ಸಾಮಾನ್ಯವಾಗಿ ಮನೆಗಳಲ್ಲಿ ಹಲ್ಲಿ ಜಿರಲೆಗಳ ಕಾಟ ಹೆಚ್ಚಾಗಿರುತ್ತದೆ ಇದನ್ನು ಹೇಗಪ್ಪಾ ಓಡಿಸೋದು ಅನ್ನೋ ಚಿಂತೆ ಬೇಡ, ಈ ಟಿಪ್ಸ್ ಫಾಲೋ ಮಾಡಿ ಹಲ್ಲಿ ಜಿರಲೆಗಳ ಕಾಟದಿಂದ ಮುಕ್ತರಾಗಿ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಔಷಧಿ ಪರಿಕರಗಳು ಸಿಗುತ್ತವೆ ಆದ್ರೆ ಅವುಗಳಿಂದ ಸಿಗದೇ ಇರುವಂತ ಫಲಿತಾಂಶ ಈ ಮನೆಮದ್ದು ಮಾಡಿ ಪಡೆಯಬಹುದಾಗಿದೆ.
ಮನೆಯಲ್ಲಿ ಹಲ್ಲಿ ಜಿರಳೆಗಳು ಜಾಸ್ತಿ ಆಗಿದ್ರೆ ಅನಾರೋಗ್ಯ ಸಮಸ್ಯೆ ಕಾಡಬಹುದು ಯಾಕೆಂದರೆ ಅಡುಗೆ ಮನೆಯಲ್ಲಿ ಆಹಾರಗಳ ಮೇಲೆ ಹಣ್ಣು ತರಕಾರಿಗಳ ಮೇಲೆ ಇವುಗಳು ಓಡಾಡುವುದರಿಂದ ಅಂತಹ ಆಹಾರಗಳನ್ನು ತಿಳಿಯದೆ ತಿನ್ನುವದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಕೆಲವೊಮ್ಮೆ ವಿಷ ಪೂರಿತ ಆಹಾರವಾಗಿ ಅದನ್ನು ಸೇವಿಸುವುದರಿಂದ ಪ್ರಾಣಕ್ಕೆ ಆಪತ್ತು ತರುವ ಸನ್ನಿವೇಶ ಉಂಟಾಗಬಹುದು.
ಹಲ್ಲಿ ಜಿರಲೆಗಳ ನಿವಾರಣೆಗೆ ಯಾವುದೇ ಕೆಮಿಕಲ್ ಬಳಸದೆ ಈ ನೈಸರ್ಗಿಕ ಮನೆಮದ್ದು ಬಳಸಿ ಸುವಾಸನೆ ಭರಿತವಾಗಿರುವಂತ ಕರಿಬೇವಿನ ಸೊಪ್ಪನ್ನು ಹಲ್ಲಿ ಅಥವಾ ಜಿರಳೆ ಓಡಾಡುವ ಜಾಗದಲ್ಲಿ ಇಡಿ. ಇದರ ವಾಸನೆಗೆ ಹಲ್ಲಿ, ಜಿರಳೆಗಳು ಮನೆ ಬಿಟ್ಟು ಹೊರ ಹೋಗುತ್ತವೆ.
ಎರಡನೆಯ ಮನೆಮದ್ದು: ಅಡುಗೆಗೆ ಬಳಸುವಂತ ಸಕ್ಕರೆ ಹಾಗು ಅಡುಗೆ ಸೋಡಾವನ್ನು ಸಮಪ್ರಮಾಣದಲ್ಲಿ ತಗೆದುಕೊಂಡು ಅದರ ಮಿಶ್ರಣವನ್ನು ನೀರಿನೊಂದಿಗೆ ಮಾಡಿ ಹಲ್ಲಿ ಹಾಗೂ ಜಿರಳೆಗಳು ಓಡಾಡುವ ಜಾಗದಲ್ಲಿ ಸಿಂಪರಣೆ ಮಾಡಿದರೆ. ಮನೆಯಲ್ಲಿ ಇರುವಂತ ಜಿರಳೆ ಹಲ್ಲಿಗಳು ನಿವಾರಣೆಯಾಗುತ್ತದೆ. ನಿಮಗೆ ಈ ಮನೆಮದ್ದು ಉಪಯುಕ್ತ ಅನಿಸಿದರೆ ಶೇರ್ ಮಾಡಿ ಬೇರೆಯವರಿಗೂ ತಿಳಿಯಲಿ.