ಈ ಲೇಖನದಲ್ಲಿ ನಾವು ಪ್ರಪಂಚದ ಐದು ಬಲಶಾಲಿ ಮಹಿಳೆಯರ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ನಮ್ಮಲ್ಲಿ ಗಂಡಸರು ಬಲಹೀನರು ಮತ್ತು ಹೆಂಗಸರು ದುರ್ಬಲರೆಂದು ಹೇಳುತ್ತಾರೆ. ಆದರೆ ಇವರ ಬಗ್ಗೆ ತಿಳಿದುಕೊಂಡರೆ ಈ ಮಾತು ಸುಳ್ಳು ಎಂದೆನಿಸುತ್ತದೆ. ನಾವಿಲ್ಲಿ ತಿಳಿದುಕೊಳ್ಳಲು ಹೊರಟಿರುವುದು ತುಂಬಾ ಕಷ್ಟಪಟ್ಟು ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲಳು ಎನ್ನುವುದನ್ನು ನಿರೂಪಿಸಿದವರ ಬಗ್ಗೆ.
ನಟಾಲಿಯಾ ಕಜ್ಞೆತ್ಸೋವಾ: ಇವರು ರಷ್ಯಾ ಗೆ ಸೇರಿದ ಮಹಿಳೆ. ಇವರಿಗೆ 16 ವರ್ಷ ವಯಸ್ಸು ಇರುವಾಗ 60 ಕೆಜಿ ತೂಕವನ್ನು ಹೊಂದಿದ್ದು ತುಂಬಾ ದಪ್ಪಗಾಗುತ್ತಾರೆ ಈ ಕಾರಣದಿಂದ ಅವರನ್ನು ಬಹಳಷ್ಟು ಜನರು ಇವರಿಗೆ ಗೇಲಿ ಮಾಡಿಕೊಂಡು ನಗುತ್ತಿರುತ್ತಾರೆ. ಇದರಿಂದಾಗಿ ಜಿಮ್ಮಿಗೆ ಹೋಗಲು ನಿರ್ಧರಿಸಿ ಹೋಗುತ್ತಾರೆ ಇದರಿಂದಾಗಿ ಇವರ ಕಷ್ಟದ ಪ್ರತೀಕವಾಗಿ ದೇಹ ದಷ್ಟ ಪುಷ್ಟವಾಗಿ ಬೆಳೆದಿದೆ. ಇವರು ಐದು ಬಾರಿ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದಿದ್ದಾರೆ ಹಾಗೂ ಎರಡು ಬಾರಿ ವರ್ಲ್ಡ್ ವುಮೆನ್ ಚಾಂಪಿಯನ್ಶಿಪ್ನಲ್ಲಿ ಸಹ ಗೆದ್ದಿದ್ದಾರೆ ಇದರಿಂದಾಗಿ ರಷ್ಯಾದಲ್ಲಿ ನಂಬರ್ ಒನ್ ಬಾಡಿ ಬಿಲ್ಡರ್ ಇವರಾಗಿದ್ದಾರೆ.
ಡೋನ್ನಾ ಮೋರ್: ಬ್ರಿಟಿಷ್ ಅತ್ಯಂತ ಪ್ರಬಲ ಮಹಿಳೆಯಾಗಿದ್ದಾರೆ. 2016 ಮತ್ತು 2017 ರಲ್ಲೀ ಎರಡು ಬಾರಿ ವರ್ಲ್ಡ್ ಸ್ಟ್ರಾಂಗೆಸ್ಟ್ ವುಮೆನ್ಸ್ ಚಾಂಪಿಯನ್ಶಿಪ್ನಲ್ಲಿ ಗೆದ್ದಿದ್ದಾರೆ. ಎರಡು ಮಕ್ಕಳ ತಾಯಿಯಾಗಿ ಸಾಧಾರಣ ಗೃಹಿಣಿಯಾಗಿ ಇರುತ್ತಾರೆ . ಮದುವೆಯಾಗಿ ಐದು ವರ್ಷಗಳ ನಂತರ ಇವರ ಗಂಡ ಇವರನ್ನು ಬಿಟ್ಟುಹೋದಾಗ ಕೆಲಸಕ್ಕಾಗಿ ಆಲೆದಾಡುತ್ತಿರುತ್ತಾರೆ ತುಂಬಾ ದಪ್ಪ ಇರುವ ಕಾರಣ ಎಲ್ಲಿಯೂ ಸಹ ಕೆಲಸ ಸಿಗುವುದಿಲ್ಲ. ಹಾಗಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಜಿಮ್ಮಿಗೆ ಹೋಗುತ್ತಾರೆ ಅಲ್ಲಿ ಇವರೆಗೆ ಇಷ್ಟವಾಗಿ ಬಲಿಷ್ಠ ಮಹಿಳೆ ಆಗಿದ್ದಾರೆ.
