ಕೆಲವು ವ್ಯಾಪಾರಸ್ಥರು ಜನರನ್ನ ಹೇಗೆಲ್ಲ ಮೊಸಗೊಳಿಸುತ್ತಾರೆ. ಒಂದು ಕ್ಷಣ ಮೈ ಮರೆತರೆ ನಾವು ಮೋಸ ಹೋಗುತ್ತೇವೆ ಅಷ್ಟು ಚಾಲಾಕಿತನ ಅವರಲ್ಲಿರತ್ತೆ.ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ವಸ್ತುಗಳನ್ನೇ ಬದಲಾಯಿಸುವ ಚಾಲಾಕಿತನ ಅವರಲ್ಲಿ ಇರತ್ತೆ. ಇಂತಹದ್ದೇ ಕೆಲವು ವ್ಯಾಪಾರಿಗಳು ಜನರಿಗೆ ಹೇಗೆಲ್ಲಾ ಯಾಮಾರಿಸಿ ಮೋಸ ಮಾಡುತ್ತಾರೆ ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದನ್ನ ನೋಡೋಣ.
ತಳ್ಳುವ ಗಾಡಿಯಲ್ಲಿ ಹಣ್ಣುಗಳ ಮಾರಾಟಕ್ಕೆ ಬಂದಾಗ ಒಬ್ಬ ಮಹಿಳೆ ಒಳ್ಳೆ ಒಳ್ಳೆಯ ಹಣ್ಣುಗಳನ್ನು ಆರಿಸಿ ಪ್ಯಾಕ್ ಮಾಡೋಕೆ ಅಂತ ಕೊಡ್ತಾರೆ ಆದರೆ ಆ ವ್ಯಾಪಾರಿ ಪ್ಯಾಕೆಟ್ ಚೇಂಜ್ ಮಾಡಿ ತಾನು ಮೊದಲೇ ಮಾಡಿಟ್ಟ ಪ್ಯಾಕೆಟ್ ಬದಲಿಸಿ ಕೊಡ್ತಾನೆ. ಆ ಮಹಿಳೆಗೆ ಪೂರ್ತಿ ಹಣ ಕೊಟ್ಟಮೇಲೆ ಒಂದೋ ಕಡಿಮೆ ಹಣ್ಣುಗಳು ಸಿಕ್ಕಿರತ್ತೆ ಅಥವಾ ಆಕೆ ಆರಿಸಿದ ಒಳ್ಳೆಯ ಹಣ್ಣುಗಳ ಬದಲಿಗೆ ಕೆಟ್ಟುಹೋದ ಹಣ್ಣುಗಳು ಸಿಕ್ಕಿರತ್ತೆ. ಇನ್ನು ಅಂಗಡಿಗಳ್ಲಲಿ ಏನೂ ಕಡಿಮೆ ಇರಲ್ಲ.. ಗ್ರಾಹಕರಿಗೆ ಮೋಸ ಮಾಡೊಕೆ ಸದಾ ಸಿದ್ಧ. ಎರಡೂ ಕೈಗಳು ವೇಗವಾಗಿ ಕಾರ್ಯ ನಿರ್ವಹಿಸುತ್ತವೆ. ಇವರಿಗೆ ತೂಕ ಮಾಡೋಕೂ ಹಣ್ಣು ಬೇಕು ಮೋಸ ಮಾಡೋಕೂ ಹಣ್ಣು ಬೇಕು.ಮೊದಲೇ ನಾವು ಆರಿಸಿಕೊಟ್ಟ ಹಣ್ಣುಗಳ ಜೊತೆಗೆ ಅದನ್ನು ಹೊರತಾಗಿ ಇನ್ನೊಂದು ಹಣ್ಣನ್ನು ಬೇರೆಯಾಗಿ ಇಟ್ಟು ತೂಕದಲ್ಲಿ ವ್ಯತ್ಯಾಸ ಬರುವಂತೆ ಮಾಡುತ್ತಾರೆ. ಇವೆಲ್ಲ ಒಂದು ಕಡೆ ಆದರೆ ಇನ್ನೂ ತರಕಾರಿ ತೆಗೆದುಕೊಳ್ಳುವಾಗ ಒಳ್ಳೆ ತರಕಾರಿಯನ್ನ ಏನೋ ಆಯ್ಕೆ ಮಾಡಿಯೇ ತರ್ತೀವಿ ಆದರೆ ಈ ವಿಚಾರಗಳ ಬಗ್ಗೆಯೂ ನಾವು ತಿಳಿದಿರಬೇಕು.
