ವಾಟರ್ ಕ್ಯಾನ್ ಬಿಸ್ನೆಸ್ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಮಿನರಲ್ ವಾಟರ್ ಅನ್ನು ಶೇಖರಿಸಿ ಇಡಲು ಈ ವಾಟರ್ ಕ್ಯಾನ್ ಗಳನ್ನು ಬಳಸಲಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲೂ ನಾವು ವಾಟರ್ ಕ್ಯಾನ್ ನ್ನು ನೋಡುತ್ತೇವೆ ಹಾಗಾಗಿ ಇದೊಂದು ಅತ್ಯಂತ ಬೇಡಿಕೆ ಇರುವ ಬಿಸ್ನೆಸ್ ಅಂತಲೇ ಹೇಳಬಹುದು. ಇದೊಂದು ಉತ್ತಮ ಪ್ರಾಫಿಟ್ ಇರುವ ಬಿಸ್ನೆಸ್ ಆಗಿದ್ದು ಇದನ್ನ ಮಾಡೋಕೆ ಯಾವೆಲ್ಲ ಮಶೀನ್ ಗಳು ಬೇಕು? ಇನ್ವೆಸ್ಟ್ಮೆಂಟ್ ಎಷ್ಟು? ಇದರಿಂದ ನಮಗೆ ದೊರೆಯುವ ಲಾಭ ಎಷ್ಟು ಈ ಎಲ್ಲಾ ವಿಷಯಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ಮುಖ್ಯವಾಗಿ ನಮಗೆ ಈ ಮಿನರಲ್ ವಾಟರ್ ಕ್ಯಾನ್ ಬಿಸ್ನೆಸ್ ಮಾಡಲು ಆಟೋ ಡ್ರಾಪ್ PET ಬ್ಲೋವಿಂಗ್ ಮಶೀನ್ ಬೇಕಾಗಿರುತ್ತದೆ. ಇದರ ಜೊತೆಗೆ ಪ್ರೀ ಹೀಟರ್, ಕಾಂಪ್ರೆಸರ್ ಹಾಗೂ ಮೌಲ್ಡಿಂಗ್ಗ್ ಮಶೀನ್ ಗಳೂ ಸಹ ಬರುತ್ತವೆ. ಈ ಮಶಿನ್ ಗಳ ಬೆಲೆ ಮೂರರಿಂದ ಮೂರೂವರೆ ಲಕ್ಷದವರೆಗೆ ಆಗಬಹುದು. ಇನ್ನು ಕಚ್ಚಾ ವಸ್ತುಗಳು ಪೆಟ್ ಪ್ರೀಫಾರ್ಮ್ ಬೇಕಾಗುತ್ತದೆ ಇದು ಕೆಜಿ ಗೆ ಇದು ನೂರು ರೂಪಾಯಿ ಕರ್ಚು ಬೀಳುತ್ತದೆ ಆದರೆ ಒಂದು ಕೇಜಿಯಲ್ಲಿ ನಾವು ಆರು ವಾಟರ್ ಕ್ಯಾನ್ ಗಳನ್ನು ತಯಾರಿಸಬಹುದು.
ಇನ್ನು ಈ ಕ್ಯಾನ್ ತಯಾರಿಸುವುದು ಹೇಗೆ ಎಂದು ನೋಡುವುದಾದರೆ ಪ್ರೀ ಹೀಟ್ ಮಶೀನ್ ನಲ್ಲಿ ನಾವು ತಂದಿರುವ ವಾಟರ್ ಕ್ಯಾನ್ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸರಿಯಾಗಿ ಜೋಡಿಸಬೇಕು. ಇದು ಮಶೀನ್ ಒಳಗೆ ಹೋಗಿ ಬಿಸಿಯಾಗಿ ಹೊರಗೆ ಬರುತ್ತದೆ. ನಂತರ ತಕ್ಷಣ ಇದನ್ನು ತೆಗೆದು ಮೌಲ್ಡಿಂಗ್ ಮಶೀನ್ ಅಲ್ಲಿ ಇಡಬೇಕು. ಆಗ ಕಂಪ್ರೆಸರ್ ಗಾಳಿಯನ್ನು ಬಿಟ್ಟು ಯಾವುದೇ ರೀತಿಯ ಡ್ಯಾಮೇಜ್ ಆಗದೇ ನಾವು ಬಳಸುವ ಮಿನರಲ್ ವಾಟರ್ ಶೇಖರಿಸಿ ಇಡುವ ವಾಟರ್ ಕ್ಯಾನ್ ತಯಾರಾಗಿ ಬರುತ್ತದೆ. ಇನ್ನು ಇದರ ಬೆಲೆ ನೋಡುವುದಾದರೆ ಒಂದು ನೀರಿನ ಕ್ಯಾನ್ ಕಚ್ಚಾ ವಸ್ತುವಿಗೆ ಇಪ್ಪತ್ತು ರೂಪಾಯಿ ಖರ್ಚು ಆಗುವುದು ಹಾಗೂ ಮಶೀನ್ ವಿದ್ಯುತ್ ಮೇಲೆ ಕೆಲಸ ಮಾಡುವುದರಿಂದ ಅದಕ್ಕೆ ಹತ್ತು ರೂಪಾಯಿ ಹಾಗೂ ಮಾರ್ಕೆಟಿಂಗ್ ಗೆ ಅಂತಾ ಹತ್ತು ರೂಪಾಯಿ ಖರ್ಚು ಒಟ್ಟೂ ಒಂದು ಕ್ಯಾನ್ ತಯಾರಿಸಲು ನಲವತ್ತು ರೂಪಾಯಿ ಖರ್ಚು ಬೀಳುವುದು. ಇದನ್ನ ಈಗ ಲೋಕಲ್ ಮಾರ್ಕೆಟ್ ಗಳಲ್ಲಿ ೧೫೦ ರೂಪಾಯಿಗೆ ಮಾರಾಟ ಮಾಡುತ್ತಿದ್ದು, ಹೋಲ್ ಸೇಲ್ ಆಗಿ ೧೦೦ ರೂಪಾಯಿಗೆ ಮಾರಾಟ ಮಾಡಬಹುದು. ಇದರಿಂದಾಗಿ ನಾವು ಉತ್ಪಾದನಾ ವೆಚ್ಚವನ್ನು ಕಳೆದರೂ ಸಹ ಒಂದು ವಾಟರ್ ಕ್ಯಾನ್ ಮೇಲೆ ೬೦ ರೂಪಾಯಿ ಲಾಭ ಗಳಿಸಬಹುದು. ಹಾಗಾಗಿ ದಿನಕ್ಕೆ ೧೫೦ ಕ್ಯಾನ್ ಗಳನ್ನು ತಯಾರಿಸಿ ಮಾರಾಟ ಮಾಡಿದರೆ ಒಂದು ದಿನಕ್ಕೆ ೯,೦೦೦ ದ ವರೆಗೂ ಸಂಪಾದನೆ ಮಾಡಬಹುದು.