ಮಳೆಯ ನಿರೀಕ್ಷೆಯಲ್ಲಿ ರೈತರು ಮಾತ್ರ ಇಲ್ಲ ಎಲ್ಲಾ ಜೀವಿಗಳು ಮಳೆಗಾಗಿ ಆಕಾಶದ ಕಡೆಗೆ ನೋಡುವಂತೆ ಆಗಿದೆ. ಮಳೆಯ ಬರುವಿಕೆಗಾಗಿ ಕಾಯುತ್ತಾ ಕುಳಿತ ಎಲ್ಲರಿಗೂ ಒಂದು ಖುಷಿ ಸುದ್ದಿ ಇದೆ.

ಅಬ್ಬರ ಮಾಡಲಿದೆ ಮುಂಗಾರು ಮಳೆ ಮುಂದಿನ 3 ವಾರ ಹೆಚ್ಚು ಮಳೆ ಆಗುವ ಮುನ್ಸೂಚನೆ.ರಾಜ್ಯದಲ್ಲಿ ಈಗಾಗಲೇ, ವರುಣನ ಆರ್ಭಟ ಆರಂಭವಾಗಿದೆ. ನಿನ್ನೆ ಬೆಂಗಳೂರು, ಮೈಸೂರು ಸೇರಿ ದಕ್ಷಿಣ ಕರ್ನಾಟಕದ ಇನ್ನು, ಹೆಚ್ಚಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮಾಡಿದೆ. ಹೆಚ್ಚು ಬಿಸಿಲಿನಿಂದ ತಾಪಕ್ಕೆ ನರಳಿದ ಜನಕ್ಕೆ ಮಳೆರಾಯ ತಂಪೆರೆದಿದ್ದು, ಅದರಿಂದ, ಜನರ ಮುಖದಲ್ಲಿ ಒಂದಿಷ್ಟು ಸಂತಸ ಮೂಡಿದೆ.

ಇನ್ನೊಂದು, ಖುಷಿಯ ವಿಷಯ ಏನು ಎಂದರೆ ಮೇ 19ರ ತನಕ ಕರ್ನಾಟಕದಲ್ಲಿ ಉತ್ತಮ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಮುಖಾಂತರ ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ ಮಾಡುತ್ತದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಮೇ 11ರ ತನಕ ಉತ್ತಮ ಮಳೆ ಆಗುತ್ತದೆ. ಮೇ 4 ರಿಂದ ಮೇ 6ರ ತನಕ ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು – ಸಿಡಿಲು ಸಮೇತ ಮಳೆ ಆಗುತ್ತದೆ.

ಈ ಸಮಯದಲ್ಲಿ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯುತ್ತದೆ. ಇನ್ನು, ಮೇ 7 ರಿಂದ ಮೇ 11ರ ತನಕ ಮಲೆನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಒಳ್ಳೆಯ ಮಳೆ ಆಗುತ್ತದೆ. ಅದು ಅಲ್ಲದೆ ಮೇ 9 ರಿಂದ 11ರ ತನಕ ರಾಜ್ಯಾದ್ಯಂತ ಮಳೆ ಆಗುತ್ತದೆ ಎಂದು ಐಎಂಡಿ ತಿಳಿಸಿದೆ. ಇದಿಷ್ಟು ಐಎಂಡಿ ಮುನ್ಸೂಚನೆ ಆದರೆ, ಜಿಎಫ್‌ಎಸ್‌ ಪ್ರಕಾರ ಮೇ 19ರ ತನಕ ಕರ್ನಾಟಕದಲ್ಲಿ ಒಳ್ಳೆಯ ಮಳೆ ಆಗುತ್ತದೆ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಜನರಿಗೆ ಮುಂದಿನ 3 ವಾರಗಳ ಕಾಲ ಮಳೆ ತಂಪೆರೆಯಲಿದೆ ಎನ್ನಲಾಗಿದೆ. ಇದರ, ಜೊತೆಗೆ ಪೂರ್ವ ಮುಂಗಾರು ರಾಜ್ಯದಲ್ಲಿ ಅಬ್ಬರ ಮಾಡುತ್ತದೆ. ಅನ್ನದಾತರ ಮುಖದಲ್ಲಿ ಸಂತಸ ಮೂಡುತ್ತದೆ.

ನಿನ್ನೆ ಮಧ್ಯಾಹ್ನ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರ ಮಾಡಿದ್ದಾನೆ. ಬೆಂಗಳೂರು ಗ್ರಾಮೀಣದಲ್ಲಿ 79.5 ಮಿಲಿ ಮೀಟರ್‌ ಮಳೆಯಾಗಿದ್ದರೆ, ಮೈಸೂರಿನಲ್ಲಿ 71 ಮಿಲಿ ಮೀಟರ್‌ ಮಳೆಯಾಗಿದೆ. ಚಾಮರಾಜನಗರದಲ್ಲಿ 66.5 ಮಿಮೀ ಮಳೆಯಾಗಿದ್ದು, ಬೆಂಗಳೂರು ನಗರದಲ್ಲಿ 45 ಮಿಮೀ, ರಾಮನಗರದಲ್ಲಿ 42 ಮಿಮೀ, ಮಂಡ್ಯದಲ್ಲಿ 41 ಮಿಮೀ, ದಕ್ಷಿಣ ಕನ್ನಡದಲ್ಲಿ 34 ಮಿಮೀ, ಬೆಳಗಾವಿಯಲ್ಲಿ 33 ಮಿಮೀ, ಕೊಡಗಲ್ಲಿ 26 ಮಿಮೀ, ತುಮಕೂರಲ್ಲಿ 25 ಮಿಮೀ, ಹಾಸನದಲ್ಲಿ 22 ಮಿಮೀ ಮಳೆಯಾಗಿದೆ.

ಇನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಡಿಗೇನಹಳ್ಳಿಯಲ್ಲಿ ತುಂಬಾ ಜಾಸ್ತಿ ಅಂದ್ರೆ 79.5 ಮಿಮೀ ಮಳೆಯಾಗಿದ್ದು, ಮೈಸೂರಿನ ಸಿಂಗರಾಮನಹಳ್ಳಿಯಲ್ಲಿ 71 ಮಿಮೀ ಮಳೆಯಾಗಿದೆ. ಇನ್ನು, ಮಳೆಯ ಮುನ್ಸೂಚನೆ ಸಿಕ್ಕರೂ ಸಹ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಸೋಮವಾರದ ತನಕ ಯಥಾಸ್ಥಿತಿಯಲ್ಲಿ ಇರುತ್ತದೆ. ಉತ್ತರ ಒಳನಾಡಿನ ರಾಯಚೂರು, ಕಲಬುರ್ಗಿ, ಬಾಗಲಕೋಟೆ ಯಾದಗಿರಿ ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸುಮಾರು 40 ರಿಂದ 46 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಉಳಿದ ಜಿಲ್ಲೆಗಳು ಹಾಗು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನವು ಸುಮಾರು 40 ರಿಂದ 44 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ. ಮೇ 7 ರಿಂದ ರಾಜ್ಯಾದ್ಯಂತ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ ಇಳಿಯಲಿದೆ ಎಂದು ಅವಮಾನ ಇಲಾಖೆ ಮಾಹಿತಿ ನೀಡಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!