ಕರ್ನಾಟಕ ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2055 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಗಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕೆ ಸಂಬಂದಪಟ್ಟಂತೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಹೀಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 24 ಡಿಸೆಂಬರ್ 2019 ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ಜನವರಿ 2020 ಸಂಜೆ 5 ಗಂಟೆಯ ವರೆಗೆ ಆಗಿರುತ್ತದೆ.
ಈ ಮೂಲಕ ಆನ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕನಿಷ್ಠ ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ವಿಜ್ಞಾನ ವಿಷಯವನ್ನು ತಮ್ಮ ಆಯ್ಕೆಯಾಗಿಸಿಕೊಂಡು ಗಣಿತ ವಿಷಯದಲ್ಲಿ ಕನಿಷ್ಠ 60 ಅಂಕಗಳನ್ನು ಮೀರಿರಬೇಕು. ಅಲ್ಲದೆ ಯಾವುದೇ ವಿಶ್ವವಿದ್ಯಾಲಯದಿಂದ ಬಿ.ಇ ಸಿವಿಲ್ ಇಂಜಿನಿಯರಿಂಗ್ ಅಥವಾ ಬಿ ಟೆಕ್ ಸಿವಿಲ್ ಇಂಜಿನಿಯರಿಂಗ್ ಮತ್ತು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಮಾಡಿರುವವರು ಸಹ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು, ಅಥವಾ ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆಯು ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೇ ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು ಕನಿಷ್ಠ ವಯೋಮಿತಿ 18 ರಿಂದ ಗರಿಷ್ಠ ವಯೋಮಿತಿ 65 ರ ವರೆಗೆ ನಿಗಧಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ರೂ 500 ಗಳನ್ನು ನಿಗಧಿಪಡಿಸಿದ್ದು ಅಭ್ಯರ್ಥಿಗಳು ನಾಡಕಛೇರಿ ಅಟಲ್ ಜೀ ಜನ ಸ್ನೇಹಿ ಕೇಂದ್ರಗಳಲ್ಲಿ ನಿಮ್ಮ ಚುನಾವಣಾ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ನೊಂದಿಗೆ ರೂ 500 ಗಳನ್ನು ಪಾವತಿಸಿ ವಿಶಿಷ್ಟ ಅರ್ಜಿ ಸಂಖ್ಯೆಯನ್ನು ಪಡೆಯಬೇಕು ಮೊದಲು ಅರ್ಜಿ ಶುಲ್ಕವನ್ನು ಪಾವತಿಸಿ ಆನಂತರವೇ ಅಭ್ಯರ್ಥಿಗಳು ಆನ್ ಲೈನ್ ನ ಮೂಲಕ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬಹುದಾಗಿದೆ.