ಕೆಲವು ಜನರಲ್ಲಿ ಮನೆ ನಿರ್ಮಿಸುವ ವಿಚಾರದಲ್ಲಿ ಹಲವಾರು ಗೊಂದಲಗಳು ಇರುತ್ತವೆ. ಮನೆಗೆ ಗ್ರಾನೈಟ್ ಮಾರ್ಬಲ್ ಅಥವಾ ಟೈಲ್ಸ್ ಈ ಮೂರರಲ್ಲಿ ಯಾವುದು ಉತ್ತಮ ಯಾವುದನ್ನು ನಾವು ಮನೆಗೆ ಹಾಕಿಸಬಹುದು ಎನ್ನುವುದರ ಕುರಿತಾಗಿ ಗೊಂದಲ ಇರುತ್ತದೆ. ಈ ಲೇಖನದ ಮೂಲಕ ಈ ಮೂರು ವಸ್ತುಗಳ ಬೆಲೆ ಅವುಗಳನ್ನು ಹಾಕುವ ರೀತಿ ಎಲ್ಲ ವಿಷಯಗಳ ಕುರಿತಾಗಿ ತಿಳಿದುಕೊಳ್ಳೋಣ.
ಮೊದಲಿಗೆ ಮಾರ್ಬಲ್: ಜನರು ಹೆಚ್ಚಾಗಿ ಮಾರ್ಬಲ್ ಅನ್ನು ಇಷ್ಟಪಡುತ್ತಾರೆ. ಮೊದಲು ನಾವು ಇಲ್ಲಿ ಮಾರ್ಬಲ್ ಗುಣ ಹಾಗೂ ಅವಗುಣಗಳ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಇದರ ಬೆಲೆ ಎಷ್ಟು ಇರಬಹುದು ಎನ್ನುವುದನ್ನು ಕೂಡ ತಿಳಿದುಕೊಳ್ಳೋಣ. ಜನರು ಹೆಚ್ಚಾಗಿ ಮಾರ್ಬಲ್ ಅನ್ನು ಬಳಕೆ ಮಾಡಲು ಕಾರಣ ಅದು ಹೆಚ್ಚು ಕಾಲ ಬಾಳಿಕೆ ಬರುವುದರಿಂದ 20 30 ವರ್ಷಗಳವರೆಗೂ ಇದು ಬಾಳಿಕೆ ಬರುತ್ತದೆ. ಸಾಕಷ್ಟು ವಿಧಗಳಲ್ಲಿ ಕೂಡ ದೊರೆಯುತ್ತದೆ. ಮನೆಯನ್ನು ತಂಪಾಗಿರುತ್ತದೆ ಆದರೆ ಇದು ಮಾರ್ಬಲ್ ಗುಣವೂ ಹೌದು ಹಾಗೆ ಅವ ಗುಣವೂ ಆಗಿರುತ್ತದೆ. ಹತ್ತು ಹದಿನೈದು ವರ್ಷಗಳ ನಂತರ ಮಾರ್ಬಲ್ ಶೈನಿಂಗ್ ಕಳೆದುಕೊಂಡರೆ ಇದನ್ನು ಮತ್ತೆ ಶೈನಿಂಗ್ ಮಾಡಿಸುವುದರ ಮೂಲಕ ಮರುಬಳಕೆ ಮಾಡಬಹುದು. ಒಂದುವೇಳೆ ಮಾರ್ಬಲ್ ಕ್ರ್ಯಾಕ್ ಆಗಿದ್ದಲ್ಲಿ ಫ್ರೌಟೀನ್ ತುಂಬುವ ಮೂಲಕ ಕ್ರ್ಯಾಕ್ ಆಗಿದ್ದು ಕಾಣಿಸದೆ ಇರುವ ಹಾಗೆ ಮಾಡಬಹುದು.
ಇನ್ನು ಮಾರ್ಬಲ್ ಅವಗುಣಗಳ ಬಗ್ಗೆ ನೋಡುವುದಾದರೆ ಇದನ್ನು ಹಾಕಲು ತೆಗೆದುಕೊಳ್ಳುವಂತಹ ಚಾರ್ಜ್ ತುಂಬಾ ಹೆಚ್ಚಾಗಿರುತ್ತದೆ. ಪ್ರತಿ ಹತ್ತರಿಂದ ಹದಿನೈದು ವರ್ಷಕ್ಕೆ ಒಮ್ಮೆ ಇದನ್ನು ಪಾಲಿಶ್ ಮಾಡಿಸಬೇಕಾಗುತ್ತದೆ. ಎಷ್ಟೇ ಕಡಿಮೆ ಬೆಲೆಯಲ್ಲಿ ಅಂದರೂ ಕೂಡ ಮಾರ್ಬಲ ಆರಂಭದ ಬೆಲೆ 100 ರೂಪಾಯಿಂದ ಹಿಡಿದು ಎರಡೂವರೆ ಸಾವಿರದವರೆಗೆ ಕೂಡ ಮಾರ್ಬಲ್ ದೊರೆಯುತ್ತದೆ. ಆದರೆ ಈ ಮಾರ್ಬಲ್ ಅನ್ನು ಫಿಕ್ಸ್ ಮಾಡುವ ಸಲುವಾಗಿಯೇ ಪ್ರತಿ ಸ್ಕ್ವೇರ್ ಫೀಟ್ ಗೆ 125 ರಿಂದ 150 ರೂಪಾಯಿ ನೀಡಬೇಕಾಗುತ್ತದೆ.
