ಭೂಮಿ ಒಂದು ರೀತಿಯಲ್ಲಿ ದೊಡ್ಡ ಸ್ವಿಸ್ ಬ್ಯಾಂಕ್ ಇದ್ದ ಹಾಗೇ. ಭೂಮಿಯಲ್ಲಿ ನಾವು ಯಾವುದೇ ವಸ್ತುಗಳನ್ನು ಅಥವಾ ಏನನ್ನೇ ಬಚ್ಚಿಟ್ಟರೂ ನೂರು ವರ್ಷಗಳ ನಂತರ ಕೂಡ ನಾವು ಅದನ್ನು ಆಚೆ ತೆಗೆಯಬಹುದು. ಆದರೆ ನಮಗೆ ಬಚ್ಚಿಟ್ಟ ಸ್ಥಳದ ಪರಿಚಯ ಇರಬೇಕು ಅಷ್ಟೇ. ಹೀಗೆ ಬಚ್ಚಿಟ್ಟ ಅದೆಷ್ಟೋ ನಿಧಿಗಳು ನಮಗೆ ಭೂಮಿಯ ಆಳದಲ್ಲಿ ಸಿಗುತ್ತವೆ. ಅದು ಯಾವಾಗ ಎಲ್ಲಿ ಹೇಗೆ ಸಿಗುತ್ತದೆ ಅನ್ನುವುದು ಮಾತ್ರ ತಿಳಿದಿರುವುದಿಲ್ಲ. ಈಗ ಮಳೆಗಾಲ ಆಗಿರುವುದರಿಂದ ಎಲ್ಲ ರೈತರೂ ಸಹ ಜಮೀನನ್ನು ಉಳುಮೆ ಮಾಡಿ ಬೆಳೆ ಬೆಳಯಬೇಕು ಎಂದುಕೊಂಡು ಆರಂಭಿಸುತ್ತಾರೆ. ಹೀಗೆ ಒಬ್ಬ ರೈತ ತನ್ನ ಜಮೀನಿನಲ್ಲಿ ರಾಗಿ ಬೆಳೆಯಬೇಕು ಎಂದುಕೊಂಡು ಉಳುಮೆ ಮಾಡುತ್ತಿದ್ದಾಗ ಆಶ್ಚರ್ಯ ಪಡುವಂತಹ ವಸ್ತು ಒಂದು ಆ ರೈತನಿಗೆ ಭೂಮಿಯಲ್ಲಿ ದೊರಕಿದೆ. ಕುತೂಹಲ ಮೂಡಿಸುವ ಆ ವಸ್ತು ಯಾವುದು ಆ ರೈತ ಯಾರು ಅನ್ನೋದನ್ನ ತಿಳಿಸಿಕೊಡ್ತೀವಿ.
ತೆಲಂಗಾಣ ರಾಜ್ಯದ ವಿಕರಾಬಾದ್ ಜಿಲ್ಲೆಯ ಸುಲ್ತಾನ್ ಪುರದಲ್ಲಿ ಒಬ್ಬ ರೈತ ಎರಡು ವರ್ಷಗಳ ಹಿಂದೆ ತನ್ನಲ್ಲಿ ಉಳಿತಾಯ ಮಾಡಿಕೊಂಡಿದ್ದ ಎಲ್ಲಾ ಹಣವನ್ನೂ ಕೊಟ್ಟು ಒಂದಷ್ಟು ಜಮೀನನ್ನು ಖರೀದಿಸಿ ಆ ಜಮೀನಿನಲ್ಲಿ ರಾಗಿ ಶೇಂಗಾ ಬೆಳೆಗಳನ್ನು ಬೆಳೆಯುತ್ತಿದ್ದ. ಹಾಗೆಯೇ ಈ ವರ್ಷವೂ ಕೂಡಾ ಆ ಜಮೀನಿನಲ್ಲಿ ರಾಗಿ ಬೆಳೆಯೋಣ ಎಂದು ನೇಗಿಲು ಊಳುತ್ತಿದ್ದಾಗ ಆ ರೈತನಿಗೆ ಅವನ ಜಮೀನಿನಲ್ಲಿ ಆಶ್ಚರ್ಯ ಪಡುವ ಘಟನೆ ನಡೆಯಿತು. ರೈತನ ನೇಗಿಳಿಗೆ ಎರಡು ಮಡಿಕೆಗಳು ಸಿಕ್ಕಿಕೊಂಡು ಅವು ಭೂಮಿಯಿಂದ ಆಚೆ ಬಂದಿದ್ದವು. ಇದು ಬಚ್ಚಿಟ್ಟ ಹಣದ ಮಡಿಕೆಗಳು ಇರಬಹುದು ಎಂದು ತಿಳಿದ ರೈತ ಆ ಮಡಿಕೆಗಳನ್ನು ಜೋಪಾನವಾಗಿ ತೆಗೆದು ಮಾಡಿಕೆಯಲ್ಲಿ ಏನಿದೆ ಎಂದು ನೋಡಿದಾಗ ಆ ರೈತನಿಗೆ ಆಶ್ಚರ್ಯ ಕಾದಿತ್ತು.
