ಪ್ರಸ್ತುತ ಹೆಚ್ಚಾಗಿ ಸಾಕಲ್ಪಡುತ್ತಿರುವ ವಿವಿಧ ರೀತಿಯ ನಾಯಿ ಮರಿಗಳ ದರಗಳು ಹೇಗಿವೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ನಾಯಿಯ ದರಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ. ಬ್ರೀಡರ್ ನ ಲೋಬಿತನ, ಬ್ರೀಡರ್ ನ ಸಾಂದರ್ಭಿಕ ಅನಿವಾರ್ಯತೆ, ನಾಯಿಯ ಮರಿ ಪೆಟ್ ಕ್ವಾಲಿಟಿ ಯೋ ಅಥವಾ ಶೋ ಕ್ವಾಲಿಟಿ ಯೋ ಎನ್ನುವುದನ್ನು ಅವಲಂಬಿಸಿದ್ದು, ಮರಿಯು ಪೆಟ್ ಕ್ವಾಲಿಟಿ ಆಗಿದ್ದರೇ ಕಡಿಮೆ ದರ ಹಾಗೂ ಶೋ ಕ್ವಾಲಿಟಿ ಆಗಿದ್ದಲ್ಲಿ ಹೆಚ್ಚು ದರವನ್ನು ಹೊಂದಿರುತ್ತದೆ. ವಿದೇಶದಿಂದ ತರಿಸಿದ ನಾಯಿಗಳಿಗೆ ಹಾಗೂ ಅವುಗಳ ಮರಿಗಳಿಗೆ ಹಾಗೂ ಉತ್ತಮ ತಳಿಗಳಿಗೆ ಹೆಚ್ಚು ದರಗಳು ಇರುತ್ತವೆ. ಕ್ಯಾನಲ್ ಕ್ಲಬ್ ಸರ್ಟಿಫಿಕೇಟ್ ಇದ್ದ ಹಾಗೂ ಇಲ್ಲದ ನಾಯಿ ಮರಿಗಳಿಗೂ ಸಾವಿರದಿಂದ ಮೂರು ಸಾವಿರದವರೆಗೆ ವ್ಯತ್ಯಾಸ ಆಗಬಹುದು. ಅದೂ ತಳಿಯ ಮೇಲೆ ಆಧಾರಿತವಾಗಿದೆ. ನಾಯಿ ಮರಿಯ ತಂದೆ ಮತ್ತು ತಾಯಿಗಳು ಚಾಂಪಿಯ್ಸ್ ಆಗಿದ್ದು ಡಾಗ್ ಶೋ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ತೆಗೆದುಕೊಂಡಿದ್ದರೆ ಅವುಗಳ ಮರಿಗಳೂ ಸಹ ಅಧಿಕ ಬೆಲೆಗೆ ಮಾರಾಟ ಆಗುತ್ತವೆ.
ಇನ್ನು ನಾಯಿ ಸಾಕಿ ಮರಿ ಮಾರಾಟ ಮಾಡುವವರ ಬಳಿ ಕೊಂಡರೆ ಅದು ಒಬ್ಬರ ಕೈಯಿಂದ ಮತ್ತೊಬ್ಬರ ಕೈ ಸೇರುತ್ತಾ ಖರೀದಿ ಮಾಡುವವನ ಕೈ ಸೇರಿದಾಗ ಅದು ಕೊನೆಗೆ ಮಾರಾಟ ಬೆಲೆಗಿಂತ ಎರಡು ಮೂರು ಪಟ್ಟು ಅಧಿಕ ಬೆಲೆಗೆ ಮಾರಾಟ ಆಗುವ ಸಂಭವ ಇರುವುದು. ಕೆಲವೊಮ್ಮೆ ಮಧ್ಯವರ್ತಿ ಹೆಚ್ಚು ಲಾಭವನ್ನು ಹೊಂದುವ ಸಾಧ್ಯತೆ ಕೂಡಾ ಇರುತ್ತದೆ. ಇಲ್ಲಿ ಎರಡು ಮೂರು ಬ್ರೀಡರ್ ಗಳ ಅಭಿಪ್ರಾಯ ಕೇಳಿ ದರವನ್ನು ನಿಗದಿ ಪಡಿಸಲಾಗಿದೆ.