ರೈತರು ಶ್ರಮಅವಹಿಸಿ ಬೆಳೆದ ತರಕಾರಿಗಳನ್ನು ಅವರಿಂದ ಅರ್ಧ ಬೆಲೆಗೆ ತಂದ ಮಧ್ಯವರ್ತಿಗಳು ತಾವು ಮಾತ್ರ ಮಾರ್ಕೆಟ್ ನಲ್ಲಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಾರೆ. ತೆಗೆದುಕೊಂಡ ಹಣಕ್ಕೆ ಸರಿಯಾದ ತರಾಕಾರಿಯನ್ನೇ ಕೊಡುತ್ತಾರೆ ಅಂದುಕೊಂಡರೆ ಅದು ನಮ್ಮ ಮೂರ್ಖತನ ಎನ್ನಬಹುದು. ತರಕಾರಿಗಳನ್ನು ಕೊಳಚೆ , ಚರಂಡಿ ನೀರಿನಲ್ಲಿ ತೊಳೆದು ನೋಡೋಕೆ ಸ್ವಚ್ಛವಾಗಿ ಇರುವಂತೆ ಮಾಡಿ ಮಾರಾಟ ಮಾಡುತ್ತಾರೆ. ಇಂತಹ ತರಕಾರಿಗಳನ್ನು ಕೊಂಡುಕೊಂಡರೆ ಬೈ ಒನ್ ಗೆಟ್ ಒನ್ ಫ್ರೀ ತರಾ ಇಂತಹ ತರಕಾರಿ ತಂದರೆ ಜೊತೆಗೆ ರೋಗಗಳೂ ಬರೋದರಲ್ಲಿ ಅನುಮಾನವಿಲ್ಲ. ಇನ್ನು ಕೆಲವೊಂದಿಷ್ಟು ಹಣ್ಣು ತರಕಾರಿಗಳಿಗೆ ರಾಸಾಯನಿಕ ತುಂಬಿದ ಬಣ್ಣಗಳನ್ನ ಹಾಕುವುದು, ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಹೀಗೆ ಜನರಿಗೆ ಮೋಸ ಮಾಡಿ ವ್ಯಾಪಾರ ಮಾಡುವವರು ಇದ್ದಾರೆ. ಇಂತಹ ಪದಾರ್ಥಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಅಂತಹ ರೋಗಗಳು ಬರುತ್ತೆ. ಇನ್ನೂ ವಿಚಿತ್ರ ಎನಿಸುವ ಸಂಗತಿ ಎಂದರೆ, ಶೇಂಗಾ ಎಣ್ಣೆ ಮಾರ್ಕೆಟ್ ನಲ್ಲಿ ಶೇಂಗಾ ಎಣ್ಣೆ 1 ಕೆಜಿ ಗೆ 100ರೂಪಾಯಿ ಅಂತೆ ಸಿಗತ್ತೆ. ಆದ್ರೆ 1 ಕೆಜಿ ಶೇಂಗಾ ಎಣ್ಣೆ ತೆಗಿಯೋಕೆ ಸಾಮಾನ್ಯವಾಗಿ 3ಕೆಜಿ ಶೇಂಗಾ ಬೇಕಾಗತ್ತೆ. ಆದರೆ ಶೇಂಗಾ 1 ಕೆಜಿ ಗೆ 100 ರೂಪಾಯಿ ಆದ್ರೆ 3 ಕೆಜಿ ಗೆ 300 ರೂಪಾಯಿ ಆಗತ್ತೆ. ಹೀಗಿದ್ದಾಗ ನಮಗೆ 1 ಕೆಜಿ ಎಣ್ಣೆ 100 ರೂಪಾಯಿಗೆ ಹೇಗೆ ಸಿಗೋಕೆ ಸಾಧ್ಯ? ಒಂದು ತೂಕ ಕಡಿಮೆ ಇರಬೇಕು ಇಲ್ಲಾ ಬೇರೆ ಯಾವುದೇ ಎಣ್ಣೆಯನ್ನ ಮಿಕ್ಸ್ ಮಾಡಿರಬೇಕು.
ತರಕಾರಿಗಳಿಗೆ ಬಣ್ಣ ಹಚ್ಚಿದ್ದು ತಿಳಿಯಬೇಕು ಅಂತಿದ್ದರೆ ಅವುಗಳ ಮೇಲೆ ಕಾಟನ್ ಬಟ್ಟೆಯಿಂದ ಉಜ್ಜಿದಾಗ ತಿಳಿಯುತ್ತೆ. ಹಸಿರು ಬಟಾಣಿಗಳ ಬಣ್ಣ ನಿಜವಾಗಿಯೂ ಹಸಿರೋ ಅಥವಾ ಬಣ್ಣ ಹಾಕಿರುವುದೋ ಎನ್ನೋದನ್ನ ತಿಳಿಯಲು ನೀರಲ್ಲಿ ಹಾಕಿದಾಗ ತಿಳಿಯುತ್ತೆ. ಹೀಗೆ ನಾವು ನಮಗೆ ತಿಳಿಯದಂತೆ ಅನೇಕ ವಿಷಯಗಳಲ್ಲಿ ಮೋಸ ಹೋಗುತ್ತ ಇರುತ್ತೇವೆ. ಹಾಗಾಗಿ ನಾವು ಏನೇ ಖರೀದಿ ಮಾಡುವ ಮುನ್ನ ಯೋಚನೆ ಮಾಡಿ ಖರೀದಿಸುವುದು ಉತ್ತಮ.