ಅವೆರಡೂ ಮಾಡಿಕೆಗಳಲ್ಲಿ ಚಿನ್ನದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳು ಇದ್ದವು. ಅದನ್ನು ನೋಡಿ ರೈತನಿಗೆ ಆದ ಸಂತೋಷ ಆಶ್ಚರ್ಯ ಅಷ್ಟಿಷ್ಟಲ್ಲ ಅದರ ಜೊತೆಗೆ ಸ್ವಲ್ಪ ಭಯ ಕೂಡಾ. ಆದರೂ ಆ ರೈತ ಭೂಮಿಯಲ್ಲಿ ಸಿಕ್ಕಂತಹ ಈ ಹಣ ಒಡವೆಗಳು ತನಗೆ ಸೆರಬೇಕಾಗಿರುವುದು ಅಲ್ಲ ಅದರ ಜೊತೆಗೆ ಇದರಿಂದ ಮತ್ತೆ ಬೇರೆ ಏನಾದರೂ ಕಷ್ಟಗಳು ತನಗೆ ಬಂದರೆ ಎಂದು ತಿಳಿದು ತಕ್ಷಣ ಸರ್ಕಾರಕ್ಕೆ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆಗಮಿಸಿದ ಕಂದಾಯ ಅಧಿಕಾರಿಗಳು ಎರಡೂ ಮಡಿಕೆಗಳ ಆಭರಣಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆ ಸ್ಥಳದ ಮಾಹಿತಿಯನ್ನು ಪುರಾತತ್ವ ಇಲಾಖೆಯವರಿಗೆ ತಿಳಿಸಿದ್ದಾರೆ.
ಹಿಂದಿನ ಕಾಲದಲ್ಲಿ ಕಳ್ಳರ ಕಾಟದಿಂದಲೋ ಅಥವಾ ಬೇರೆ ರಾಜ್ಯದ ರಾಜರುಗಳ ಆಕ್ರಮಣದ ಭಯದಿಂದಲೋ ಜನರು ತಮ್ಮಲ್ಲಿದ್ದ ಚಿನ್ನವನ್ನು ಭೂಮಿಯಲ್ಲಿ ಬಚ್ಚಿಡುತ್ತಿದ್ದರು. ನಂತರ ಹಲವಾರು ಕಾರಣಗಳಿಂದ ಅದನ್ನು ಆಚೆ ತೆಗೆಯದೇ ಭೂಮಿಯಲ್ಲಿಯೇ ಉಳಿದುಕೊಂಡು, ನಂತರ ಮುಂದೆ ಅವರ ಕುಟುಂಬದ ಜನರಿಗೂ ತಿಳಿಯದೆ ಅವರಿಗೂ ಸಿಗದೆ ಆಗಾಗ ಈ ರೀತಿ ಭೂಮಿಯಲ್ಲಿ ಜನರಿಗೆ ಈಗೀಗ ಸಿಗುತ್ತಿದೆ. ತನ್ನದಲ್ಲದ ಬಂಗಾರಕ್ಕೆ ಆಸೆ ಪಡದೆ ಸರ್ಕಾರದ ನಿಯಮವನ್ನು ಪಾಲಿಸಿ ಸರ್ಕಾರಕ್ಕೆ ಬಂಗಾರವನ್ನು ಒಪ್ಪಿಸಿದ ರೈತನ ನಿಯತ್ತನ್ನು ಮೆಚ್ಚಲೇಬೇಕು.