ಕೋಳಿ ಸಾಕಾಣಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಜನರಿಗೆ ಈ ಇನ್ಕ್ಯೂಬೇಟರ್ ಹೆಚ್ಚು ಸಹಾಯ ಮಾಡುತ್ತದೆ. ಏನಿದು ಇನ್ಕ್ಯೂಬೇಟರ್ ನೋಡೋಣ ಬನ್ನಿ :-
ಕೋಳಿ ಸಾಕಾಣಿಕೆಯಲ್ಲಿ ಹೆಚ್ಚು ಲಾಭ ಪಡೆಯಬೇಕು ಎಂದರೆ ಈ ಇನ್ಕ್ಯೂಬೇಟರ್ ರೈತರಿಗೆ ಒಂದು ಒಳ್ಳೆ ಆಯ್ಕೆ. ಮೊದಲಿಗೆ ಒಂದು ಹತ್ತು ಕೋಳಿ ಹಾಗೂ ಎರಡು ಹುಂಜವನ್ನು ತಂದು ಒಂದು ಇನ್ಕ್ಯೂಬೇಟರ್ ಖರೀದಿ ಮಾಡಿದರೆ ಸಾಕು. ಇನ್ಕ್ಯೂಬೇಟರ್ ಚಾಲೂ ಮಾಡಲು ವಿದ್ಯುತ್ ಅಗತ್ಯ ಇರುತ್ತದೆ ಪ್ಲಗ್ ಕನೆಕ್ಟ್ ಮಾಡಬೇಕು.
ಇನ್ಕ್ಯೂಬೇಟರ್ ಜೊತೆಗೆ ನೀರಿನ ಟಬ್ ಇರುತ್ತದೆ ಅದನ್ನು ಮೊಟ್ಟೆಗಳ ಬಳಿ ಇಡಬೇಕು. ಇನ್ಕ್ಯೂಬೇಟರ್ ಸಹಾಯದಿಂದ ಕೋಳಿ ಮರಿಗಳನ್ನು ಮೊಟ್ಟೆಯಿಂದ ಪಡೆಯಬಹುದು. ಒಂದು ಕೋಳಿ ಮೊಟ್ಟೆ ಇಟ್ಟು ಅದಕ್ಕೆ ಕಾವು ಕೊಟ್ಟು ಮರಿ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮತ್ತೆ ಅದರ ಪಾಲನೆ ಪೋಷಣೆ ಎಂದು ಬರೋಬರಿ 4 ತಿಂಗಳು ಕಳೆದು ಹೋಗುತ್ತದೆ ಅದರಿಂದ ಬರುವ ಮರಿಗಳ ಸಂಖ್ಯೆ 6 – 8 ಕೋಳಿಗಳು.
ಇನ್ನು ಇನ್ಕ್ಯೂಬೇಟರ್ನಲ್ಲಿ ಕೋಳಿ ಮೊಟ್ಟೆ ತಂದು ಅದರ ಮೇಲೆ ದಿನಾಂಕ ಬರೆದು ಇಟ್ಟರೆ. ಮೂರು ದಿನಗಳಿಗೆ ಒಂದು ಬಾರಿ ನೀರು ಬದಲಾಹಿಸಿ ಸೂಚನೆಗಳ ಪ್ರಕಾರ, ಮುಚ್ಚಳವನ್ನು ಒಂದೆರಡು ಬಾರಿ ತೆಗೆಯುವುದು ಹಾಕುವುದು ಮಾಡಬೇಕು.
ಇನ್ಕ್ಯೂಬೇಟರ್ ಒಳಗೆ ಹೊಸ ಮೊಟ್ಟೆಗಳನ್ನು ತಂದು ಜೋಡಿಸಬಹುದು ಮೊಟ್ಟೆಗಳಿಂದ 19ನೇ ದಿನಕ್ಕೆ ಮರಿ ಹೊರ ಬರುತ್ತದೆ. ಮರಿಗಳಿಗೆ ಹುಟ್ಟಿದಾಗ ಪ್ರೋಟಿನ್ ಅಗತ್ಯ ಹೆಚ್ಚಾಗಿ ಇರುತ್ತದೆ. ಒಂದು ತಿಂಗಳ ಕಾಲ ಅದರ ಪಾಲನೆ ಪೋಷಣೆ ಮಾಡಬೇಕು ಬೂಸ್ಟರ್ ಬಳಕೆ ಮಾಡಿ ಅದು ₹20 – ₹50 ರ ತನಕ ಸಿಗುವುದು.
