ಮನೆಯಲ್ಲಿ ದಟ್ಟವಾಗಿ ಹಾಗೂ ಸಮೃದ್ಧಿಯಾಗಿ ತುಳಸಿ ಗಿಡವನ್ನು ಹೇಗೆ ಬೆಳೆಸಬಹುದು ಎನ್ನುವುದರ ಕುರಿತಾಗಿ ತಿಳಿದುಕೊಳ್ಳೋಣ. ತುಳಸಿಗಿಡ ದಟ್ಟವಾಗಿ, ಸದಾಕಾಲ ಹಸಿರಾಗಿ ಬೆಳೆದು ಇರಬೇಕು ಅಂದರೆ ನಾವು ಈ ವಿಧಾನಗಳನ್ನು ಅನುಸರಿಸಬೇಕು. ತುಳಸಿಗಿಡ ತಾನು ಬೆಳೆಯುತ್ತಾ ಬೀಜದ ಕುಡಿಗಳನ್ನು ಬೆಳೆಸುತ್ತೆ ಹೀಗೆ ಬೆಳೆದ ಕುಡಿಗಳು ಬಂದಾಗ ಅವುಗಳನ್ನು ಕತ್ತರಿಸಬೇಕು. ಕುಡಿಗಳನ್ನು ತೆಗಿಯದೆ ಇದ್ದಾಗ ಕ್ರಮೇಣ ತುಳಸಿಗಿಡ ಒಣಗಲು ಆರಂಭ ಆಗುತ್ತೆ. ತುಳಸೀ ಗಿಡವನ್ನು ನಾವು ನೆಟ್ಟ ತಕ್ಷಣ, ತುಳಸಿ ಗಿಡ ಬೆಳೆಯೋಕೆ ಬಿಸಿಲು ಬೇಕು ಅಂತ ತುಂಬಾ ಬಿಸಿಲಿನಲ್ಲಿ ಇಡಬಾರದು. ಆಗ ತಾನೇ ನೆಟ್ಟ ಗಿಡ ತುಂಬಾ ಬಿಸಿಲಿಗೆ ಇಟ್ಟಾಗ ಬಾಡಿ ಹೋಗುವ ಸಾಧ್ಯತೆ ಹೆಚ್ಚು. ಹಾಗಾಗಿ ಎರಡು ಮೂರು ದಿನಗಳ ನಂತರ ಬಿಸಿಲಿನಲ್ಲಿ ಇಡಬೇಕು. ತುಳಸಿ ಗಿಡದ ಸುತ್ತಲೂ ಬಿದ್ದಂತಹ ಎಲೆಗಳನ್ನು ಕಸಗಳನ್ನು ಆಗಾಗ ಸ್ವಚ್ಛಗೊಳಿಸಬೇಕು ಇಲ್ಲವಾದಲ್ಲಿ ಅವು ಅಲ್ಲೇ ಕೊಳೆತು ಬೇರೆ ಕ್ರಿಮಿಗಳು ಉತ್ಪತ್ತಿ ಆಗಿ ತುಳಸಿ ಗಿಡದ ಬೆಳವಣಿಗೆ ಕುಂಟಿತವಾಗುತ್ತೆ. ತುಳಸಿ ಗಿಡದ ಸುತ್ತಲಿನ ಮಣ್ಣನ್ನು ಯಾವುದೇ ಕಾರಣಕ್ಕೂ ಗಟ್ಟಿ ಆಗೋಕೆ ಬಿಡದೇ ಯಾವುದೇ ಹರಿತವಾದ ವಸ್ತುವಿನಿಂದ ಮಣ್ಣನ್ನು ಸಡಿಲಗೊಳಿಸಿಕೊಡಬೇಕು. ಇದರಿಂದ ಗಿಡಕ್ಕೆ ಸರಾಗವಾಗಿ ಗಾಳಿ ಮತ್ತು ನೀರಿನ ಪೂರೈಕೆಯಾಗಿ ಗಿಡದ ಬೆಳವಣಿಗೆಗೆ ಸಹಾಯಕಾರಿ ಆಗುತ್ತೆ.
