power weeder: ರೈತರಿಗೆ ಹೊಲದ ಕೆಲಸ ಮಾಡಲು ಸಾಕಷ್ಟು ಉಪಕರಣಗಳ ಅಗತ್ಯ ಇದೆ. ಆಧುನಿಕತೆ ಬೆಳೆದಂತೆ ಈವಾಗ ಎಲ್ಲಾ ಕೆಲಸ ಮಾಡಲು ಮೆಷಿನ್ (machine) ಬಂದಿದೆ ನಾವು ಈಗ ಬೈಕ್ ಬೆಲೆಯಲ್ಲಿ ಬರುವ ಪವರ್ ವೀಡರ್ ಬಗ್ಗೆ ತಿಳಿಯೋಣ.

ಈ ಪವರ್ ವೀಡರ್ 7 HB ಇದೆ. ರಾತ್ರಿ ವೇಳೆ ಲೈಟ್ ಸೌಲಭ್ಯ ಬಳಸಿ ಉಪಯೋಗ ಮಾಡಬಹುದು. ಒಂದು ಎಕರೆಗೆ ಒಂದು ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಕಬ್ಬಿಣದ ಸಲಾಕೆ ಇರುವ ಕಾರಣ ಕೆಸರಲ್ಲಿ ಕೂಡ ಸರಾಗವಾಗಿ ಸಾಗುತ್ತದೆ. ಇದರಲ್ಲಿ ಗೇರ್ ಮತ್ತು ಕ್ಲಚ್ ಇದೆ. ಅದರಿಂದ, ಕೈಯಲ್ಲೇ ಮೈನ್ಟೈನ್ ಮಾಡಬಹುದು. ನಮಗೆ ಬೇಕಾದಾಗ ಅದಕ್ಕೆ, ನೀಡಿರುವ ಸಾಧನಗಳನ್ನು ಸುಲಭವಾಗಿ ಹಾಕಬಹುದು.

ಕುಂಟೆ ಉಳಬಹುದು, ಟಿಲ್ಲರ್, ಬಿತ್ತನೆ ಮಾಡುವ ಸಾಧನ, ಹತ್ತಿ ಉಳುಮೆ ಮಾಡುವ ಸಾಧನ ಮತ್ತು ರೋಟರ್ ಬಳಕೆ ಮಾಡಬಹುದು ಇದು ಒಂದು ರೀತಿಯ ಮಿನಿ ಟ್ರ್ಯಾಕ್ಟರ್. ಎರಡು ಎತ್ತು ಮಾಡುವ ಕೆಲಸವನ್ನು ಈ ಪವರ್ ವೀಡರ್ ಮಾಡುತ್ತದೆ. ಪವರ್ ವೀಡರ್ ಜೊತೆಗೆ ಕಲ್ಟಿವೆಟರ್ ಮತ್ತು ಹತ್ತಿ ಉಳುಮೆ ಮಾಡುವ ಸಾಧನಾ ಕೊಡುವರು ಆದರೆ, ಇನ್ನು ಹೆಚ್ಚಿನ ಸಾಧನಗಳನ್ನು ದುಡ್ಡು ಕೊಟ್ಟು ಮಾಡಿಸಿಕೊಳ್ಳಬೇಕು.

ಪವರ್ ವೀಡರ್ ಬೆಲೆ ₹45,000 6 ತಿಂಗಳ ಗ್ಯಾರಂಟಿ ಮತ್ತು ವಾರಂಟಿ ಸಿಗುವುದು. ಬಿತ್ತನೆ ಮಾಡುವ ಉಪಕರಣ ₹15,000. ಇದರಿಂದ, ಕಳೆ ಗಿಡವನ್ನು ತೆಗೆಯಬಹುದು. ಟ್ರಾಲಿ 7 – 8 ಕ್ವಿಂಟಾಲ್ ಬರುತ್ತದೆ. ಇದು, ಮಿನಿ ಟ್ರಾಲಿ ಮಿನಿ ಟ್ರ್ಯಾಕ್ಟರ್’ಗೆ. ಇದರ ಬೆಲೆ ₹30,000. ಪವರ್ ವೀಡರ್’ನಲ್ಲಿ ಬಿತ್ತನೆ ಮಾಡುವ ಸಾಧನ 3 ತಾಳಿಂದು ಇದೆ.

ವಿಳಾಸ :- ಏ  ವನ್ ಇಂಜಿನಿಯರಿಂಗ್ ವರ್ಕ್ಸ್ ( A one engineering works )
ಹೀರೋ ಶೋರೂಂ ಹತ್ತಿರ ಚಿತ್ತಾಪುರ ಡಿಸ್ಟ್ರಿಕ್ಟ್ ಕಲ್ಬುರ್ಗಿ.
ದೂರವಾಣಿ ಸಂಖ್ಯೆ :-7338460038ರೈತರಿಗೆ ಈ ಸಾಧನದ ಅವಶ್ಯಕತೆ ಇದೆ ಅವರು ಈ ಮೇಲಿನ ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಬೇಕಾದ ಮಾಹಿತಿ ಸಿಗುತ್ತದೆ.

Leave a Reply

Your email address will not be published. Required fields are marked *