ಅಧಿಕಾರ ಸಿಕ್ಕ ತಕ್ಷಣ ತಾನು ಅಧಿಕಾರಕ್ಕೆ ಬಂದಿರುವುದು ಜನರ ಸೇವೆಗಾಗಿ ಎನ್ನುವುದನ್ನೇ ಮರೆತು , ತಾನು ಮಾತ್ರ ಅಲ್ಲದೆ ತಾನು ತನ್ನ ಮಕ್ಕಳು ಮೊಮ್ಮಕ್ಕಳು ಇಡೀ ತಮ್ಮ ವಂಶವೇ ಆರಾಮವಾಗಿ ಕುಳಿತು ತಿನ್ನುವಷ್ಟು ಹಣಗಳಿಸಲು ಈಗಿನ ಅಧಕಾರಿಗಳು, ರಾಜಕಾರಣಿಗಳು ನೋಡುತ್ತಾರೆ. ಆದರೆ ಅಧಿಕಾರ ಗಳಿಸುವುದು ನಿಸ್ವಾರ್ಥ ಮನೋಭಾವನೆಯಿಂದ ಜನರ ಸೇವೆ ಮಾಡಲು ಎನ್ನುವ ನಾಯಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು. ಇವರ ನಿಜವಾದ ಹೆಸರು ಅಜಯ್ ಮೋಹನ್. ಚಿಕ್ಕ ವಯಸ್ಸಿನಲ್ಲೇ ತನ್ನೆಲ್ಲ ಸಂಬಂಧಗಳನ್ನ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದರು. ಯೋಗಿ ಆದಿತ್ಯನಾಥ್ ಅವರಿಗೆ ಮೂವರು ಸಹೋದರರು ಮತ್ತು ಮೂವರು ಸಹೋದರಿಯರು. ಒಬ್ಬ ಸಹೋದರ ಚೀನಾ ಬಾರ್ಡರ್ ನಲ್ಲಿ ವೀರ ಯೋಧ. ಇನ್ನು ಉಳಿದವರು ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡು ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಾ ಇದ್ದಾರೆ. ಯೋಗಿ ಆದಿತ್ಯನಾಥ್ ಅವರ ಒಬ್ಬ ಸಹೋದರಿ ಉತ್ತರ ಪ್ರದೇಶದ ಒಂದು ಕುಗ್ರಾಮದಲ್ಲಿ ಒಂದು ಪುಟ್ಟ ಟೀ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಜೀವನ ಸಾಗಿಸುತ್ತಾ ಇದ್ದಾರೆ. ಇವರ ಹೆಸರು ಶಶಿದೇವಿ. ಇಪ್ಪತ್ತೈದು ವರ್ಷದಿಂದ ಇವರು ತಮ್ಮ ಸಹೋದರ ಯೋಗಿ ಆದಿತ್ಯನಾಥ್ ಅವರಿಗೆ ರಾಖಿ ಕಟ್ಟಲು ಎದುರು ನೋಡುತ್ತಾ ಇದ್ದಾರೆ.
ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದರೂ ಸಹ ಅವರ ಕುಟುಂಬದಲ್ಲಿ ಮಾತ್ರ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಅಣ್ಣ ಮುಖ್ಯಮಂತ್ರಿ ಆಗಿದ್ದರೂ ಸಹ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲವಾ ಅಂತ ಶಶಿ ದೇವಿ ಅವರನ್ನು ಕೇಳಿದರೆ, ನನ್ನ ಸಹೋದರ ಜನಸೇವೆಗಾಗಿ ಮನೆ, ಕುಟುಂಬವನ್ನೇ ತ್ಯಜಿಸಿ ಹೋದವರು ಅವರಿಂದ ನಾವು ಏನನ್ನೂ ಅಪೇಕ್ಷೆ ಪಡುವುದಿಲ್ಲ. ನಮ್ಮಿಂದ ಅವರಿಗೆ ಕೆಟ್ಟ ಹೆಸರು ಮಾತ್ರ ಬರದೆ ಇದ್ದರೆ ಅಷ್ಟೇ ಸಾಕು ಅಣ್ಣ ಮಾಡುವ ಕೆಲಸಗಳನ್ನು ನೋಡಿ ನಮಗೆ ಬಹಳ ಸಂತೋಷ ಆಗುತ್ತದೆ ಎಂದು ಹೇಳುತ್ತಾರೆ.
ಯೋಗಿ ಆದಿತ್ಯನಾಥ್ ಅವರ ಸಹೋದರಿ ಶಶಿದೇವಿ ಅವರು. ನಿಜಕ್ಕೂ ಯೋಗಿ ಆದಿತ್ಯನಾಥ್ ಅವರ ಬಳಿ ಅವರ ನಾಲ್ಕು ಜೋಡಿ ಬಟ್ಟೆಗಳನ್ನು ಬಿಟ್ಟರೆ ಬೇರೆ ಯಾವುದೇ ಆಸ್ತಿ ಇಲ್ಲ. ಈಗಿನ ಕಾಲದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ತಮ್ಮ ತಮ್ಮ ಖಜಾನೆ ತುಂಬಿಸಿಕೊಳ್ಳುವವರ ನಡುವೆ ಹಣದ ಮೇಲೆ ಆಸೆ ಇಲ್ಲದೇ ಕೇವಲ ಜನ ಸೇವೆಗಾಗಿ ಬದುಕುತ್ತಿರುವ ವ್ಯಕ್ತಿ ಯೋಗಿ ಆದಿತ್ಯನಾಥ್ ಅವರು. ದುಡ್ಡು ದೋಚುವ ನಾಯಕರ ನಡುವೆ ಇಂತಹ ಆದರ್ಶ ನಾಯಕರು ಸಿಗುವುದು ವಿರಳ. ಜನಸೇವೆಗಾಗಿ ಜೀವನ ಮುಡಿಪಾಗಿಟ್ಟಿರುವ ಅಣ್ಣ ಒಂದುಕಡೆ ಆದರೆ ತಮ್ಮಿಂದ ಅಣ್ಣನಿಗೆ ಯಾವುದೇ ತೊಂದರೆ ಆಗದೇ ಇರಲಿ ಎಂದು ಬಯಸುವ ತಂಗಿ ಇನ್ನೊಂದು ಕಡೆ.