ನೆಗಡಿ, ಶೀತ, ಕೆಮ್ಮು ಹಾಗೂ ಗಂಟಲಿನ ಕಿರಿಕಿರಿ ಉಂಟಾಗುವ ಸಮಸ್ಯೆಗೆ ಸುಲಭವಾಗಿ ಹೇಗೆ ಮನೆಮದ್ದು ಮಾಡಿಕೊಂಡು ನಿವಾರಣೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ.
ಈ ಮನೆ ಮದ್ದು ಒಂದು ರೀತಿಯ ಕಷಾಯ ಆಗಿದ್ದು ಇದು ನೆಗಡಿ ಶೀತ, ಕೆಮ್ಮು ಇವುಗಳಿಗೆ ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತೆ. ಈ ಕಷಾಯವನ್ನು ಮಾಡಲು ಬೇಕಾಗಿರುವ ಕೆಲವು ಮುಖ್ಯ ಸಾಮಗ್ರಿಗಳು ಏನು ಅಂತ ನೋಡುವುದಾದರೆ, 5-6 ಲವಂಗ, 2 ಏಲಕ್ಕಿ, ಶುಂಠಿ, ಅಜವಾನ ಅರ್ಧ ಚಮಚ, ಅರಿಶಿಣ ಅರ್ಧ ಚಮಚ, ಕಾಳುಮೆಣಸು 4, ತುಳಸಿ ಎಲೆ ನಾಲ್ಕರಿಂದ ಐದು ಹಾಗೂ 2 ಟೇಬಲ್ ಸ್ಪೂನ್ ನಷ್ಟು ಬೆಲ್ಲದ ಪುಡಿ. ಈಗ ಈ ಕಷಾಯವನ್ನು ಹೇಗೆ ತಯಾರಿಸುವುದು ಎನ್ನುವುದನ್ನು ನೋಡೋಣ. ಸ್ಟೋವ್ ಮೇಲೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಆ ನಿರು ಸ್ವಲ್ಪ ಬಿಸಿಯಾದ ನಂತರ ಅದಕ್ಕೆ 4 ಲವಂಗ, ಸಣ್ಣಗೆ ಕುಟ್ಟಿಕೊಂಡ ಕಾಳುಮೆಣಸು, ಏಲಕ್ಕಿ, ತುಳಸಿ ಎಲೆ, 1 ಟೇಬಲ್ ಸ್ಪೂನ್ ಅಷ್ಟು ಅಜವಾನ, ತುರಿದುಕೊಂಡ ಶುಂಠಿ, ಅರಿಶಿನ ಮತ್ತು ಬೆಲ್ಲ ಇವಿಷ್ಟನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು.
ಈ ಮಿಶ್ರಣವನ್ನು ಸಣ್ಣ ಉರಿಯಲ್ಲಿ ಎಂಟರಿಂದ ಹತ್ತು ನಿಮಿಷಗಳ ಕಾಲ ಒಂದು ಲೋಟ ನೀರು ಅರ್ಧ ಲೋಟಕ್ಕೆ ಇಳಿಯುವವರೆಗೂ ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಇದನ್ನು ಶೋಧಿಸಿಕೊಂಡು ಒಂದು ಲೋಟಕ್ಕೆ ಹಾಕಿಕೊಂಡು ಸ್ವಲ್ಪ ತಣ್ಣಗಾದ ನಂತರ 1ಟೀ ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿಕೊಳ್ಳಬೇಕು. ಈ ಕಷಾಯವನ್ನು ಸ್ವಲ್ಪ ಬೆಚ್ಚಗಿರುವಾಗಲೇ ಕುಡಿಯಬೇಕು ದಿನಕ್ಕೆ ಎರಡು ಮೂರು ಬಾರಿಯಾದರೂ ಸೇವಿಸಬಹುದು ಇದರಿಂದ ಶೀತ, ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು ಈ ರೀತಿಯ ಯಾವುದೇ ನೋವು ಇದ್ದರು ಸಹ ನಿವಾರಣೆಯಾಗುವುದು.
ಲವಂಗದ ಆಂಟಿ ಇಂಫ್ಲೋಮೇಟರಿ ಲಕ್ಷಣ ಇರುವುದರಿಂದ ಗಂಟಲಿನಲ್ಲಿ ಇರುವಂತಹ ಸೋಂಕನ್ನು ಗುಣಪಡಿಸುತ್ತೆ. ಎಲಕ್ಕಿಯ ಬೀಜಗಳಲ್ಲಿ ಆಂಟಿ ಸಪ್ಟಿಕ್ ಗುಣ ಇರುವುದರಿಂದ ಗಂಟಲ ಕಿರಿಕಿರಿಯನ್ನು ಗುಣಪಡಿಸಲು ಸಹಾಯಕಾರಿ. ಶುಂಠಿಯಲ್ಲಿ ಇರುವ ಆಂಟಿ ಇಂಫ್ಲೋಮೇಟರಿ ಗುಣ ಎದೆಯಲ್ಲಿ ಒಣ ಕಫ ಕಟ್ಟಿದ್ದರೆ ಶುಂಠಿ ಕಫ ಕರಗಿಸಲು ಸಹಾಯಕವಾಗಿರುತ್ತದೆ. ಕಾಳು ಮೆಣಸಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗುತ್ತದೆ.