Groundwater: ನಮ್ಮ ಭೂಮಿ 71% ನೀರಿನಿಂದಲೆ ಕೂಡಿದೆ ಭೂಮಿಯ ಮೇಲಿನ ನೀರಿನಲ್ಲಿ ಮೂರು ಪರ್ಸೆಂಟ್ ನೀರು ಮಾತ್ರ ಶುದ್ಧ ನೀರು ಆಗಿದೆ ಉಳಿದ ನೀರು ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಮೂರು ಪರ್ಸೆಂಟ್ ಶುದ್ಧ ನೀರಿನಲ್ಲಿ 70% ನೀರು ನದಿ, ಹಿಮ, ಜಲಪಾತಗಳ ರೂಪದಲ್ಲಿದ್ದು ಉಳಿದ 30% ನೀರು ಅಂತರ್ಜಲದ ರೂಪದಲ್ಲಿದೆ. ಅಂತರ್ಜಲದ ನೀರಿನಿಂದ ನಮ್ಮ ಜೀವನ ಸಾಗುತ್ತಿದೆ. ಭೂಮಿ ಒಳಗಿನ ಅಂತರ್ಜಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ಮಳೆ ಬಿದ್ದರೆ ನೀರು ನದಿ, ಜಲಪಾತ ಹಾಗೂ ಸಮುದ್ರದಲ್ಲಿ ಬೆರೆತು ಹೋಗುತ್ತದೆ, ಕೆಲವಷ್ಟು ನೀರನ್ನು ಮರ-ಗಿಡಗಳು ಎಳೆದುಕೊಳ್ಳುತ್ತವೆ, ಇನ್ನು ಸ್ವಲ್ಪ ಪ್ರಮಾಣದ ನೀರು ಆವಿಯಾಗಿ ಆಕಾಶಕ್ಕೆ ಸೇರುತ್ತದೆ, ಉಳಿದ ಸ್ವಲ್ಪ ಪ್ರಮಾಣದ ನೀರನ್ನು ಭೂಮಿ ಹೀರಿಕೊಳ್ಳುತ್ತದೆ ಈ ನೀರು ಭೂಮಿಯ ಮೇಲಿನ ಲೇಯರ್ಸ್ ನಿಂದ ಚಿಕ್ಕ ಚಿಕ್ಕ ರಂದ್ರಗಳ ಮೂಲಕ ಭೂಮಿಯೊಳಗಿನ ಅಕ್ವೆಫೆರ್ ನಲ್ಲಿ ಸೇರುತ್ತದೆ, ಅಕ್ವಫೆರ್ ಎಂದರೆ ಕಲ್ಲಿನ ಮಧ್ಯದೊಳಗಿನ ಗ್ಯಾಪ್ ಫಾರ್ಮೇಷನ್ ಅನ್ನು ಅಕ್ವೆಫೆರ್ ಎನ್ನುವರು. ಅಕ್ವೆಫೆರ್ ಕೆಲವು ಪ್ರಾಂತ್ಯಗಳಲ್ಲಿ ಕಡಿಮೆ ಆಳದಲ್ಲಿರುತ್ತದೆ, ಇನ್ನು ಕೆಲವು ಪ್ರಾಂತ್ಯಗಳಲ್ಲಿ ಹೆಚ್ಚು ಆಳದಲ್ಲಿರುತ್ತದೆ. ತುಂಬಾ ದೂರದವರೆಗೆ ಕೂಡ ಇರುತ್ತದೆ ಕೆಲವು ಪ್ರಾಂತ್ಯಗಳಲ್ಲಿ ಮೀಟರ್ ಗಳಷ್ಟು ದೂರ ಇದ್ದರೆ ಇನ್ನು ಕೆಲವು ಪ್ರಾಂತ್ಯಗಳಲ್ಲಿ 100 ಕಿಲೋ ಮೀಟರ್ ಗಳಷ್ಟು ವಿಸ್ತಾರವಾಗಿರುತ್ತದೆ. ಭೂಮಿಯೊಳಗೆ ಕಲ್ಲುಗಳ ಮಧ್ಯೆ ಗ್ಯಾಪ್ ಎನ್ನುವುದು ದೂರದವರೆಗೆ ಇರುತ್ತದೆ ಈ ರೀತಿಯ ಅಕ್ವೆಫೆರ್ ನಲ್ಲಿ ಅಂತರ್ಜಲದ ನೀರು ಸ್ಟೋರ್ ಆಗಿರುತ್ತದೆ.