ಜನಪ್ರಿಯ ತಳಿಯ ನಾಯಿ ಮರಿಗಳ ಬೆಲೆ ಏನಿದೆ ಅನ್ನೋದನ್ನ ನೋಡೋಣ. ಮೊದಲಿಗೆ ಪಂಜಾಬಿ ತಳಿಯ ನಾಯಿಗಳು. ನಮ್ಮಲ್ಲಿ ಮುಧೋಳ ಭಾಗದಲ್ಲಿ ಬೇಟೆಯ ಸಲುವಾಗಿ ಸಾಕಲಾಗುತ್ತಿದೆ. ಈ ನಾಯಿಯ ದರಗಳು ಮುಧೋಳದ ಕಡೆಯಲ್ಲಿ ಆರು ಸಾವಿರದಿಂದ ಏಳು ಸಾವಿರದವರೆಗೆ ಆರಂಭ ಆಗುತ್ತದೆ.
ಎರಡನೆಯದಾಗಿ ಇಂಡಿಯನ್ಸ್ ಪೇಟ್ಸ್. ಪ್ಯಾಮರಿಯನ್ ಎಂದು ಕರೆಯಲ್ಪಡುವ ಈ ತಳಿಯ ನಾಯಿಯು ಈಗ ಎಲ್ಲರೂ ಧಿಕವಾಗಿ ಸಾಕುತ್ತಿರುವ ತಳಿಯಾಗಿದ್ದು ಇವುಗಳ ಬೆಲೆ ನಾಲ್ಕು ಸಾವಿರದಿಂದ ಎಂಟು ಸಾವಿರದವರೆಗೆ ಇದೆ.
ಮೂರನೆಯದಾಗಿ ಸೇಂಟ್ ಬರ್ನಾಡ್ ಇದರ ಬೆಲೆ ಇಪ್ಪತ್ತು ಸಾವಿರದ ಮೇಲೆ ದರಗಳು ಆರಂಭ ಆಗುತ್ತವೆ.
ನಾಲ್ಕನೆಯದಾಗಿ ಬೀಗಲ್. ಇವುಗಳ ಬೆಲೆ ಇಪ್ಪತ್ತು ಇಪ್ಪತೈದು ಸಾವಿರದಿಂದ ಆರಂಭ ಆಗುವುದು. ಐದನೆಯದಾಗಿ ನ್ಯೂ ಫೋಡ್ಲ್ಯಾಂಡ್ ಇವುಗಳ ಬೆಲೆ ಮೂವತ್ತೈದು ಸಾವಿರದಿಂದ ಆರಂಭ ಆಗುತ್ತವೆ. ಆರನೆಯದಾಗಿ ಅಕ್ಕಿತ. ಇವುಗಳ ಬೆಲೆ ಕೂಡಾ ಮೂವತ್ತೈದು ಸಾವಿರದಿಂದ ಆರಂಭ ಆಗುತ್ತವೆ.
ಏಳನೆಯದಾಗಿ ಪಗ್ ನಾಯಿಗಳು. ಇವುಗಳನ್ನು ಹದಿನೈದು ಸಾವಿರಕ್ಕೆ ಜೋಡಿಯಂತೆ ಮಾರಾಟ ಮಾಡಲಾಗುವುದು. ಆದರೆ ಇವುಗಳ ಚಿಕ್ಕ ಕಾಲುಗಳು , ಮೂಗುಗಳಿಂದಾಗಿ ಇವು ಅಷ್ಟೊಂದು ಘನತೆ ಹೊಂದಿಲ್ಲ. ಎಂಟನೆಯದಾಗಿ ಅಸ್ಕಿ. ಇವುಗಳ ಬೆಲೆ ಇಪ್ಪತ್ತು ಸಾವಿರದಿಂದ ಆರಂಭ ಆಗುತ್ತವೆ. ನೀಲಿ ಕಣ್ಣು ಹೊಂದಿದ್ದಾರೆ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರದವರೆಗೆ ಹೊಂದಿರುತ್ತದೆ. ಈ ಅಸ್ಕಿ ಮರಿಗಳಲ್ಲಿ ಸಾಮಾನ್ಯ ಕೋಟ್ ಮತ್ತು ವೂಲಿ ಕೋಟ್ ಗಳು ಎಂದು ಎರಡು ವಿಧಗಳಿವೆ. ಇದರಲ್ಲಿ ವೂಲಿ ಕೋಟ್ ಮರಿಗಳು ಅಧಿಕ ಬೆಲೆಯನ್ನೂ ಹೊಂದಿರುತ್ತವೆ.
