ವಿಟಮಿನ್ ಈ ಇಂದ ನಮ್ಮ ಮುಖಕ್ಕೆ ಬಹಳಷ್ಟು ಪ್ರಯೋಜನಗಳು ಇವೆ. ವಿಟಮಿನ್ ಈ ಇಂದ ನಮ್ಮ ಮುಖದಲ್ಲಿನ ನೆರಿಗೆಗಳನ್ನು , ಕಲೆಗಳನ್ನು ನಿವಾರಿಸಸಿಕೋಂಡು ಕಾಂತಿಯುತವಾಗಿ ಮುಖ ಹೊಳೆಯುವಂತೆ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ವಿಟಮಿನ್ ಈ ನಮ್ಮ ಮುಖಕ್ಕೆ ಮಾತ್ರ ಅಲ್ಲದೆ ಕೂದಲಿನ ಬೆಳವಣಿಗೆಗೆ ಸಹ ಬಹಳ ಒಳ್ಳೆಯದು. ವಿಟಮಿನ್ ಈ ಕ್ಯಾಪ್ಸೂಲ್ ನಿಂದಾಗಿ ಮುಖದಲ್ಲಿ ನೆರಿಗೆಗಳು , ಕಣ್ಣಿನ ಕೆಳಗೆ ಕಪ್ಪು ಸರ್ಕಲ್ ಆಗಿದ್ದರೆ ಅದನ್ನು ಸಹ ಕಡಿಮೆ ಮಾಡುತ್ತದೆ ಮೊಡವೆಗಳಿಂದ ಉಂಟಾದ ಕಲೆಗಳನ್ನು ಸಹ ನಿವಾರಣೆ ಮಾಡುತ್ತದೆ. ವಿಟಮಿನ್ ಈ ಕ್ಯಾಪ್ಸೂಲ್ ಅನ್ನು ನಮ್ಮ ಮುಖಕ್ಕೆ ಹೇಗೆ ಬಳಸುವುದು ಎನ್ನುವುದನ್ನು ನೋಡೋಣ. ಇದರ ಬಳಕೆಗೂ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನಂತರ ಐದು ನಿಮಿಷ ಮುಖಕ್ಕೆ ಬಿಸಿನೀರಿನಲ್ಲಿ ಕಾಟನ್ ಬಟ್ಟೆ ಅದ್ದಿಕೊಂಡು ಶಾಖ ಕೊಟ್ಟುಕೊಳ್ಳಬೇಕು. ವಾರದಲ್ಲಿ ಒಮ್ಮೆ ವಿಟಮಿನ್ ಈ ಕ್ಯಾಪ್ಸೂಲ್ ನಿಂದ ಮಸಾಜ್ ಮಾಡಿಕೊಂಡರು ಸಾಕು. ಒಂದು ಕ್ಯಾಪ್ಸೂಲ್ ತೆಗೆದುಕೊಂಡು ಅದನ್ನ ಓಪನ್ ಮಾಡಿ ಆಯಿಲ್ ತಗೆದುಕೊಂಡು ಮುಖಕ್ಕೆ ಮಸಾಜ್ ಮಾಡಬೇಕು. ಇದರಿಂದ ಮುಖದ ಚರ್ಮ ಬಿಗಿಯಾಗಿರುತ್ತದೆ. ಕಣ್ಣಿನ ಸುತ್ತಲೂ ಕೂಡಾ ಮಸಾಜ್ ಮಾಡುವುದರಿಂದ ಕಣ್ಣಿನ ಸಮಸ್ಯೆಗಳು ಹಾಗೂ ಡಾರ್ಕ್ ಸರ್ಕಲ್ಸ್ ಇದ್ದರೆ ಅದೂ ಸಹ ನಿವಾರಣೆ ಆಗುತ್ತದೆ. ಇದನ್ನು ಐದು ನಿಮಿಷ ಮಸಾಜ್ ಮಾಡಿದ ನಂತರ ಮುಖವನ್ನು ತೊಳೆಯಬೇಕು.
ನಂತರ ವಿತಮಿನ್ ಈ ಇಂದ ಮಾಸ್ಕ್ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ನೋಡೋಣ. ಒಂದು ಬೌಲ್ ಗೆ ಒಂದು ನಿಂಬೆ ಹಣ್ಣಿನ ರಸ, ಟೋನರ್ /ರೋಸ್ ವಾಟರ್ ಹಾಗೂ ಒಂದು ವಿಟಮಿನ್ ಈ ಕ್ಯಾಪ್ಸೂಲ್ ಆಯಿಲ್ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮುಖ ತೊಳೆಯಬೇಕು. ಬೆಳಿಗ್ಗೆ ಸ್ನಾನ ಆದ ನಂತರ ಮಾಯಿಶ್ಚರೈಸರ್ ಆಗಿ ವಿಟಮಿನ್ ಇ ಕ್ಯಾಪ್ಸೂಲ್ ಅನ್ನು ಹೇಗೆ ಬಳಕೆ ಮಾಡುವುದು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಒಂದು ಬೌಲಿ ನಲ್ಲಿ ಸ್ವಲ್ಪ ಆಲಿವ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಂಡು ವಿಟಮಿನ್ ಇ ಕ್ಯಾಪ್ಸೂಲ್ ನಲ್ಲಿ ಇರುವಂತ ಆಯಿಲ್ ಅನ್ನು ತೆಗೆದುಕೊಂಡು ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿ ಹಾಗೆಯೂ ಬಿಡಲು ಬಹುದು ಅಥವಾ ಸ್ವಲ್ಪ ಸಮಯದ ನಂತರ ಮುಖ ತೊಳೆಯಲು ಬಹುದು. ಇದೆ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ರಾತ್ರಿ ಸಮಯದಲ್ಲಿ ಮಾಯಿಶ್ಚರೈಸರ್ ಆಗಿ ಬಳಸುವುದಾದರೆ ಒಂದು ಕಪ್ ತೆಗೆದುಕೊಂಡು ಅದಕ್ಕೆ ವಿಟಮಿನ್ ಇ ಕ್ಯಾಪ್ಸುಲ್ ನಲ್ಲಿ ಇರುವಂತಹ ಆಯಿಲ್ ಅನ್ನು ಹಾಕಿಕೊಂಡು ಅದರ ಜೊತೆಗೆ ನಿಮ್ಮ ಬಳಿ ಇರುವಂತಹ ಯಾವುದೇ ಎಸೆನ್ಶಿಯಲ್ ಆಯಿಲ್ ಸೇರಿಸಿ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಂಡು ಮಲಗಬೇಕು ಬೆಳಗ್ಗೆ ಎದ್ದ ನಂತರ ಮುಖ ತೊಳೆದುಕೊಳ್ಳಬೇಕು. ಈ ರೀತಿಯಾಗಿ ನಾವು ನಮ್ಮ ಮುಖದ ಆರೋಗ್ಯಕ್ಕಾಗಿ ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಬಳಸಿಕೊಳ್ಳಬಹುದು. ಈ ಕೆಳಗಿನ ವಿಡಿಯೋ ನೋಡಿ..