ಈ ಸೃಷ್ಟಿ ಎನ್ನುವುದು ಎಷ್ಟೊಂದು ಅದ್ಭುತ. ಇಲ್ಲಿ ಪ್ರತಿಯೊಂದು ಸಮಸ್ಯೆಗೂ ಭಗವಂತ ಪರಿಹಾರವನ್ನು ಕೂಡಾ ಸೃಷ್ಟಿಸಿದ್ದಾನೆ. ಮನುಷ್ಯನನ್ನು ಈ ಭೂಮಿಯ ಮೇಲೆ ಕಳುಹಿಸುವಾಗ ಮನುಷ್ಯನಿಗೆ ಬರಬಹುದಾದ ಕಾಯಿಲೆಗಳ ಬಗ್ಗೆಯೂ ಸೃಷ್ಟಿಕರ್ತನಿಗೆ ತಿಳಿದಿತ್ತೇನೋ ಅದಕ್ಕಾಗಿಯೇ ನಾವು ಸೇವಿಸುವ ಆಹಾರದಲ್ಲಿ ಔಷಧೀಯ ಗುಣಗಳನ್ನು ಸಹ ಇಟ್ಟು ಕಳುಹಿಸಿಕೊಟ್ಟ. ಪ್ರಕೃತಿಯಲ್ಲಿ ಚಿಕಿತ್ಸಕ ಗುಣಗಳನ್ನು ಇಟ್ಟ. ಅಂತಹ ಅದ್ಭುತ ಔಷಧೀಯ ಗುಣಗಳನ್ನು ಹೊಂದಿರುವ ಅದ್ಭುತವಾದ ಒಂದು ಹಣ್ಣಿನ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.
ಈ ಒಂದು ಹಣ್ಣು ಅಧಿಕ ರಕ್ತದ ಒತ್ತಡದಿಂದ ಹಿಡಿದು ಕ್ಯಾನ್ಸರ್ ವರೆಗಿನ ಎಷ್ಟೋ ರೋಗಗಳನ್ನು ಗುಣ ಮಾಡಬಲ್ಲದು. ದೇಹದ ಉಷ್ಣವನ್ನು ಕಡಿಮೆ ಮಾಡುತ್ತದೆ. ಪೈಲ್ಸ್ ಅಂತಹ ಸಮಸ್ಯೆಯನ್ನು ದೂರ ಮಾಡುತ್ತದೆ. ಇಷ್ಟಕ್ಕೂ ಈ ರೀತಿಯ ಹಲವಾರು ಕಾಯಿಲೆಗಳಿಗೆ ಮದ್ದು ಆಗಿರುವ ಆ ಹಣ್ಣು ಯಾವುದು ಇದು ಯಾರಿಗೂ ತಿಳಿಯದೆ ಇರುವ ಹಣ್ಣೆನೂ ಅಲ್ಲ ಅದೇ ಅಂಜೂರದ ಹಣ್ಣು. ಆಂಗ್ಲ ಭಾಷೆಯಲ್ಲಿ ಫಿಗ್ ಅಂತ ಹೇಳುತ್ತಾರೆ.