ಎರಡನೇಯದಾಗಿ ಟೈಲ್ಸ್ ಬಗ್ಗೆ ನೋಡುವುದಾದರೆ ಟೈಲ್ಸ್ ಸಾಕಷ್ಟು ವಿಧಗಳಲ್ಲಿ ಸಾಕಷ್ಟು ಡಿಸೈನ್ ಗಳಲ್ಲಿ ವಿಧವಿಧವಾಗಿ ಸಿಗುತ್ತದೆ. ಮೊದಲಿನ ಹಾಗೆ ಸಣ್ಣಗಾತ್ರದ ಟೈಲ್ಸ್ ಸಿಗದೆ ಈಗ ಟೈಲ್ಸ್ ಗಾತ್ರದಲ್ಲಿ ಕೂಡ ದೊಡ್ಡದಾಗಿ ದೊರೆಯುತ್ತದೆ. ಟೈಲ್ಸ್ ಬೆಲೆ ನೋಡುವುದಾದರೆ ಅಡಿಗೆ 15, 20 ರೂಪಾಯಿ ಇಂದ ಆರಂಭಿಸಿ ಉತ್ತಮಗುಣಮಟ್ಟದ ಟೈಲ್ಸ್ ಬೇಕು ಅಂದರೆ ನೂರು ರೂಪಾಯಿವರೆಗೆ ಇದರ ಬೆಲೆ ಇರುತ್ತದೆ. ಮಾರ್ಬಲ್ ಗೆ ಹೋಲಿಕೆ ಮಾಡಿದರೆ ಟೈಲ್ಸ್ ಅಷ್ಟೊಂದು ಬಾಳಿಕೆಗೆ ಬರುವುದಿಲ್ಲ. ಹಾಗೆ ಮಾರ್ಬಲ್ ತರ ಇದಕ್ಕೆ ಪಾಲೀಶ್ ಕೂಡ ಮಾಡಿಸೋಕೆ ಬರುವುದಿಲ್ಲ. ಒಂದು ವೇಳೆ ಮಧ್ಯದಲ್ಲಿ ಯಾವುದೇ ಟೈಲ್ಸ್ ಒಡೆದುಹೋದರೆ ಮೊದಲೇ ತರಿಸಿಕೊಂಡಿದ್ದರೆ ಏನು ತೊಂದರೆ ಉಂಟಾಗುವುದಿಲ್ಲ ಆದರೆ ಮತ್ತೆ ಅದೇ ರೀತಿಯ ಡಿಸೈನ್ ಟೈಲ್ಸ್ ಸಿಗುವುದು ಬಹಳ ಕಷ್ಟ. ಇವು ಟೈಲ್ಸ್ ನ ಗುಣಾವಗುಣಗಳು ಆಗಿವೆ.
ಇನ್ನು ಕೊನೆಯದಾಗಿ ಗ್ರಾನೈಟ್ ಬಗ್ಗೆ ನೋಡುವುದಾದರೆ ಹೆಚ್ಚಾಗಿ ಕಿಚನ್ ಗಳಲ್ಲಿ ಗ್ರಾನೈಟ್ ಬಳಕೆಯಾಗುತ್ತದೆ. ಗ್ರಾನೈಟ್ ಆಸಿಡ್ ರೆಸಿಸ್ಟೆಂಟ್ ಆಗಿದ್ದು, ಇದರ ಮೇಲೆ ಯಾವುದೇ ರೀತಿಯ ಕಲೆಗಳು ಉಂಟಾಗುವುದಿಲ್ಲ. ಇದು ಗಟ್ಟಿಯಾಗಿರುವುದರಿಂದ ಒಡೆಯುವುದು ತುಂಬಾ ಕಷ್ಟ. ಇನ್ನು ಗ್ರಾನೈಟ್ ನ ಬೆಲೆ ನೋಡುವುದಾದರೆ ಪ್ರತಿ ಸ್ಕ್ವೇರ್ ಫೀಟ್ 50 ರೂಪಾಯಿಂದ ಆರಂಭವಾಗಿ ಒಂದು ಸಾವಿರದವರೆಗೂ ಕೂಡ ಲಭ್ಯವಿರುತ್ತದೆ. ಇದರ ಫಿಕ್ಸಿಂಗ್ ಚಾರ್ಜ್ ಕೂಡ ಮಾರ್ಬಲ್ ತರವೇ ಹೆಚ್ಚಾಗಿರುತ್ತದೆ. ಹಾಗಾಗಿ ಗ್ರಾನೈಟ್ ಅನ್ನು ಬೆಳಕೆ ಮಾಡುವುದಿದ್ದರೆ ಹೆಚ್ಚಾಗಿ ಕಿಚನ್ ಗಳಲ್ಲಿ ಬಳಕೆ ಮಾಡುವುದು ಉತ್ತಮ.
ಇನ್ನು ಟೈಲ್ಸ್ ಗ್ರಾನೈಟ್ ಹಾಗೂ ಮಾರ್ಬಲ್ ಈ ಮೂರರಲ್ಲಿ ಯಾವುದು ಉತ್ತಮ ಎಂದು ನೋಡುವುದಾದರೆ, ಇದರ ಡಿಸೈನ್, ವಿಧ, ಗಾತ್ರ ಹಾಗೂ ಬೆಲೆಗಳನ್ನು ಎಲ್ಲ ಪರಿಗಣಿಸಿ ಟೈಲ್ಸ್ ಉತ್ತಮ ಎಂದು ಹೇಳಬಹುದು. ಎರಡನೆಯದಾಗಿ ಮಾರ್ಬಲ್ ಹಾಗೂ ಕೊನೆಯದಾಗಿ ಕಿಚನ್ನಿಗೆ ಮಾತ್ರ ಗ್ರಾನೈಟ್ ಬಳಕೆ ಮಾಡಬಹುದು.