ಕೆಲವೊಂದಿಷ್ಟು ಕಾಯಿಲೆಗಳಿಗೆ ಪ್ರಕೃತಿಯೆ ರಾಮಬಾಣ ವಾಗಿರುತ್ತದೆ. ಪೈಲ್ಸ್ ಅನ್ನೋ ಕಾಯಿಲೆ ಎಲ್ಲರಿಗೂ ಈಗ ಸಹಜವಾಗಿ ಕಂಡುಬರುತ್ತದೆ. ಪೈಲ್ಸ್ ಕಾಯಿಲೆಯಲ್ಲಿ 9 ವಿಧಗಳಿವೆ. ಪೈಲ್ಸ್ ಕಾಯಿಲೆ ಬರೋದಿಕ್ಕೆ ಮುಖ್ಯವಾಗಿ ಕಾರಣ ನಾವು ಸೇವಿಸುವಂತಹ ಆಹಾರ ಪದಾರ್ಥಗಳು. ಇದರ ಜೊತೆಗೆ ನಮಗೆ ಪೈಲ್ಸ್ ಬರೋದಕ್ಕೆ ಮುಖ್ಯವಾಗಿ ಬೇರೆ ಇನ್ನೇನು ಕಾರಣಗಳು ಇರುತ್ತವೆ ಅನ್ನೋದನ್ನು ನೋಡೋಣ. ಹಾಗೆಯೇ ಪೈಲ್ಸ್ ಕಾಯಿಲೆಗೆ ಔಷಧಿ ಏನು ಅನ್ನೋದನ್ನು ಕೂಡಾ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪೈಲ್ಸ್ ಕಾಯಿಲೆ ಬರಲು ಕಾರಣಗಳು ಏನು ಅಂತ ನೋಡುವುದಾದರೆ ಮಲಬದ್ಧತೆ, ಅತಿಸಾರ, ಕಡಿಮೆ ಫೈಬರ್ ಅಂಶ ಇರುವ ಆಹಾರ ಸೇವನೆ, ಪ್ರಯಾಸದಿಂದ ಮಲವಿಸರ್ಜನೆ ಮಾಡುವುದು, ಕಡಿಮೆ ವ್ಯಾಯಾಮದ ಕೊರತೆ, ಗರ್ಭಧಾರಣೆ, ಸ್ಥೂಲಕಾಯ, ದೊಡ್ಡ ಕರುಳಿನ ಕ್ಯಾನ್ಸರ್, ಅನುವಂಶಿಕತೆ, ನಮ್ಮ ವಯಸ್ಸು, ದೀರ್ಘಕಾಲದ ಕೆಮ್ಮು ಇವಿಷ್ಟು ಪೈಲ್ಸ್ ಬರೋದಕ್ಕೆ ಪ್ರಮುಖವಾದಂತಹ ಕಾರಣಗಳು. ಪೈಲ್ಸ್ ಇದೆ ಅಂತ ಗೊತ್ತಾದ ತಕ್ಷಣ ಯಾವ್ಯಾವುದೋ ಆಸ್ಪತ್ರೆಗಳಿಗೆ ಹೋಗಿ ಆಪರೇಷನ್ ಮಾಡಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ನಮಗೆ ಗೊತ್ತಿರಲ್ಲ ನಮ್ಮ ಸುತ್ತಮುತ್ತಲಿರುವಂತಹ ಕೆಲವು ಗಿಡಮೂಲಿಕೆಗಳಿಂದ ನಾವು ಸಂಪೂರ್ಣವಾಗಿ ಈ ಕಾಯಿಲೆಯನ್ನು ನಿರ್ಣಾಮ ಮಾಡಬಹುದು ಅಂತ. ಪೈಲ್ಸ್ ನ ಒಂಬತ್ತು ರೀತಿಯ ವಿಧ ಗಳಿಗೂ ಸಹ ನಮ್ಮ ಮನೆಯಲ್ಲಿ ನಾವು ಔಷಧಿಯನ್ನು ಮಾಡಿಕೊಂಡು ಕಡಿಮೆ ಮಾಡಿಕೊಳ್ಳಬಹುದು.
ತುತ್ತಿ ಗಿಡ ಇದನ್ನ ಹೇಗೆ ಬಳಕೆ ಮಾಡುವುದು ಅಂದರೆ ತುಂಬಾ ನೋವು ಇರುವಂತಹವರು ತುತ್ತಿ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಬೇಕು. ಈ ಪೇಸ್ಟ್ ಗೆ ಸ್ವಲ್ಪ ಹರಳೆಣ್ಣೆಯನ್ನು ಮಿಶ್ರಣಮಾಡಿ ರಾತ್ರಿ ಮಲಗುವ ಟೈಮಿನಲ್ಲಿ ಗುದದ್ವಾರದ ಮೂಲಕ ಕಟ್ಟಬೇಕು ಬೆಳಗಾಗುವಷ್ಟರಲ್ಲಿ ಗಡ್ಡೇ ಏನೇ ಇದ್ದರೂ ಸಹ ಹೊರಗೆ ಬಂದಿರುತ್ತೆ. ಈ ರೀತಿ ಮಾಡಲು ಆಗದೆ ಇದ್ದಲ್ಲಿ ಇದರ ಸೊಪ್ಪಿನಿಂದ ಪಲ್ಯವನ್ನು ತಯಾರಿಸಿಕೊಂಡು ತಿನ್ನಬಹುದು ಅಥವಾ ಎಲೆಗಳನ್ನು ಒಣಗಿಸಿ ಚೂರ್ಣ ವನ್ನಾಗಿ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಸಂಜೆ ಅರ್ಧ ಅರ್ಧ ಸ್ಪೂನ್ ದಂತೆ ತೆಗೆದುಕೊಳ್ಳುವುದರಿಂದ ಪೈಲ್ಸ್ ನ 9 ವಿಧಾನಗಳಿಂದಲೂ ಬಳಲುತ್ತಿರುವವರು ಇದರಿಂದ ಮುಕ್ತಿ ಹೊಂದಬಹುದು.