ಇದು ಏಷ್ಯಾದ ಹಣ್ಣು. ಮೆಡಿಟೆರಿಯನ್ ಸಮುದ್ರ ತೀರದಲ್ಲಿ ತುರ್ಕಿಸ್ಥಾನ್ ಇಂದ ಸ್ಪೇನ್ ವರೆಗೆ ಏಷ್ಯಾ ಖಂಡದ ಅಫ್ಘಾನ್, ಪಾಕಿಸ್ತಾನ, ಭಾರತ, ಚೀನಗಳಲ್ಲಿ ಈ ಹಣ್ಣು ಹೆಚ್ಚಾಗಿ ಬೆಳೆಯುತ್ತದೆ. ಅಪಾರ ಪ್ರಮಾಣದ ಪೋಷಕಾಂಶಗಳನ್ನು ಹೊಂದಿರುವ ಅಂಜುರವನ್ನು ಒಂದು ಹಣ್ಣು ಎಂದು ಸೇವಿಸುವುದಕ್ಕಿಂತ ಔಷಧವಾಗಿ ಸೇವಿಸುವುದು ಉತ್ತಮ. ಪ್ರತೀ ದಿನ ಒಂದು ಸೇಬು ಸೇವಿಸಿ ವೈದ್ಯರಿಂದ ದೂರವಿರಿ ಎನ್ನುವ ಗಾದೆಯನ್ನು ಎಲ್ಲರೂ ಕೇಳಿರುತ್ತೇವೆ ಆದರೆ ನಾವು ಸೇವಿಸುವ ಸೇಬು ಹಣ್ಣಿನಲ್ಲಿ ಇರುವುದಕ್ಕಿಂತ ಹತ್ತು ಪಟ್ಟು ಹೆಚ್ಚು ಪೋಷಕಾಂಶಗಳನ್ನು ಅಂಜೂರದ ಹಣ್ಣು ಹೊಂದಿದೆ. ಈ ಹಣ್ಣು ತಂಪು ಪ್ರಕೃತಿಯನ್ನು ಹೊಂದಿದ್ದು, ದೇಹವನ್ನು ಉಷ್ಣದಿಂದ ಕಾಪಾಡುತ್ತದೆ. ಕಫ ನಾಶಕವಾಗಿಯೂ ಕೆಲಸ ಮಾಡುವುದು. ಅಷ್ಟೇ ಅಲ್ಲದೇ ಕಿಡ್ನಿಯಲ್ಲಿ ಕಲ್ಲು, ಮೂಲವ್ಯಾಧಿ, ಮುತ್ರಕೋಷಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಸಹ ಅಂಜೂರ ಪರಿಹಾರ ನೀಡಬಲ್ಲದು. ಇದರಲ್ಲಿ ಇರುವ ವಿಟಮಿನ್ ಏ, ಇ ಹಾಗೂ ಕೆ. ವಿಟಮಿನ್ ಗಳು ನಮ್ಮ ದೇಹದ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಕ್ಯಾನ್ಸರ್ ಅಂತಹ ಕಾಯಿಲೆಗಳಿಂದ ದುರವಿರಿಸುತ್ತವೆ.
ಮಧುಮೇಹಿಗಳು ಯಾವುದೇ ಭಯ ಇಲ್ಲದೆ ಅಂಜೂರದ ಹಣ್ಣನ್ನು ಸೇವಿಸಬಹುದು. ಇದರಲ್ಲಿರುವ ಕ್ಲೋರಿಸಿನ್ ಆಸಿಡ್ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೇ ರಕ್ತಕ್ಕೆ ಸೇರುವ ಗ್ಲೂಕೋಸ್ ಅನ್ನು ಹೀರಿಕೊಳ್ಳುವುದರಿಂದ ಮಧುಮೇಹಿಗಳಿಗೆ ಒಳ್ಳೆಯದು. ಅಸಿಡಿಟಿ ಹಾಗೂ ಅಜೀರ್ಣದ ಸಮಸ್ಯೆಗೂ ಇದು ಉತ್ತಮ ಪರಿಹಾರ. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಅಂಜೂರದ ಹಣ್ಣನ್ನು ತಿನ್ನುವುದರಿಂದ ಹೊಟ್ಟೆ ಹಗುರ ಆಗುವುದು ಹಾಗೂ ಮಲಬದ್ಧತೆ ಸಮಸ್ಯೆ ಕೂಡಾ ನಿವಾರಣೆ ಆಗುತ್ತದೆ. ಇನ್ನು ನಾಲ್ಕರಿಂದ ಐದು ಅಂಜೂರದ ಹಣ್ಣುಗಳನ್ನು ಒಂದು ಹಿಡಿ ಒಣ ದ್ರಾಕ್ಷಿ ಜೊತೆ ಹಾಲಿನಲ್ಲಿ ಬೇಯಿಸಿ ಅದನ್ನು ಸೇವಿಸುವುದರಿಂದ ರಕ್ತ ಶುದ್ಧಿ ಹಾಗೂ ವೃದ್ಧಿ ಆಗುತ್ತದೆ. ಅಂಜೂರದ ಹಣ್ಣು ಅಪಾರ ಪ್ರಮಾಣದ ಕಾಪರ್ ಹಾಗೂ ಕಬ್ಬಿಣದ ಅಂಶ ಇದ್ದು, ರಕ್ತ ಶುದ್ಧಿ ಹಾಗೂ ವೃದ್ಧಿ ಮಾಡುವುದಲ್ಲದೆ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ , ಕ್ಯಾಲ್ಸಿಯಂ , ಜಿಂಕ್ ಅಂಶಗಳು ಹೃದಯದ ಆರೋಗ್ಯಕ್ಕೆ ಸಹಾಯಕಾರಿ ಆಗುತ್ತದೆ.