ತುಳಸಿ ಗಿಡವನ್ನ ನೆಟ್ಟು ಒಂದೆರಡು ದಿನಗಳಲ್ಲಿ ಅದು ಬಾಡಿದಂತೆ ಕಂಡರೂ ಸಹ ನಂತರ ಕ್ರಮೇಣ ಚಿಗುರೋಕೆ ಆರಂಭ ಆಗುತ್ತೆ. ಚಿಗುರಿದ ನಂತರ ಮತ್ತೆ ಬಿಸಿಲಿನಲ್ಲಿ ಇಡಬೇಕು. ತುಳಸಿ ಗಿಡ ಫಲವಾತ್ತಾಗಿ ಬೆಳೆಯಬೇಕು ಅಂದರೆ ಆರ್ಗ್ಯಾನಿಕ್ ಗೊಬ್ಬರ ಅಥವಾ ಎರಹುಳು ಗೊಬ್ಬರವನ್ನೇ ಬಳಕೆ ಮಾಡುವುದು ಉತ್ತಮ. ಗೊಬ್ಬರ ಹಾಕಿದ ತಕ್ಷಣ ಮಣ್ಣಿನಲ್ಲಿ ಗೊಬ್ಬರವನ್ನು ಕಲಸಬೇಕು ಮಣ್ಣಿನಲ್ಲಿ ಹಾಕಿ ಕಲಸಿದಾಗ ಗೊಬ್ಬರವನ್ನ ತುಳಸಿ ಗಿಡದ ಬೇರು ಸರಿಯಾಗಿ ಹಿಡಿದುಕೊಂಡು ಬೆಳವಣಿಗೆಗೆ ಸಹಾಯಕಾರಿ ಆಗುತ್ತೆ. ಆದಷ್ಟು ಆರ್ಗ್ಯಾನಿಕ್ ಗೊಬ್ಬರ ಬಳಕೆ ಮಧ್ಯವುದರಿಂದ ನಮಗೇನಾದರೂ ಆರೋಗ್ಯದ ಸಮಸ್ಯೆ ಬಂದಾಗ ಯಾವುದೇ ಅನುಮಾನವಿಲ್ಲದೆ ತುಳಸೀ ಗಿಡವನ್ನು ಹಾಗೂ ಅದರ ಎಲೆಗಳನ್ನು ಬಳಕೆ ಮಾಡಬಹುದು. ಇನ್ನು ತುಳಸಿ ಗಿಡಕ್ಕೆ ಒಂದೇ ಬಾರಿಗೆ ನೀರನ್ನು ಹಾಕಬಾರದು ಮಿತವಾಗಿ ಸ್ವಲ್ಪ ಸ್ವಲ್ಪವಾಗಿ ನೀರನ್ನು ಹಾಕಬೇಕು ಜಾಸ್ತಿ ನೀರು ಹಾಕಿದ್ರೆ ತುಳಸಿ ಗಿಡದ ಬೇರು ಅಲ್ಲೇ ಕೊಳೆಯುವ ಸಾಧ್ಯತೆ ಇದ್ದು ಗಿಡ ಬೆಳವಣಿಗೆ ಆಗಲ್ಲ.
ತುಳಸಿ ಗಿಡ ವೇಗವಾಗಿ ಒಂದೆರಡು ದಿನಗಳಲ್ಲಿ ಬೆಳೆಯಬೇಕು ಅಂತ ಇದ್ದರೆ ಅದಕ್ಕೆ ಒಂದು ಸ್ಪೂನ್ ಅಷ್ಟು ಎಫ್ಸಮ್ ಸಾಲ್ಟ್ ಅನ್ನು ಹಾಕಿದರೆ ಬಹಳ ವೇಗವಾಗಿ ಬೆಳೆಯುತ್ತೆ. ಎಫ್ಸಮ್ ಸಾಲ್ಟ್ ಎಲೆಗಳಿಗೆ ತಾಗದಂತೆ ಗಿಡದ ಸುತ್ತಲೂ ಹಾಕಿ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ತುಳಸಿ ಗಿಡದ ಎಲೆಗಳು ಒಣಗಿಯೋ ಅಥವಾ ಕೆಲವು ಕೀಟಗಳು ತಿಂದು ಹಳದಿ ಬಣ್ಣಕ್ಕೆ ಬಂದಿರತ್ತೆ ಆಗ ಒಂದು ಲೀಟರ್ ನೀರಿಗೆ ಒಂದು ಸ್ಪೂನ್ ಎಫ್ಸಮ್ ಸಾಲ್ಟ್ ಮಿಕ್ಸ್ ಮಾಡಿ ಆ ನೀರನ್ನು ವಾರಕ್ಕೆ ಒಮ್ಮೆ ಗಿಡಕ್ಕೆ ಸ್ಪ್ರೇ ಮಾಡಬೇಕು. ಬೇಸಿಗೆಯಲ್ಲಿ ತುಂಬಾ ಬಿಸಿಲು ಇದ್ದಾಗ ತುಳಸಿ ಗಿಡ ಉಷ್ಣ ಅಂಶವನ್ನು ತಡೆಯಲು ಗಿಡದ ಬುಡದಲ್ಲಿ ಸ್ವಲ್ಪ ತೆಂಗಿನ ನಾರು ಅಥವ ಸಿಪ್ಪೆಯನ್ನು ಸಣ್ಣದಾಗಿ ಕಟ್ ಮಾಡಿ ಹಾಕಿಡಬೇಕು. ಇದರಿಂದ ಉಷ್ಣವನ್ನು ಹೀರಿಕೊಂಡು ತುಳಸಿ ಗಿಡ ಹಸಿರಾಗಿ ಇರತ್ತೆ. ಈ ರೀತಿಯಾಗಿ ನಾವು ಸುಲಭವಾಗಿ ತುಳಸಿ ಗಿಡವನ್ನು ಬೆಳೆಸಿಕೊಂಡು ಸದಾಕಾಲ ಹಸಿರಾಗಿ ಇಟ್ಟುಕೊಳ್ಳಬಹುದು.ಈ ಕೆಳಗಿನ ವಿಡಿಯೋ ನೋಡಿ..