಲೇ ಎಚ್ಚರಿಕೆಯಿಂದ ಯಾವುದೇ ರೀತಿಯ ತಪ್ಪು ಆಗದೇ ಇರುವ ಹಾಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಎಲ್ಲಾ ಸರಿ ಇದ್ದರೆ ಮುಂದಿನ ಭಾಗವಾಗಿ ಕಂದಾಯ ನಿರೀಕ್ಷಕರು ಉಪತಹಶೀಲ್ದಾರರು ನಿಮ್ಮ ಅರ್ಜಿಯನ್ನು ಸಲ್ಲಿಸುತ್ತಾರೆ. ಉಪತಹಸೀಲ್ದಾರರು ಸಹ ಅರ್ಜಿಯನ್ನು ಇನ್ನೊಮ್ಮೆ ಪರಿಶೀಲಿಸಿ ಒಪ್ಪಿಗೆಯನ್ನು ನೀಡುತ್ತಾರೆ ಎಲ್ಲಾ ಹಂತಗಳು ಪೂರ್ಣಗೊಂಡ ನಂತರ 7 ದಿನಗಳಲ್ಲಿ ನೀವು ನಿಮ್ಮ ವಂಶವೃಕ್ಷದ ಪ್ರಮಾಣಪತ್ರವನ್ನು ಪಡೆದು ಕೊಳ್ಳಬಹುದು.