ನಮ್ಮ ದೇಶದ ಪ್ರಧಾನಿಗಳು ಸಚಿವರು ಹಾಗೂ ಮುಖ್ಯಮಂತ್ರಿಗಳು ಹೇಗೆ ಅಭಿವೃದ್ಧಿಯ ಕೆಲಸವನ್ನು ಮಾಡುತ್ತಾರೆ ಹಾಗೂ ದೇಶದಲ್ಲಿ ಯಾರು ಬೆಸ್ಟ್ CM ಎಂಬುದಾಗಿ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ. ಅಂತಹ ಕುತೂಹಲಕ್ಕೆ ಈ ಸಮೀಕ್ಷೆಯೊಂದು ಉತ್ತರ ನೀಡುವ ಕೆಲಸ ಮಾಡಿದೆ. ಈ ಒಂದು ವರದಿಯನ್ನು ಇಂಡಿಯಾ ಟುಡೇ ಅನ್ನೋ ಸಮೀಕ್ಷೆ ಮೂಲಕ ಭಾರತೀಯ ಬೆಸ್ಟ್ CM ಯಾರು ಅನ್ನೋದನ್ನ ತಿಳಿಯಲಾಗಿದೆ. ಬೆಸ್ಟ್ CM ಎಂಬುದಾಗಿ ಮೊದಲ ಸ್ಥಾನದಲ್ಲಿUP ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗುರುತಿಸಿಕೊಂಡಿದ್ದಾರೆ. ಇಲ್ಲಿ ಮತ್ತೊಂದು ವಿಶೇಷತೆ ಏನು ಅಂದ್ರೆ ಇವರು ಸತತ ಮೂರೂ ಬಾರಿ ಈ ಸ್ಥಾನವನ್ನು ಪಡೆದಿದ್ದಾರೆ. ಹೌದು ಇದು 3ನೇ ಬಾರಿ ಭಾರತದ ಬೆಸ್ಟ್ CM ಎಂಬುದಾಗಿ ಯೋಗಿಯವರು ಗುರುತಿಸಿಕೊಂಡಿರೋದು. ಇನ್ನು ಯಾವ ಯಾವ ರಾಜ್ಯದ ಮುಖ್ಯಮಂತ್ರಿಗಳು ಯಾವ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಯಾವ ಸ್ಥಾನದಲ್ಲಿದ್ದಾರೆ ಅನ್ನೋದನ್ನ ಮುಂದೆ ನೋಡಿ.
MOTN ಸಮೀಕ್ಷೆಯನ್ನು ದೆಹಲಿ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಜುಲೈ 15, 2020 ಮತ್ತು ಜುಲೈ 27, 2020 ರ ನಡುವೆ ನಡೆಸಿತು. ಈ ಸಮೀಕ್ಷೆಯನ್ನು ಸಾಂಪ್ರದಾಯಿಕವಾಗಿ ಮುಖಾಮುಖಿ ಸಂದರ್ಶನ ವಿಧಾನವನ್ನು ಬಳಸಿ ನಡೆಸಲಾಗಿದೆ. ಆದಾಗ್ಯೂ, ಸಮೀಕ್ಷೆಯ ಈ ಆವೃತ್ತಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಅಭೂತಪೂರ್ವ ಪರಿಸ್ಥಿತಿಯಿಂದಾಗಿ, ಎಲ್ಲಾ ಸಂದರ್ಶನಗಳನ್ನು ದೂರವಾಣಿ ಮೂಲಕ ಪ್ರಮಾಣಿತ ರಚನಾತ್ಮಕ ಪ್ರಶ್ನಾವಳಿಯನ್ನು ಬಳಸಿ ನಡೆಸಲಾಯಿತು
MOTN ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್ ಭಾರತದ ಬೆಸ್ಟ್ ಸಿಎಂ ಎಂದು ಬಹಿರಂಗವಾಗಿದೆ. ಯೋಗಿ ಆದಿತ್ಯನಾಥ್ ಶೇಕಡಾ 24 ರಷ್ಟು ಮತಗಳನ್ನು ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ಮೊದಲ ಸ್ಥಾನ ಪಡೆದಿದ್ದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 2ನೇ ಸ್ಥಾನ ಪಡೆದಿದ್ದಾರೆ. ಕೇಜ್ರಿವಾಲ್ ಶೇಕಡಾ 15 ರಷ್ಟು ಮತಗಳನ್ನು ಪಡೆದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಯಡಿಯೂರಪ್ಪ ಬೆಸ್ಟ್ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.
ಮೊದಲನೆಯ ಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಎರಡನೆಯ ಸ್ಥಾನ ಅರವಿಂದ್ ಕೇಜ್ರಿವಾಲ್ ದೆಹಲಿ ಮೂರನೆಯ ಸ್ಥಾನ ಜಗನ್ ರೆಡ್ಡಿ ಆಂಧ್ರ ಪ್ರದೇಶ ನಾಲ್ಕನೆಯ ಸ್ಥಾನ ಮಮತಾ ಬ್ಯಾನರ್ಜಿಪಶ್ಚಿಮ ಬಂಗಾಳ ಐದನೆಯ ಸ್ಥಾನ ನಿತೀಶ್ ಕುಮಾರ್ ಬಿಹಾರ ಆರನೆಯ ಸ್ಥಾನ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಏಳನೆಯ ಸ್ಥಾನ ನವೀನ್ ಪಟ್ನಾಯಕ್ ಒಡಿಶಾ, ಎಂಟನೆಯ ಸ್ಥಾನ ಕೆ ಚಂದ್ರಶೇಖರ್ ರಾವ್ ತೆಲಂಗಾಣ, ಒಂಬತ್ತನೆಯ ಸ್ಥಾನ ಅಶೋಕ್ ಗೆಹ್ಲೋಟ್(ರಾಜಸ್ಥಾನ), ಹತ್ತನೆಯ ಸ್ಥಾನದಲ್ಲಿ ನಮ್ಮ ರಾಜ್ಯದ ಬಿಎಸ್ ಯಡಿಯೂರಪ್ಪ ಗುರುತಿಸಿಕೊಂಡಿದ್ದಾರೆ.