ತೆಲುಗಿನಲ್ಲಿ ಸಾವಿರಾರು ಎಪಿಸೋಡ್ ಪ್ರಸಾರವಾಗಿ ಒಂದು ಸಂಚಲನ ಸೃಷ್ಟಿಸಿದ ಸೀರಿಯಲ್ ಎಂದರೆ ಅದು ‘ಚಕ್ರವಾಕಮ್’ ಎನ್ನುವ ಸೀರಿಯಲ್. ಈ ಸೀರಿಯಲ್ ನಲ್ಲಿ ಹೀರೋ ಪಾತ್ರ ಮಾಡುತ್ತಿದ್ದ ಇಂದ್ರನೀಲ್ ವರ್ಮಾ ಮಾಡಿದ್ದನ್ನು ನೋಡಿ ಇಡೀ ಸೀರಿಯಲ್ ತಂಡ ಶಾಕ್ ಆಗಿದೆ. ಚಕ್ರವಾಕಮ್ ಸೀರಿಯಲ್ ನ ಸಾವಿರಾರು ಎಪಿಸೋಡ್ ಗಳಲ್ಲಿ ತನ್ನ ಅತ್ತೆಯಾಗಿ ನಟಿಸಿದ ಮೇಘನಾ ಅವರನ್ನು ಪ್ರೀತಿಸಿ ವಿವಾಹ ಆಗಿದ್ದರು ಇಂದ್ರನೀಲ್. ಮಗಳನ್ನು ಕೊಟ್ಟ ಅತ್ತೆಯನ್ನೇ ಮದುವೆ ಆದೇ ಎಂದು ಸೀರಿಯಲ್ ನ ಪ್ರತಿಯೊಬ್ಬರೂ ಚುಡಾಯಿಸುತ್ತಿದ್ದರು. ಅಷ್ಟೇ ಅಲ್ಲದೇ ಇಂದ್ರನೀಲ್ ಮತ್ತು ಮೇಘನಾ ಅವರು ಜೊತೆಯಾಗಿ ಎಲ್ಲೇ ಹೊರಗಡೆ ಹೋದರೂ ಸಹ ಎಲ್ಲಾ ಜನರೂ ಸಹ ಮೇಘನಾ ಅವರನ್ನ ನೋಡಿ ಇವರು ನಿಮ್ಮ ಅತ್ತೆ ಅಲ್ಲವಾ ಎಂದು ಕೇಳುತ್ತಿದ್ದರಂತೆ.
ಜನರ ಪ್ರಶ್ನೆಗೆ ಇಂದ್ರನೀಲ್ ಆಕೆ ಸೀರಿಯಲ್ ನಲ್ಲಿ ಮಾತ್ರ ಅತ್ತೆ , ನಿಜ ಜೀವನದಲ್ಲಿ ಆಕೆ ತನ್ನ ಹೆಂಡತಿ ಎಂದು ಹೇಳಿದರೆ ಏನಪ್ಪಾ ನೀನು ಅತ್ತೆಯನ್ನೇ ವಿವಾಹ ಆಗಿದ್ದೀಯ ಎಂದೇ ಕೇಳುತ್ತಿದ್ದರಂತೆ. ಅಂದರೆ ಜನರಲ್ಲಿ ಸೀರಿಯಲ್ ಪ್ರಭಾವ ಎಷ್ಟು ಗಾಢವಾಗಿ ಇರಬಹುದು?? ಪಾಪ ಈ ಜೋಡಿಗೆ ಕೂಡಾ ಇದೆ ಸಮಸ್ಯೆ ಆಗಿದೆ. ಸೀರಿಯಲ್ ವರ್ಷಾನುಗಟ್ಟಲೆ ಪ್ರಸಾರ ಆಗುವ ಕಾರಣ ನಟ ನಟಿಯರ ನಿಜವಾದ ಹೆಸರು ಯಾರಿಗೂ ತಿಳಿದೇ ಇರಲ್ಲ. ಸೀರಿಯಲ್ ನ ಹೆಸರಿನಿಂದಲೇ ಕರೆಯುತ್ತಾರೆ. ಇವರ ಕಥೆಯೂ ಹಾಗೆ, ವರ್ಷಾನುಗಟ್ಟಲೆ ಅತ್ತೆ ಹಾಗೂ ಅಳಿಯನ ಜೋಡಿಯಾಗಿ ನೋಡಿದ ಜನರಿಗೆ ಇವರಿಬ್ಬರು ಅತ್ತೆ ಅಳಿಯ ಎಂದೇ ಮನಸಲ್ಲಿ ಫಿಕ್ಸ್ ಆಗಿದೆ. ಅಸಲಿಗೆ ಮೇಘನಾಗೆ ಅಷ್ಟೊಂದು ವಯಸ್ಸೆನು ಆಗಿಲ್ಲ ದಪ್ಪ ಇರುವ ಕಾರಣ ಅತ್ತೆ ಪಾತ್ರ ಮಾಡುತ್ತಾ ಇದ್ದರಂತೆ ಅಷ್ಟೇ. ಆದರೆ ಇಂದ್ರ ನೀಲ್ ಆಕೆಯ ಸೌಂದರ್ಯ ನೋಡದೇ ಮನಸ್ಸನ್ನು ನೋಡಿ ಪ್ರೀತಿಸಿ ವಿವಾಹ ಆಗಿದ್ದಾರೆ.