ದೇಶದಲ್ಲಿ ಸಕ್ಕರೆಕಾಯಿಲೆ ಇರೋರು ಹೆಚ್ಚಾಗಿದ್ದರೆ ಆದ್ರೆ ಇದರಿಂದ ಭಯಪಡುವ ಅವಶ್ಯಕತೆ ಇಲ್ಲ, ನಾವುಗಳು ಸೇವಿಸುವ ಆಹಾರದಿಂದ ಬ್ಲಡ್ ನಲ್ಲಿ ಶುಗರ್ ಮಟ್ಟ ಹೆಚ್ಚಾಗಿರುವುದರಿಂದ ಈ ಸಮಸ್ಯೆ ಉಂಟಾಗುವುದು ಹೌದು ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಮತ್ತು ಗ್ಲೂಕೋಸ್ ಅಧಿಕವಾದರೆ ಮಧುಮೇಹ ಕಾಡುತ್ತದೆ. ಈ ಸಮಸ್ಯೆ ಇರುವವರು ಪ್ರತಿದಿನ ಕೆಲವು ಹಣ್ಣುಗಳನ್ನು ಸೇವಿಸಿದರೆ ಮಧುಮೇಹ ಕಡಿಮೆಯಾಗುವುದು.
ಅಷ್ಟಕ್ಕೂ ಮಧುಮೇಹಿಗಳು ಯಾವ ಹಣ್ಣು ತಿಂದ್ರೆ ಅರೋಗ್ಯ ಸುಧಾರಣೆ ಆಗುತ್ತೆ ಅನ್ನೋದನ್ನ ಇಲ್ಲಿ ನೋಡಿ, ಮೊದಲನೆಯದಾಗಿ ಸೇಬುಹಣ್ಣು ಆರೋಗ್ಯಕ್ಕೆ ಸೇಬುಹಣ್ಣು ಉತ್ತಮ ಹಣ್ಣಾಗಿದೆ ಇದರಲ್ಲಿ ಸೊಲ್ಯೂಬ್ ಮತ್ತು ಇನ್ಸೂಲ್ಯೂಬ್ ಎಂಬ ಫೈಬರ್ ಇರುತ್ತದೆ ಹಾಗಾಗಿ ರಕ್ತದಲ್ಲಿರೋ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಸೇಬು ಸೇವನೆ ಮಧುಮೇಹಿಗಳಿಗೆ ಒಳ್ಳೆಯದು ಅನ್ನೋದು ತಜ್ಞರ ಮಾತು.
ಇನ್ನು ಎರಡನೆಯದಾಗಿ ಸೀಬೆಹಣ್ಣು ಅಂದರೆ ಪೇರಳೆಹಣ್ಣು ಇದು ಕೂಡ ಆರೋಗ್ಯಕ್ಕೆ ಉತ್ತಮ ಹಣ್ಣಾಗಿದ್ದು ಇದರಲ್ಲಿ ಸಕ್ಕರೆಕೆ ಕಾಯಿಲೆ ನಿಯಂತ್ರಿಸುವ ಗುಣವಿದೆ, ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣವೂ ಹೆಚ್ಚಿರುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ಎ, ಫಾಲೆಟ್, ಪೊಟ್ಯಾಷಿಯಂ ಹೆಚ್ಚಿರುತ್ತದೆ. ಸೀಬೆ ಹಣ್ಣಿನ ಗ್ಲೈಕೆಮಿಕ್ ಇಂಡೆಕ್ಸ್ ಅಂದರೆ ಜಿಐ ಇರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ.
ಕಿವಿ ಹಣ್ಣು ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವಂತ ಹಣ್ಣಾಗಿದೆ, ಈ ಹಣ್ಣು ಸೇವನೆಯಿಂದ ಮಧುಮೇಹಿಗಳು ತಮ್ಮ ಕಾಯಿಲೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಈ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಬ್ಲಡ್ ಶುಗರ್ ಲೆವೆಲ್ ನಿಯಂತ್ರಿಸುತ್ತದೆ.