ಅಕ್ವೆಫೆರ್ ನಲ್ಲಿ ವಾಟರ್ ಸ್ಪೇಸ್ ಎನ್ನುವುದು ಆ ಪ್ರಾಂತ್ಯದ ಸ್ಟೋನ್ ಮೇಲೆ ಡಿಪೆಂಡ್ ಆಗಿರುತ್ತದೆ. ಕ್ರೆವಿಸಿಡ್ ರಾಕ್ಸ್ ನಲ್ಲಿ ಅಕ್ವೆಫೆರ್ ಪೈಪ್ ಲೈನ್ ಹಾಕಿದ ರೀತಿ ಇರುತ್ತದೆ. ಗ್ರಾವಿಯಲ್ ರಾಕ್ಸ್ ನಲ್ಲಿ ಚಿಕ್ಕ ಪದರಗಳಂತೆ ಕನೆಕ್ಟ್ ಆಗಿರುತ್ತದೆ. ಅಕ್ವೆಫೆರ್ ನಲ್ಲಿ ನೀರು ಎಂಟರ್ ಆದ ತಕ್ಷಣ ಗ್ರ್ಯಾವಿಟಿ ಕಾರಣದಿಂದ ಆಳವಿದ್ದ ಕಡೆ ನೀರು ಹೋಗುತ್ತದೆ ನೆಲಕ್ಕೆ ಹತ್ತಿರವಿರುವ ಅಕ್ವೆಫೆರ್ ಅನ್ನು ಸ್ಥಿರವಾಗಿ ಇಲ್ಲದ ಅಕ್ವೆಫೆರ್ ಎಂದು, ನೆಲದಿಂದ ದೂರವಿರುವ ಅಕ್ವೆಫೆರ್ ಸ್ಥಿರವಾದ ಅಕ್ವೆಫೆರ್ ಎಂದು ಕರೆಯಲಾಗುತ್ತದೆ. ಸ್ಥಿರವಲ್ಲದ ಅಕ್ವೆಫೆರ್ ವಾಟರ್ ಅನ್ನು ಡ್ರಿಲ್ ಮಾಡುವುದರಿಂದ, ವಾಟರ್ ನದಿಯಲ್ಲಿ ಬೆರೆಯುವುದರಿಂದ ವೆದರ್ ಚೇಂಜ್ ಆಗುವುದರಿಂದ ಬೇಗನೆ ಡ್ರೈ ಆಗುತ್ತದೆ.
ಸ್ಥಿರವಾದ ಅಕ್ವೆಫೆರ್ ನಲ್ಲಿ ನೀರು ಒಂದು ವರ್ಷ ಇಲ್ಲ ಬಹಳ ವರ್ಷಗಳಿಂದ ಸಂಗ್ರಹವಾಗಿರುತ್ತದೆ. ಕೇವಲ ಮಳೆ ನೀರಿನಿಂದ ಅಂತರ್ಜಲ ಹುಟ್ಟಿಕೊಳ್ಳುವುದಿಲ್ಲ ಹಿಮ ಕರಗುವುದರಿಂದ, ನದಿಯ ಪ್ರವಾಹದಿಂದ, ಕೆರೆಗಳಿಂದ ಸಹ ನೀರು ಅಂತರ್ಜಲವನ್ನು ಸೇರುತ್ತದೆ. ಅಕ್ವೆಫೆರ್ ನಲ್ಲಿ ಸಂಗ್ರಹವಾದ ನೀರನ್ನು ಪೈಪನಿಂದ ಡ್ರಿಲ್ ಮಾಡಿ ನೆಲದ ಮೇಲಕ್ಕೆ ತರಬಹುದು. ಸ್ಥಿರವಾಗಿ ಇಲ್ಲದ ಅಕ್ವೆಫೆರ್ ಇರುವ ಪ್ರಾಂತ್ಯಗಳಲ್ಲಿ ಅಂತರ್ಜಲದ ನೀರಿಗಿಂತ ನದಿ ನೀರು ಕಡಿಮೆ ಇದ್ದರೆ ಅಂತರ್ಜಲದ ನೀರು ನದಿಗೆ ಸೇರುತ್ತದೆ. ಹೀಗೆ ಅಧಿಕ ಮಳೆ, ನದಿ ಪ್ರವಾಹ ಬಂದಾಗ ಅಕ್ವೆಫೆರ್ ನಲ್ಲಿ ನೀರಿನ ಲೆವೆಲ್ ಬೆಳೆಯುತ್ತದೆ. ಪಂಪ್ ಬಳಸಿ ವಾಟರ್ ಅನ್ನು ಹೊರ ತೆಗೆದಾಗ ವಾಟರ್ ಲೆವೆಲ್ ಕಡಿಮೆಯಾಗುತ್ತದೆ.
ಕೆಲವು ಪ್ರಾಂತ್ಯಗಳಲ್ಲಿ ಅಂತರ್ಜಲ ಹುಟ್ಟಿಕೊಳ್ಳುವ ಮೊದಲೆ ಹೆಚ್ಚು ನೀರನ್ನು ಬಳಸುವುದರಿಂದ ನೀರಿನ ಮಟ್ಟ ಕಡಿಮೆಯಾಗುತ್ತದೆ. ಕೆಲವು ಸಮಯದಲ್ಲಿ ಹೆಚ್ಚು ಪ್ಲಾಸ್ಟಿಕ್ ಎಸೆಯುವುದರಿಂದ ಸೆಪ್ಟಿಕ್ ಟ್ಯಾಂಕ್ ಕಾರಣದಿಂದ ಅಂಡರ್ ಗ್ರೌಂಡ್ ಗ್ಯಾಸ್ ಟ್ಯಾಂಕ್ ಲೀಕ್ ಆಗುವುದರಿಂದ ಅಂತರ್ಜಲದ ನೀರು ಕಲಷಿತವಾಗುತ್ತದೆ. ಅಂತರ್ಜಲದ ನೀರು ಕಲುಷಿತವಾದರೆ ಮತ್ತೆ ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ.
