ನಮ್ಮ ಶರೀರದ ಆರೋಗ್ಯವನ್ನು ವೃದ್ಧಿಸುವುದು ನಮ್ಮ ಮನೆಯ ಅಡುಗೆ ಮನೆ ಹೌದು ನಾವು ಸೇವಿಸುವಂತ ಆಹಾರ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಆದ್ದರಿಂದ ನಮ್ಮ ಅಡುಗೆ ಮನೆ ಯಾವಾಗಲು ಸಚ್ಛವಾಗಿ ಇಟ್ಟುಕೊಳ್ಳಬೇಕು. ಇನ್ನು ಅಡುಗೆ ಮನೆಯಲ್ಲಿ ಬಳಸುವಂತ ಒಂದಿಷ್ಟು ಆಹಾರ ಸಾಮಗ್ರಿಗಳನ್ನು ಬಳಸಿ ಶರೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಮುಖ್ಯವಾಗಿ ಇಲ್ಲಿ ತಿಳಿಯುವ ವಿಷಯ ಏನು ಅಂದ್ರೆ ಶರೀರದ ಮೇಲೆ ಆಗುವಂತ ಒಂದಿಷ್ಟು ಕುರ ಅಥವಾ ಗಾಯಗಳ ಸಮಸ್ಯೆಗೆ ಕರಿ ಎಳ್ಳು ಹೇಗೆ ಸಹಕಾರಿ ಅನ್ನೋದನ್ನ ತಿಳಿಯೋಣ. ಕತ್ತಿ ಅಥವಾ ಯಾವುದಾದರು ಆಯುಧದಿಂದ ದೇಹದ ಮೇಲೆ ಗಾಯ ಆಗಿದ್ರೆ ನಿವಾರಿಸಲು ಹಾಗೂ ಕುರ ಸಮಸ್ಯೆಗೂ ಕೂಡ ಇದು ಉಪಯೋಗಕಾರಿಯಾಗಿದೆ. ಈ ಮನೆಮದ್ದು ಮಾಡೋದು ಹೇಗೆ ಅನ್ನೋದನ್ನ ನೋಡುವುದಾದರೆ, ಕರಿಎಳ್ಳು ಹಾಗೂ ಬೇವಿನ ಎಲೆಗಳನ್ನು ಸಮವಾಗಿ ತಗೆದುಕೊಂಡು ಕೊಬ್ಬರಿ ಎಣ್ಣೆಯಲ್ಲಿ ಚನ್ನಾಗಿ ಹುರಿದು ನಂತರ ಸ್ವಲ್ಪ ಕರ್ಪುರ ಮತ್ತು ಅರಿಸಿನ ಸೇರಿಸಿ ಚನ್ನಾಗಿ ರುಬ್ಬಿ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಬೇಕು.
ನಂತರ ತಯಾರಿಸಿಕೊಂಡ ಮನೆಮದ್ದನ್ನು ಸಮಸ್ಯೆ ಇರುವ ಜಾಗಕ್ಕೆ ಅಂದರೆ ಗಾಯ ಅಥವಾ ಕುರ ಆಗಿರುವ ಜಾಗಕ್ಕೆ ಹಚ್ಚಬೇಕು ಹೀಗೆ ಮಾಡಿದ್ರೆ ಬೇಗನೆ ಪರಿಹಾರ ಕಂಡುಕೊಳ್ಳಬಹುದು. ಕೆಲವರಲ್ಲಿ ಈ ಸಮಸ್ಯೆ ಇದ್ದೆ ಇರುತ್ತದೆ ಅಂತವರಿಗೆ ಈ ಮನೆಮದ್ದು ಉಪಯೋಗವಾಗಲಿ ಶೇರ್ ಮಾಡಿ ಧನ್ಯವಾದಗಳು..