ವಾಹನಗಳು ಹಾಗೂ ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಎರಡು ಮಹತ್ವಪೂರ್ಣ ನಿರ್ಧಾರವನ್ನು ಜಾರಿಗೆ ತರುತ್ತಿದೆ. DL ಹೊಂದಿರುವ ಪ್ರತಿಯೊಬ್ಬರು ಸಹ ತಿಳಿಯಲೇಬೇಕಾದ ವಿಷಯ ಇದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಇದುವರೆಗೂ ಬೇರೆ ಬೇರೆ ರಾಜ್ಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಡ್ರೈವಿಂಗ್ ಲೈಸೆನ್ಸ್ ಇರುತ್ತಿತ್ತು ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ. ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಭಾರತದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೂಡಾ ಒಂದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಇರಲಿದೆ. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ನ ಸ್ಮಾರ್ಟ್ ಕಾರ್ಡ್ ನ ಬಣ್ಣ, ವಿನ್ಯಾಸ, ಸುರಕ್ಷತಾ ಸೆಕ್ಯೂರಿಟಿ ಫೀಚರ್ ಗಳು ಒಂದೇ ರೀತಿಯಲ್ಲಿ ಇರಲಿದೆ. ಇನ್ನು ಎಲ್ಲಾ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡುವ ಏಕ ರೀತಿಯ ಡ್ರೈವಿಂಗ್ ಲೈಸೆನ್ಸ್ ಗಳಲ್ಲಿ ಮೈಕ್ರೋ ಚಿಪ್ ಹಾಗೂ QR ಕೋಡ್ ಗಳು ಸಹ ಇರಲಿದೆ. ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವ್ಯಕ್ತಿಯ ಪ್ರತಿಯೊಂದು ವಿವರಗಳು ಕೂಡಾ ಮೈಕ್ರೋ ಚಿಪ್ ನಲ್ಲಿ ಸಂಗ್ರಹ ಮಾಡಲಾಗುತ್ತದೆ. ಇದರಿಂದ ಯಾವುದೇ ಒಬ್ಬ ವ್ಯಕ್ತಿ ಟ್ರಾಫಿಕ್ ರೂಲ್ಸ್ ಗಳನ್ನು ಮುರಿದರೆ ಪೊಲೀಸರು QR ಕೋಡ್ ಮತ್ತು ಮೈಕ್ರೋ ಚಿಪ್ ಬಳಸಿ ಸುಲಭವಾಗಿ ಪತ್ತೆಹಚ್ಚಲಿದ್ದಾರೆ.
ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಇನ್ನೊಂದು ಮಹತ್ವದ ನಿರ್ಧಾರ ಎಂದರೆ ಇನ್ನು ಮುಂದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಇದರಿಂದ ಹಲವಾರು ಅನುಕೂಲಗಳಿವೆ. ಹಲವಾರು ಕಾರಣಗಳಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ ಬಳಕೆ ಮಾಡುವ ಹಾಗೂ ಕೆಲವು ಸುರಕ್ಷತಾ ಕ್ರಮಗಳಿಂದಾಗಿ ಐರೀಸ್ ಬೆರಳಚ್ಚು ಬಯೋಮೆಟ್ರಿಕ್ ದಾಖಲೆಗಳನ್ನು ಹೊಂದಿರುವ ಆಧಾರ್ ಕಾರ್ಡ್ ಅನ್ನು ಡ್ರೈವಿಂಗ್ ಲೈಸೆನ್ಸ್ ಗೆ ಲಿಂಕ್ ಮಾಡುವುದರಿಂದ ಡುಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಿ ಸಧ್ಯದಲ್ಲೇ ಕೇಂದ್ರ ಸರ್ಕಾರ ಇದನ್ನು ಜಾರಿಗೆ ತರಲಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲಿ ಏಕರೂಪದ ಡ್ರೈವಿಂಗ್ ಲೈಸೆನ್ಸ್ ಹಾಗೂ ಇದರ ಜೊತೆಗೆ ಆಧಾರ್ ಕಾರ್ಡ್ ಕಡ್ಡಾಯ ಇವೆರಡು ಕೇಂದ್ರ ಸರ್ಕಾರದ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿ ತೆಗೆದುಕೊಂಡ ಮಹತ್ವದ ನಿರ್ಧಾರಗಳಾಗಿವೆ.