ದೇಶ ಎಷ್ಟೇ ಮುಂದುವರೆದರು ಕೂಡ ನಮ್ಮ ದೇಶದಲ್ಲಿ ಭಿಕ್ಷೆ ಬೇಡುವವವರ ಸಂಖ್ಯೆ ಏನು ಕಡಿಮೆ ಆಗಿಲ್ಲ, ಅಷ್ಟೇ ಅಲ್ದೆ ನಮ್ಮ ದೇಶದಲ್ಲಿ ಬಡವರ ಸಂಖ್ಯೆ ಕೂಡ ಕಡಿಮೆ ಆಗಿಲ್ಲ. ಹೊಟ್ಟೆ ಪಾಡಿದಾಗಿ ರಸ್ತೆ ಬದಿ ಭಿಕ್ಷೆ ಬೇಡುವವರು ಹಾಗೂ ಚಿಂದಿ ಆಯುವವರು ಕೂಡ ಇನ್ನು ಇದ್ದಾರೆ. ಆದ್ರೆ ಅಂತವರಿಗೆ ಸಹಾಯ ಮಾಡಲು ಮುಂದೆ ಬರುವಂತ ವ್ಯಕ್ತಿಗಳು ಬೆರಳೆಣಿಕೆಯಷ್ಟು ಮಾತ್ರ. ಹೌದು ಇಲ್ಲಿ ಶ್ರೀಮಂತರು ಶ್ರೀಮಂತರಾಗಿ ಮುಂದುವರೆಯುತ್ತಾರೆ ಬಡವರು ಶ್ರೀಮಂತರಾಗಿ ಬೆಳೆಯುವುದು ಕಷ್ಟದ ದಾರಿಯಾಗಿದೆ.
ಹೌದು ಇಲ್ಲಿ ಮುಖ್ಯವಾಗಿ ನೋಡುವ ವಿಷಯ ಏನು ಅಂದ್ರೆ. ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಿ ಹಾಗೂ ಚಿಂದಿ ಆಯುವ ಮೂಲಕ ಜೀವನ ಸಾಗಿಸುತ್ತಿದ್ದ ಮಕ್ಕಳನ್ನು ಈ ಟ್ರಾಫಿಕ್ ಪೊಲೀಸ್ ಅಧಿಕಾರಿ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಷ್ಟಕ್ಕೂ ಈ ಟ್ರಾಫಿಕ್ ಪೊಲೀಸ್ ಯಾರು ಇದು ಎಲ್ಲಿ ಅನ್ನೋದನ್ನ ನೋಡುವುದಾದರೆ, ಸಂಚಾರಿ ಡಿಸಿಪಿ ಅಂಕಿತ್ ಪಟೇಲ್ ಅಹ್ಮಮದಾಬಾದ್ ಇವರು ಬೀದಿ ಬದಿಯ ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಗುರಿಯೊಂದಿಗೆ ಒಂದೂವರೆ ವರ್ಷದ ಹಿಂದೆ ಪೊಲೀಸ್ ಪಾಠಶಾಲೆಯನ್ನು ಈ ಪೊಲೀಸ್ ಅಧಿಕಾರಿ ಪ್ರಾರಂಭಿಸಿದ್ದಾರೆ. ಇದೀಗ ಇಂತಹ ಮೂರು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹ ಇನ್ನೊಂದಿಷ್ಟು ಕೇಂದ್ರಗಳನ್ನು ತೆರೆಯುವ ಯೋಚನೆಯಲ್ಲಿರುವುದಾಗಿ ಅವರು ಹೇಳಿದ್ದಾರೆ. ಈ ಕೇಂದ್ರಗಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳು ಶಾಲೆಗೆ ಬರಲು ಉಚಿತ ವಾಹನದ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಮಕ್ಕಳನ್ನು ಈ ಕೇಂದ್ರಗಳಿಗೆ ಕರೆ ತರಲು ಸೈಕಲ್ ರಿಕ್ಷಾವನ್ನು ನಿಯೋಜಿಸಲಾಗುತ್ತಿದೆ. ಅಧ್ಯಯನದ ಅವಧಿಯಲ್ಲಿ ಉಚಿತವಾಗಿ ಊಟವನ್ನು ಸಹ ನೀಡಲಾಗುತ್ತಿದೆ.
ಇದರ ಮುಖ್ಯ ಉದ್ದೇಶ: ಬಿಧಿ ಬದಿಯ ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲಿ ಹಾಗೂ ಬೀದಿ ಬದಿಯ ಮಕ್ಕಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ಹೆಚ್ಚು. ಆದ್ದರಿಂದ ಇಂತಹ ಮಕ್ಕಳ ಜೀವನದಲ್ಲಿ ಬದಲಾವಣೆ ತರಲು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಮೂಲ ಜ್ಞಾನ ನೀಡಿದ ನಂತರ ಅವರನ್ನು ರೆಗ್ಯೂಲರ್ ಶಾಲೆಗಳಿಗೆ ಸೇರಿಸಲಾಗುವುದು. ನಿಜಕ್ಕೂ ಇವರ ಈ ನಿಸ್ವಾರ್ಥ ಸೇವೆಗೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್ ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಅನ್ನೋ ಮಾತು ಇದೆ. ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಉತ್ತಮ ರೀತಿಯಲ್ಲಿ ಬೆಳೆಸಿದರೆ ಮುಂದೆ ಒಳ್ಳೆಯ ವ್ಯಕ್ತಿಗಳಾಗಿ ಮಾರ್ಪಡುತ್ತಾರೆ.