ಹೃದಯದ ಬಡಿತ ನಿಯಂತ್ರಿಸಲು ಒಣ ಅಂಜೂರ ಹಣ್ಣು ಅತ್ಯಂತ ಉಪಯುಕ್ತ. ಒಣ ಅಥವಾ ಹಸಿ ಅಂಜೂರದ ಹಣ್ಣನ್ನು ಪ್ರತೀ ದಿನ ಸೇವಿಸುವುದರಿಂದ ರಕ್ತದ ಒತ್ತಡವನ್ನೂ ನಿಯಂತ್ರಿಸಿಕೊಳ್ಳಬಹುದು. ನಾಲ್ಕರಿಂದ ಐದು ಅಂಜೂರದ ಹಣ್ಣುಗಳನ್ನು ಅರ್ಧ ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಆರಿಸಿ ಪ್ರತೀ ನಿತ್ಯ ಸೇವಿಸುವುದರಿಂದ ಶ್ವಾಸಕೋಶದ ಕಾಯಿಲೆಗಳು ವಾಸಿಯಾಗುತ್ತವೆ. ಆಸಿಡಿಟಿ ಉಂಟಾದಾಗ ರಾತ್ರಿ ಒಣ ದ್ರಾಕ್ಷಿ ನೆನೆಸಿಟ್ಟು ಅದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣು ಜೊತೆ ಸೇವಿಸಿದರೆ ಎದೆ ಉರಿ, ಅಜೀರ್ಣ, ಆಸಿಡಿಟಿ ಅಂತಹ ಸಮಸ್ಯೆಗಳು ನಿವಾರಣೆ ಆಗುತ್ತದೆ.
ಇನ್ನು ಮಕ್ಕಳು ಕಬ್ಬಿಣ ಅಥವಾ ಗಾಜಿನ ಚೂರುಗಳು ನುಂಗಿದರೆ ಅಂಜೂರದ ಹಣ್ಣು ತಿನ್ನಿಸುವುದರಿಂದ ಬೆಳಿಗ್ಗೆ ಮಲದ ಜೊತೆ ಹೊರಗೆ ಬರುತ್ತದೆ. ಇಷ್ಟೇ ಅಲ್ಲದೆ ದೇಹದ ತೂಕ ಕಡಿಮೆ ಮಾಡಲು ಸಹ ಇದನ್ನು ಬಳಸಿಕೊಳ್ಳಬಹುದು. ಪ್ರತೀ ದಿನ ಊಟಕ್ಕೂ ಮೊದಲು ಒಂದು ಕಪ್ ಅಂಜೂರದ ಹಣ್ಣನ್ನು ತಿನ್ನುವುದರಿಂದ ಊಟದ ಪ್ರಮಾಣ ಕಡಿಮೆ ಆಗಿ ದೇಹದ ತೂಕ ಕಡಿಮೆ ಆಗುವುದು. ಇವಿಷ್ಟು ತನ್ನೊಡಲಲ್ಲಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅಂಜೂರದ ಹಣ್ಣು ಇದರ ಬಗ್ಗೆ ಮಾಹಿತಿ.