ಒಂಬತ್ತನೆಯದ್ದಾಗಿ ಡಾರ್ಮೇಶಿಯನ್. ಇದರ ಬೆಲೆ ಎಂಟು ಹತ್ತು ಸಾವಿರದಿಂದ ಆರಂಭದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಸಾಕುವವರು ಮತ್ತು ಬ್ರೀಡಿಂಗ್ ಮಾಡುವವರು ಕಡಿಮೆ ಆಗಿರುವುದರಿಂದ ಇವುಗಳ ಮರಿಗಳು ಸಧ್ಯ ಲಭ್ಯವಿಲ್ಲ. ಹತ್ತನೆಯದಾಗಿ ಬಾಕ್ಸರ್ ಪೆಟ್ ಕ್ವಾಲಿಟಿ ಇವು ಹತ್ತರಿಂದ ಹನ್ನೆರಡು ಸಾವಿರಕ್ಕೆ ಸಿಗುತ್ತವೆ ಇದರಲ್ಲೇ ಇವು ಶೋ ಕ್ವಾಲಿಟಿ ನಾಯಿ ಮರಿಗಳು ಆದರೆ ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಬೆಲೆಯನ್ನು ಹೊಂದಿರುತ್ತವೆ.
ಡಾಬಾರ್ಮನ್ ಇವು ಪೆಟ್ ಕ್ವಾಲಿಟಿ ನಾಯಿ ಮರಿ ಆಗಿದ್ದಲ್ಲಿ ಏಳೆಂಟು ಸಾವಿರ ಹಾಗೂ ಶೋ ಕ್ವಾಲಿಟಿ ನಾಯಿ ಮರಿ ಆಗಿದ್ದಲ್ಲಿ ಹನ್ನೆರಡು ಹದಿನೈದು ಸಾವಿರ ದರವನ್ನು ಹೊಂದಿರುತ್ತದೆ. ಜರ್ಮನ್ ಶಫರ್ಡ್ ದರಗಳು ಎಂಟು ಸಾವಿರದಿಂದ ಆರಂಭವಾಗಿ ಉತ್ತಮ ಶೋ ಕ್ವಾಲಿಟಿ ಇದ್ದಾರೆ ಹದಿನೈದು ಸಾವಿರದವರೆಗೆ ಬೆಲೆ ಹೊಂದಿರುತ್ತವೆ. ಲ್ಯಾಬರ್ಡಾರ್ ಇವು ಪೆಟ್ ಕ್ವಾಲಿಟಿ ಏಳೆಂಟು ಸಾವಿರದಿಂದ ಆರಂಭ , ಶೋ ಕ್ವಾಲಿಟಿ ನಾಯಿಯ ದರಗಳು ಹನ್ನೆರಡರಿಂದ ಹದಿನೈದು ಸಾವಿರ ದರವನ್ನು ಹೊಂದಿರುತ್ತದೆ. ಇವಿಷ್ಟು ವಿವಿಧ ಬ್ರೀಡರ್ ಗಳಿಂದ ಸಂಗ್ರಹಿಸಿದ ವಿವಿಧ ತಳಿಯ ನಾಯಿಗಳು ಹಾಗೂ ಅವುಗಳ ಬೆಲೆಗಳು.