ಕಿಡ್ನಿ ಸ್ಟೋನ್ ತುಂಬಾ ಜನರಲ್ಲಿ ಕಾಡುವಂತಹ ಸಮಸ್ಯೆ, ಒಂದೇ ಸಮನೆ ಇದ್ದಕ್ಕಿದ್ದ ಹಾಗೆ ನೋವು ಕಾಣಿಸಿಕೊಳ್ಳುತ್ತದೆ. ಹೊಟ್ಟೆಯ ಭಾಗದಿಂದ ಸೊಂಟದ ಭಾಗಕ್ಕೆ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ಮಾಡುವಾಗ ಉರಿ ಹಾಗೂ ವಾಂತಿ ಬಂದಂತೆ ಅನುಭವ ಆಗುವುದು ಇವು ಕಿಡ್ನಿ ಸ್ಟೋನಿನ ಮುಖ್ಯ ಲಕ್ಷಣಗಳು. ಇದಕ್ಕೆ ಮುಖ್ಯ ಕಾರಣ ಕಿಡ್ನಿಯಲ್ಲಿ ಇರುವಂತಹ ಸ್ಟೋನ್ ಮೂತ್ರ ನಾಳದ ಮೂಲಕ ಹೊರಹೋಗಲು ಪ್ರಯತ್ನ ಮಾಡುತ್ತ ಇರುತ್ತದೆ. ಈ ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಕಿಡ್ನಿಯಲ್ಲಿ ಇರುವ ಕಲ್ಲಿನ ಗಾತ್ರ 10mm ಗಿಂತಲೂ ಕಡಿಮೆ ಇದ್ದಲ್ಲಿ ಅದನ್ನು ನಾವು ಮನೆಮದ್ದಿನ ಮೂಲಕವೇ ಕರಗಿಸಿ ಕಡಿಮೆ ಮಾಡಿಕೊಳ್ಳಬಹುದು. ಕೆಲವರಿಗೆ ಕಿಡ್ನಿಯಲ್ಲಿ ಒಮ್ಮೆ ಸ್ಟೋನ್ ಆದ್ರೆ ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ. ಇದನ್ನು ಸಹ ಮನೆಮದ್ದಿನ ಮೂಲಕ ತಡೆಯಬಹುದು. ಇವು ಕಿಡ್ನಿ ಸ್ಟೋನ್ ನ ಲಕ್ಷಣಗಳು.
ಇನ್ನು ಈ ಕಿಡ್ನಿ ಸ್ಟೋನ್ ಆಗೋಕೆ ಪ್ರಮುಖ ಕಾರಣಗಳನ್ನು ನೋಡುವುದಾದರೆ, ಅತಿಯಾಗಿ ಉಪ್ಪನ್ನು ಸೇವಿಸುವುದು. ಉಪ್ಪು ಹೊಟ್ಟೆಯಲ್ಲಿ ಒಂದು ರೀತಿಯ ಆಸಿಡ್ ಉಂಟು ಮಾಡುವುದರಿಂದ ಇದನ್ನು ಸಮತೋಲನದಲ್ಲಿ ಇಡಲು ನಮ್ಮ ಮೂಳೆಗಳು ಕ್ಯಾಲ್ಶಿಯಂ ಅನ್ನು ಬಿಡುಗಡೆ ಮಾಡುತ್ತವೆ. ರಕ್ತದಲ್ಲಿ ಬಂದಂತಹ ಕ್ಯಾಲ್ಶಿಯಂ ಮತ್ತೆ ಮುಳೆಗಳಲ್ಲಿ ಹೀರಿಕೊಳ್ಳದೆ ಇದು ಮೂತ್ರದ ಮೂಲಕ ಹೊರಹೋಗಲು ಪ್ರಯತ್ನಿಸುತ್ತದೆ. ಮೂತ್ರದ ಮೂಲಕ ಹೊರಹೋಗಲು ಆಗದೆ ಇದ್ದಾಗ ಕ್ಯಾಲ್ಶಿಯಂ ಶೇಖರಣೆ ಆಗಿ ಇದೇ ಕಲ್ಲು ಆಗುವುದು. ಹಾಗಾಗಿ ಉಪ್ಪನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಇದರ ಜೊತೆಗೆ ಸಕ್ಕರೆ ತಂಪು ಪಾನೀಯಗಳು ಇವುಗಳ ಸೇವನೆಯಿಂದ ಸಲ ಕಿಡ್ನಿ ಕಲ್ಲು ಉಂಟಾಗುತ್ತದೆ. ಇವಿಷ್ಟು ಕಾರಣಗಳು.
