ಪ್ರತಿಯೊಬ್ಬನಿಗೂ ತನ್ನದೆ ಆದ ಒಂದು ಸ್ವಂತ ಮನೆ ಚಿಕ್ಕದಾದರೂ ಚೊಕ್ಕದಾಗಿರಬೇಕು ಎಂಬ ಆಸೆ ಇರುತ್ತದೆ ಆದರೆ ಈಗಿನ ದುಬಾರಿ ಜಾಯಮಾನದಲ್ಲಿ ಬಾಡಿಗೆ ಮನೆಗೆ ಹಣ ಕೊಡಲು ಹಣವಿಲ್ಲದಂತಹ ಪರಿಸ್ಥಿತಿಯಲ್ಲಿ ಸ್ವಂತ ಮನೆ ಕಟ್ಟುವುದು ಅಸಾಧ್ಯವಾದ ಮಾತು ಆದರೆ ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರು ಈಗ ಮನೆ ಕಟ್ಟಿಕೊಳ್ಳಬಹುದು ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಜನಸಾಮಾನ್ಯರಿಗೆ ತಮ್ಮದೆ ಆದ ಒಂದು ಸ್ವಂತ ಮನೆ ಇರಬೇಕೆಂಬ ಕನಸು ಸಹಜ. ಈಗಿನ ದುಬಾರಿ ಜಗತ್ತಿನಲ್ಲಿ ಮನೆ ನಿರ್ಮಾಣ ಮಾಡುವ ವಸ್ತುಗಳು ಕೈಗೆ ಎಟುಕದೆ ಇರುವುದರಿಂದ ಮನೆ ಕಟ್ಟುವುದು ಸುಲಭವಲ್ಲ ಅದರಲ್ಲೂ ಬಡವರಿಗಂತೂ ಮನೆ ಕಟ್ಟುವ ಕನಸು ಕನಸಾಗಿಯೆ ಉಳಿಯುತ್ತದೆ ಆದರೆ ಇನ್ನು ಮುಂದೆ ಬಡವರು ಯೋಚಿಸುವ ಅಗತ್ಯವಿಲ್ಲ ಬಾಡಿಗೆ ಮನೆಯಲ್ಲಿ ವಾಸಿಸುವ ಬಡವರಿಗೆ ಸರ್ಕಾರ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಬಡವರಿಗೆ ಸರ್ಕಾರದಿಂದ ಉಚಿತ ಮನೆ ಅಥವಾ ಮನೆ ಕಟ್ಟಿಕೊಳ್ಳಲು ಸಬ್ಸಿಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದು.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೆ ಲಕ್ಷಾಂತರ ಬಡ ಕುಟುಂಬಗಳು ಸ್ವಂತ ಮನೆಯನ್ನು ಹೊಂದಿದ್ದಾರೆ. 2025 ರ ಒಳಗಾಗಿ ಒಂದು ಕೋಟಿ ಮನೆ ನಿರ್ಮಾಣ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಯಾರಿಗೆ ಉಚಿತ ಮನೆ ಕಟ್ಟುವ ಅವಕಾಶ ಸಿಗುತ್ತದೆ ಎಂದರೆ ಕೆಲವು ಅರ್ಹತೆಯನ್ನು ಹೊಂದಿರಬೇಕು. ಅಭ್ಯರ್ಥಿ ಭಾರತೀಯ ನಿವಾಸಿ ಆಗಿರಬೇಕು, ಬಡತನ ರೇಖೆಗಿಂತ ಕೆಳಗಿರಬೇಕು. ವಾರ್ಷಿಕ ವರಮಾನ 6 ಲಕ್ಷಕ್ಕಿಂತ ಕಡಿಮೆ ಇರಬೇಕು. 30 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ದೊರೆಯುತ್ತದೆ. 6 ಲಕ್ಷ ರೂಪಾಯಿಗಳನ್ನು ಗೃಹ ಸಾಲವಾಗಿ ಪಡೆದುಕೊಂಡರೆ 2,67,000 ರೂಪಾಯಿಯನ್ನು ಸಬ್ಸಿಡಿಯಾಗಿ ಸರ್ಕಾರ ನೀಡುತ್ತದೆ. ಆರರಿಂದ ಹನ್ನೆರಡು ಲಕ್ಷ ವಾರ್ಷಿಕ ವರಮಾನ ಪಡೆಯುವವರು 60 ಚದರ ಅಡಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಸಬ್ಸಿಡಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.

ಮೊಬೈಲ್ ಹೊಂದಿದ್ದರೆ ಮೊಬೈಲ್ ನಲ್ಲಿ ಗೂಗಲ್ ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಸರ್ಚ್ ಮಾಡಿದಾಗ ಕಾಣುವ ಮೊದಲನೇ ವೆಬ್ಸೈಟ್ ಗೆ ಭೇಟಿ ನೀಡಿ ಗ್ರಾಮೀಣ ಭಾಗದ ನಿವಾಸಿ ಅಥವಾ ನಗರ ಭಾಗದ ನಿವಾಸಿ ಎಂದು ತಿಳಿಸಬೇಕು. ನಂತರ ಇದಕ್ಕೆ ಸಂಬಂಧಪಟ್ಟಂತಹ ಅರ್ಜಿ ಫಾರ್ಮ್ ಕಾಣಿಸುತ್ತದೆ ಕೇಳಿದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಕೆ ಆದ ನಂತರ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ನೀಡಿದರೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಬಾಡಿಗೆ ಮನೆಯಲ್ಲಿ ಅಥವಾ ಅನಧಿಕೃತ ಜಾಗದಲ್ಲಿ ಗುಡಿಸಲುಗಳಲ್ಲಿ ಕಷ್ಟಪಟ್ಟು ವಾಸಿಸುತ್ತಿರುವವರಿಗೆ ಒಂದು ಸ್ವಂತ ಸೂರು ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!