ಇವತ್ತು ತಿಳಿಸಿ ಕೊಡುವಂತಹ ವಿಷಯ ಬಹಳಷ್ಟು ಜನರಿಗೆ ಪ್ರಯೋಜನಕಾರಿಯಾಗಬಹುದು. ರಾಗಿ ಗಂಜಿ ಅಥವಾ ರಾಗಿ ಮಾಲ್ಟ್ ಇದೊಂದು ಉತ್ತಮವಾದ ಪಾನೀಯ ಅಥವಾ ಪೇಯ ಅಂತಲೇ ಹೇಳಬಹುದು. ಬಹಳಷ್ಟು ಜನ ಪಾಶ್ಚಿಮಾತ್ಯ ದೇಶಗಳಿಂದ ಪೂರೈಕೆಯಾಗುವಂತಹ ಮಾಲ್ಟ ಗಳನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ ವಿದೇಶಗಳಿಂದ ಬಂದಂತಹ ಯಾವುದೇ ಒಂದು ಪಾನೀಯಗಳ ಬಗ್ಗೆ ನಂಬಿಕೆ ಇಡುವುದು ಸ್ವಲ್ಪ ಕಷ್ಟ ಸಾಧ್ಯ. ಆದರೂ ಸಹ ನಾವು ಇಂದಿಗೂ ಅದೇ ಬಹಳ ರುಚಿಕರ ಹಾಗೂ ಒಳ್ಳೆಯದು ಅಂತ ಅದನ್ನು ಸೇವನೆ ಮಾಡುತ್ತಿದ್ದೇವೆ. ಯಾವುದನ್ನಾದರೂ ಸುಲಭವಾಗಿ ನಂಬುವುದು ಅಸಾಧ್ಯ. ಹಾಗಾಗಿ ನಮ್ಮಲ್ಲಿ ದೊರಕುವಂತಹ ರಾಗಿ ಇದು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ರಾಗಿ ಮಾಲ್ಟ್ ಹೇಗೆ ತಯಾರಿಸುವುದು ಅದರಿಂದ ನಮಗೆ ಆಗುವಂತಹ ಪ್ರಯೋಜನಗಳೇನು ಅನ್ನುವುದರ ಬಗ್ಗೆ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

ರಾಗಿ ಮಾಲ್ಟ್ ಮಾಡುವುದು ತುಂಬಾ ಸುಲಭ. ರಾಗಿಹಿಟ್ಟನ್ನು ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಏಲಕ್ಕಿ ಲವಂಗ ಚಕ್ಕೆ ಎಲ್ಲವನ್ನು ಸೇರಿಸಿ ಬೇಕಿದ್ದಲ್ಲಿ ದ್ರಾಕ್ಷಿ ಗೋಡಂಬಿಯನ್ನು ಸಹ ಸೇರಿಸಿ ಸ್ವಲ್ಪ ಬಿಸಿಮಾಡಿಕೊಂಡು ಇದನ್ನು ಸೇವಿಸಬಹುದು. ಈ ರೀತಿಯಾಗಿ ರಾಗಿ ಮಾಲ್ಟ್ ಮಾಡಿಕೊಂಡು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸೇವಿಸಬಹುದು. ರಾಗಿ ಇದು ಶೀತಕಾರಕ ಪದಾರ್ಥವಾಗಿದ್ದು ನಮ್ಮ ದೇಹಕ್ಕೆ ತಂಪನ್ನು ನೀಡುತ್ತದೆ. ಡಯಾಬಿಟಿಸ್ ಇರುವಂತಹ ವ್ಯಕ್ತಿಗಳಿಗೆ ಇದು ಹೇಳಿಮಾಡಿಸಿದ ಆಹಾರ ಎಂತಲೇ ಹೇಳಬಹುದು. ದೇಹಕ್ಕೆ ಶಕ್ತಿಯನ್ನು ನೀಡುವುದರ ಜೊತೆಗೆ ತೂಕ ಇಳಿಸುವಲ್ಲಿ ಸಹ ಸಹಾಯಕಾರಿಯಾಗುತ್ತದೆ. ದೇಹದಲ್ಲಿ ಉಷ್ಣಾಂಶತೆಯನ್ನು ಕಡಿಮೆಮಾಡಲು ಸಹಾಯಕಾರಿಯಾಗುತ್ತದೆ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಸೇವಿಸಬಹುದು. ಗರ್ಭಿಣಿಯರು ಬಾಣಂತಿಯರು ಸಹ ಸೇವಿಸಬಹುದು. ಚಿಕ್ಕ ಮಕ್ಕಳಿಗೆ ಆಹಾರಾಭ್ಯಾಸವನ್ನು ಮಾಡುವುದಕ್ಕಿಂತ ಪೂರ್ವದಲ್ಲಿ ಮಕ್ಕಳಲ್ಲಿ ಗಟ್ಟಿ ಆಹಾರವನ್ನು ಜೀರ್ಣ ಮಾಡಿಕೊಳ್ಳುವಂತಹ ಶಕ್ತಿ ಇರುವುದಿಲ್ಲ ಹಾಗಾಗಿ ರಾಗಿ ಮಾಲ್ಟ್ ಮಾಡಿ ಕೊಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.

ಇಷ್ಟಲ್ಲದೆ ರಾಗಿ ಗಂಜಿಯನ್ನು ಪಿತ್ತ ಸಂಬಂಧಿತ ಕಾಯಿಲೆಗಳನ್ನು ಸಹ ಬಳಕೆ ಮಾಡಬಹುದು. ಹಳೆ ಕಾಲದಲ್ಲಿ ರಾಗಿ ಗಂಜಿ ಅನ್ನೋದು ಬಹಳಷ್ಟು ಪ್ರಚಲಿತದಲ್ಲಿ ಇದ್ದಿತ್ತು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಮರೆತಿರಬಹುದು ಹಾಗಾಗಿ ನಮ್ಮ ಪುರಾತನ ಪದ್ಧತಿಯನ್ನು ಮತ್ತೆ ಆರಂಭಿಸಬಹುದು. ಇದರಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!