ಅಕ್ವೆಫೆರ್ ಎಲ್ಲಾ ಪ್ರಾಂತ್ಯಗಳಲ್ಲಿ ಇರುತ್ತದೆ ಪ್ರಪಂಚದಲ್ಲಿ ಲಾರ್ಜೆಸ್ಟ್ ಅಕ್ವೆಫೆರ್ ಅಮೆರಿಕದಲ್ಲಿದೆ, 450000 ಸ್ಕ್ವೇರ್ ಕಿಲೋಮೀಟರ್ ಜಾಗವನ್ನು ಆಕ್ರಮಿಸಿದೆ. ಭಾರತದಲ್ಲಿರುವ ಲಾರ್ಜೆಸ್ಟ್ ಅಕ್ವೆಫೆರ್ ಅಲೊವೆಯ ಅಕ್ವೇಫೆರ್ ಇದು ಬಿಹಾರ್ ಒರಿಸ್ಸಾ ಅಸ್ಸಾಂ ವೆಸ್ಟ್ ಬೆಂಗಾಲ್, ಉತ್ತರ ಪ್ರದೇಶ ರಾಜ್ಯಗಳಲ್ಲಿ ವಿಸ್ತರಿಸಿದೆ. ಇದು ಭಾರತ ದೇಶದ ಶೇಕಡ 31 ರಷ್ಟು ಭೂಬಾಗವನ್ನು ಆವರಿಸಿಕೊಂಡಿದೆ. ಅಂತರ್ಜಲದ ನೀರು ಬಹಳ ಪ್ರಯೋಜನಕಾರಿಯಾಗಿದೆ ಅಗ್ರಿಕಲ್ಚರ್, ಫುಡ್ ಇಂಡಸ್ಟ್ರೀಸ್ ಅಂತರ್ಜಲದ ನೀರಿನ ಮೇಲೆ ಅವಲಂಬಿತವಾಗಿರುತ್ತದೆ.
ಮೊದಲೆಲ್ಲಾ ಕೃಷಿ ಮಳೆ ನೀರು ಹಾಗೂ ನದಿ ನೀರನ್ನು ಅವಲಂಬಿಸಿತ್ತು ನದಿ ನೀರು ಬೆಳೆಯ ಕೊನೆಯವರೆಗೂ ಬರುತ್ತಿರಲಿಲ್ಲ ಹಾಗೆಯೇ ಮಳೆ ನೀರು ಯಾವಾಗ ಬರುತ್ತದೆ ಎಂದು ತಿಳಿಯುತ್ತಿರಲಿಲ್ಲ ನಂತರ ಅಂತರ್ಜಲ ನೀರನ್ನು ಬಳಸಲು ಪ್ರಾರಂಭಿಸಿ ಕೃಷಿಗೆ ಉಪಯೋಗವಾಯಿತು. ಪ್ರಪಂಚದಲ್ಲಿ 250 ಕೋಟಿ ಜನ ಅಂತರ್ಜಲದ ನೀರನ್ನು ಅವಲಂಬಿಸಿ ಜೀವನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಂತೂ 80% ಜನರು ಅಂತರ್ಜಲದ ನೀರನ್ನು ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ.
ಕೆಲವರು ಬೋರ್ ಕೊರೆಸುತ್ತಾರೆ ಆದರೆ ಅವರು ಕೊರೆಸಿದ ಜಾಗದಲ್ಲಿ ಅಕ್ವೆಫೆರ್ ಇರುವುದಿಲ್ಲ ಆದರೆ ಆಧುನಿಕ ತಂತ್ರಜ್ಞಾನದ ಮೂಲಕ ಭೂಮಿಯ ಒಳಗೆ ಏನಿದೆ ಎಂದು ತಿಳಿದುಕೊಳ್ಳಬಹುದು. ನದಿ ಹಾಗೂ ಕೆರೆ ನೀರು ಕಲಷಿತವಾದರೆ ಸ್ವಚ್ಛ ಮಾಡಬಹುದು ಆದರೆ ಅಂತರ್ಜಲದ ನೀರು ಕಲುಷಿತಗೊಂಡರೆ ಸ್ವಚ್ಛ ಮಾಡಲು ಸಾಧ್ಯವಿಲ್ಲ ಹೀಗಾಗಿ ಅಂತರ್ಜಲದ ನೀರನ್ನು ಕಲುಷಿತ ಆಗದಂತೆ ನೋಡಿಕೊಳ್ಳೋಣ.