ಕ್ರಿಸ್ಟಿನ್ ರೋಡ್ಸ್: ಈಕೆ ಅಮೆರಿಕಾದ ಬಲಿಷ್ಠ ಮಹಿಳೆಯಾಗಿದ್ದಾರೆ. ಸಾಧನೆಗೆ ವಯಸ್ಸಿನ ಅವಶ್ಯಕತೆ ಇಲ್ಲ ಎನ್ನುವುದನ್ನು ಇವರು ನಿರೂಪಿಸಿದ್ದಾರೆ. ಈಗ ಇವರಿಗೆ 44 ವರ್ಷ ವಯಸ್ಸಾಗಿದ್ದು ಮೂರು ಮಕ್ಕಳನ್ನು ಹೊಂದಿದ್ದಾರೆ. 2012 ವುಮೆನ್ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಇವರು ಗೆದ್ದಿದ್ದಾರೆ. ಇವರ ಕುಟುಂಬದಲ್ಲಿ ಎಲ್ಲರೂ ಸ್ಪೋರ್ಟ್ಸ್ ಮ್ಯಾನ್ ಆಗಿರುವುದರಿಂದ ತಾನು ಕೂಡ ಜಿಮ್ಮಿಗೆ ಹೋಗಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡು ಜಿಮ್ಮಿಗೆ ಹೋಗಿ ವರ್ಕೌಟ್ ಮಾಡಿ ಅಮೇರಿಕಾದ ಸ್ಟ್ರಾಂಗೆಸ್ಟ್ ವುಮನ್ ಎಂಬ ಬಿರುದು ಪಡೆದಿದ್ದಾರೆ.
ಐರಿಸ್ ಕೈಲ್: ಈಕೆ ಕೂಡ ಅಮೇರಿಕಾದ ಸ್ಟ್ರಾಂಗೆಸ್ಟ್ ಬಾಡಿಬಿಲ್ಡರ್ ಆಗಿದ್ದಾರೆ. ಇವರ ಸಾಧನೆಗೆ ಕೊನೆಯೇ ಇಲ್ಲ ಎಂಬಂತೆ ಮೊದಲು ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಗೆದ್ದಿದ್ದರು. ನಂತರ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಿಗ್ರಿ ಮಾಡಿದ್ದಾರೆ ಹಾಗೂ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಸಹ ಗೆದ್ದಿದ್ದಾರೆ. ಆನಂತರ ಬಾಡಿಬಿಲ್ಡಿಂಗ್ ಮಾಡಲು ಆರಂಭಿಸಿದ್ದಾರೆ ಈ ರೀತಿ 1994 ರಿಂದ 2014 ರ ವರೆಗೆ NPC , IFBP ಯುಎಸ್ ಚಾಂಪಿಯನ್ಶಿಪ್, ಎಂಎಸ್ ಒಲಂಪಿಯ ಮುಂತಾದ ಸ್ಪರ್ಧೆಗಳಲ್ಲಿ 38 ಬಾರಿ ಗೆದ್ದು ವರ್ಲ್ಡ್ ಚಾಂಪಿಯನ್ ಆಗಿದ್ದಾರೆ. ಈಗ 44 ವರ್ಷ ವಯಸ್ಸಿನವರು ಎಷ್ಟು ಚಾಂಪಿಯನ್ಶಿಪ್ನಲ್ಲಿ ಗೆದ್ದಿದ್ದಾರೆ ಎಂದರೆ ಎಷ್ಟು ಕಷ್ಟ ಪಟ್ಟಿರಬಹುದು!? ಆದರೆ ಇವರ ಆತ್ಮವಿಶ್ವಾಸ ಕುಂದಲಿಲ್ಲ.
ಐರನ್ ಅಂಡರ್ಸನ್: ಸ್ವೀಡನ್ ಗೆ ಸೇರಿದ ಬಾಡಿಬಿಲ್ಡರ್. ಮೊದಲು ಇವರು ಕಿಕ್ಬಾಕ್ಸರ್ ಆಗಲು ಪ್ರಯತ್ನಿಸುತ್ತಾರೆ ಆದರೆ ಒಂದು ಮಗುವಾದ ನಂತರ ಬಾಡಿಬಿಲ್ಡರ್ ಆಗಲು ಇಷ್ಟಪಡುತ್ತಾರೆ. ಇವರಿಗೆ ಈಗ ಮೂರು ಜನ ಮಕ್ಕಳಾಗಿದ್ದರೆ ಸಹ ಐದು ಬಾರಿ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಗೆದ್ದಿದ್ದಾರೆ.
ನಮ್ಮ ದೇಶದಲ್ಲಿಯೂ ಕೂಡ ಸಾಕಷ್ಟು ಜನ ಹುಮನ್ ಬಾಡಿ ಬಿಲ್ಡರ್ಸ್ ಇದ್ದಾರೆ ಆದರೆ ಇವರು ವಿದೇಶಿ ಮಹಿಳೆಯರ ಹೇಗೆ ಬೇಕೋ ಹಾಗೆ ತಮ್ಮ ದೇಹವನ್ನು ಬೆಳೆಸಲಿಲ್ಲ. ಯಾವುದೇ ಔಷಧಿಗಳನ್ನು ಬಳಸಿ ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಬಾಡಿ ಬಿಲ್ಡ್ ಮಾಡಿದ್ದಾರೆ.