ಇನ್ನು ಕಿಡ್ನಿ ಕಲ್ಲು ಇದಕ್ಕೆ ಮನೆ ಮದ್ದು ನೋಡುವುದಾದರೆ ಮೊದಲಿಗೆ ಬಾಳೆದಿಂಡಿನ ರಸ. ಇದನ್ನು ಬೆಳಿಗ್ಗೆ ಹಾಗೂ ಸಂಜೆ ಒಂದೊಂದು ಲೋಟದಂತೆ ಕುಡಿಯುವುದರಿಂದ ಕಿಡ್ನಿ ಕಲ್ಲು ಕರಗಿ ಹೋಗುವ ಸಾಧ್ಯತೆ ಇರುತ್ತದೆ.
ಬಾರ್ಲಿ ನೀರು. ಸುಮಾರು 3ಲೀಟರ್ ನೀರು ನಾಲ್ಕು ಚಮಚ ಬಾರ್ಲಿ ಹಾಕಿ ಕುದಿಸಿ ಅದರ ನೀರನ್ನು ಸೇವನೆ ಮಾಡುವುದರಿಂದ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತದೆ. ಸಿಟ್ರಸ್ ಫ್ರೂಟ್ಸ್. ಹುಳಿ ಇರುವಂತಹ ಹಣ್ಣುಗಳು ಮೂಸಂಬಿ, ಕಿತ್ತಳೆ ನಿಂಬೆ ಹಣ್ಣು ಇಂತಹ ಹುಳಿ ಇರುವಂತಹ ಹಣ್ಣುಗಳ ಸೇವನೆಯಿಂದ ಸಹ ಕಿಡ್ನಿ ಸ್ಟೋನ್ ಕಡಿಮೆ ಆಗುತ್ತದೆ.
ಕಿಡ್ನಿ ಸ್ಟೋನ್ ಬಿದ್ದು ಹೋಗೋಕೆ ಪ್ರಮುಖ ಅಸ್ತ್ರ ಎಂದರೆ ವ್ಯಾಯಾಮ. ನುಗ್ಗೆ ಮರದ ಬೇರಿನ ಕಷಾಯ ಕೂಡ ಕಿಡ್ನಿ ಸ್ಟೋನ್ ಗೆ ಒಂದು ದಿವ್ಯ ಔಷಧ ಎನ್ನಬಹುದು. ಇದರ ಜೊತೆಗೆ ಎಳನೀರು ಹಾಗೂ ಜಾಸ್ತಿ ನೀರು ಕುಡಿಯಬೇಕು. ಪ್ರತೀ ದಿನ 3ಲೀಟರ್ ಅಷ್ಟಾದರೂ ನೀರು ಕುಡಿಯಲೇಬೇಕು. ಇವಿಷ್ಟು ಕಿಡ್ನಿ ಸ್ಟೋನಿಗೆ ಮನೆಮದ್ದುಗಳು.
ಗಮನಿಸಿ: ಕಿಡ್ನಿ ಸ್ಟೋನ್ ಆದವರು ಅಥವಾ ಆರಂಭದಲ್ಲಿ ಇರುವವರು ಟೊಮೆಟೊ ಹಣ್ಣಿನ ಬೀಜ , ಪಾಲಕ್ ಸೊಪ್ಪು ಇವುಗಳನ್ನು ತಿನ್ನಬಾರದು. ಯಾಕಂದ್ರೆ ಒಮ್ಮೆ ಸ್ಟೋನ್ ಆಗಿ ಕಡಿಮೆ ಆಗಿದ್ದರೆ ಮತ್ತೆ ಮರುಕಳಿಸುವ ಸಾಧ್ಯತೆ ಇರುತ್ತದೆ ಹಾಗಾಗಿ ಇವುಗಳನ್ನು ಬಳಸಬಾರದು.