ಇದರಿಂದ, ಒಂದು ಕೋಳಿ ಕೂಡ ಸಾಯಲ್ಲ. ಕೋಳಿ ಮರಿಗೆ ಖಾಯಿಲೆ ಇದೆ, ಅದಕ್ಕೆ ಯಾವುದೋ ರೋಗ ಬಂತು ಕೆಳಗೆ ನೀಡಿರುವ ದೂರವಾಣಿಗೆ ಕರೆ ಮಾಡಿ. ಅದಕ್ಕೆ, ಪರಿಹಾರ ತಿಳಿಸುವರು. 21 ನೇ ದಿನಕ್ಕೆ ಮರಿಯನ್ನು ಒಂದು ಬಾಕ್ಸ್ ತೆಗೆದುಕೊಂಡು ಒಂದು ಲೈಟ್ ಹಾಕಿ ಒಂದು ತಿಂಗಳ ಕಾಲ ಅದರಲ್ಲಿ ಬಿಡಬೇಕು. ನಂತರ ಫಾರ್ಮ್’ಗೆ ಬಿಡುವುದು. ಕೋಳಿಗೆ ಯಾವ ಸಮಸ್ಯೆ ಕೂಡ ಬರುವುದಿಲ್ಲ.
ಶ್ರೀ ರಾಮ್ ಫಾರ್ಮ್ಸ್ ಇವರ ಬಳಿ ಸಿಗುವ ಇನ್ಕ್ಯೂಬೇಟರ್ ಮಾಡೆಲ್ 70 ಮೊಟ್ಟೆಗಳು, 80 ಮೊಟ್ಟೆಗಳು, 160 ಮೊಟ್ಟೆಗಳ ಮಾಡೆಲ್ ಸಿಗುತ್ತದೆ. ಇನ್ಕ್ಯೂಬೇಟರ್ ಮೇಲೆ ಒಂದು ವರ್ಷಗಳ ಗ್ಯಾರಂಟಿ ವಾರಂಟಿ ಒದಗಿಸಲಾಗುವುದು. ಆ ಸಮಯದಲ್ಲಿ ಇನ್ಕ್ಯೂಬೇಟರ್’ಗೆ ಯಾವ ತೊಂದರೆ ಬಂದರು ಅದನ್ನು ಸರಿಪಡಿಸಿ ಕೊಡುವರು. ಸಣ್ಣ ಸಾಕಾಣಿಕೆ ಮಾಡಲು 70 ಮೊಟ್ಟೆಗಳ ಮಾಡೆಲ್ ಸಾಕು, ರೈತರಿಗೆ 80 ಮೊಟ್ಟೆಗಳ ಮಾಡೆಲ್ ಬೇಕು. ಗುಣಮಟ್ಟದ ಇನ್ಕ್ಯೂಬೇಟರ್’ಗಳನ್ನು ಮಾರಾಟ ಮಾಡಲಾಗುವುದು.
ಇನ್ಕ್ಯೂಬೇಟರ್ ತಯಾರಿ ಮಾಡಲು ಬಳಸುವ ವೈರ್ ( wire ) ಒಳ್ಳೆ ಗುಣಮಟ್ಟದು. ಅದು, ಬೇಗ ಬೆಂಕಿಗೆ ಆಹುತಿ ಆಗುವುದಿಲ್ಲ. ಟೀಕ್ ವುಡ್ ( teak wood ) ಬಳಕೆ ಮಾಡುವ ಕಾರಣ ತುಕ್ಕು ಹಿಡಿಯಲ್ಲ, ಬೆಂಡ್ ಬರಲ್ಲ. ಫ್ರೇಮ್’ಗೆ ಮೋಟಾರ್ ಫಿಟ್ ಮಾಡಿ ಅದನ್ನು ಥರ್ಮಾಕೋಲ್ ( ಉನ್ನತ ಕ್ವಾಲಿಟಿ ಉಳ್ಳ ಥರ್ಮಾಕೋಲ್ ಇದರ ಮೇಲೆ, ಮನ್ಯುಷರು ನಡೆದರು ಮುರಿಯುವುದಿಲ್ಲ. ) ಇದರ ಬೆಲೆ ₹8,000 ಇದು ರೈತರಿಗಾಗಿ ಮಾಡಿರುವ ಇನ್ಕ್ಯೂಬೇಟರ್.
ವಿಳಾಸ :-ಚಿಕ್ಕ ಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಕೆಂಚರಹಳ್ಳಿ.
ದೂರವಾಣಿ ಸಂಖ್ಯೆ :- ೮೧೨೩೩೮೮೪೮೫ ಇನ್ನು ಹೆಚ್ಚಿನ ಮಾಹಿತಿಗೆ ಇವರನ್ನು ಸಂಪರ್ಕಿಸಬಹುದು .