ಸಾಮಾನ್ಯವಾಗಿ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಈ ಮಾಹಿತಿ ಉಪಯೋಗವಾಗಬಹುದು ಅನ್ನೋದು ನಮ್ಮ ಅಭಿಪ್ರಾಯವಾಗಿದೆ ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ತಿಳಿಸಲು ಬಯಸುತ್ತೇವೆ. ಹೆಣ್ಣು ಮಕ್ಕಳು ಇಡೀ ದಿನ ಮನೆಯ ಕೆಲಸ ಅದು ಇದು ಅಂತಲೇ ಕೆಲವರು ಸರಿಯಾಗಿ ಊಟ ಮಾಡೋಕೆ ಸಮಯ ಇರೋದಿಲ್ಲ ಅಷ್ಟೊಂದು ಕೆಲಸ ಮಾಡುತ್ತಿರುತ್ತಾರೆ, ಆದ್ರೆ ಕೆಲವೊಮ್ಮೆ ಮಹಿಳೆಯರಿಗೆ ಈ ಸಮಸ್ಯೆ ಕಾಡುತ್ತದೆ ಇಡೀ ದಿನ ಮನೆಯ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಒತ್ತಡ ಸಮಸ್ಯೆ ಕಾಡುತ್ತದೆ ಮಾನಸಿಕ ಹಾಗು ದೈಹಿಕ ಒತ್ತಡ ಸಮಸ್ಯೆ ಕಾಡುವುದು ಆದ್ದರಿಂದ ಇಂತಹ ಸಮಸ್ಯೆಗೆ ಒಳಗಾಗದೆ ಇಡೀ ದಿನವೆಲ್ಲ ಉತ್ಸಾಹಿಗಳಾಗಿ ಇರಲು ಹಾಗೂ ಒತ್ತಡ ಇಲ್ಲದೆ ಲವಲವಿಕೆಯಿಂದಿರಲು ಹೀಗೆ ಮಾಡಿ ನೋಡಿ.
ಬೆಳಗ್ಗೆಯಿಂದ ರಾತ್ರಿಯವರೆಗೆ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಇದು ಉಪಯೋಗಕಾರಿ, ಕೆಲವರು ಬೆಳಗ್ಗೆ ಎದ್ದ ತಕ್ಷಣ ಕೆಲಸ ಮಾಡೋಕೆ ಶುರು ಮಾಡುತ್ತಾರೆ ಆದ್ರೆ ಮೊದಲು ಕೆಲಸಕ್ಕೆ ಕೈ ಹಾಕುವ ಮುನ್ನ ಎದ್ದ ತಕ್ಷಣ ದೇವರಲ್ಲಿ ಪ್ರಾರ್ಥಿಸಿ ಹಾಗೂ ನಮ್ಮ ದೇಹವನ್ನ ಚುರುಕಾಗಿರಲು ನಾವು ವಾಕಿಂಗ್, ಯೋಗ, ಜಾಗಿಂಗ್ ಹೀಗೆ ಇವುಗಳಲ್ಲಿ ಯಾವುದಾದರು ಒಂದನ್ನ ಅಳವಡಿಸಿಕೊಳ್ಳುವುದು ಉತ್ತಮ. ಇದು ಯಾವುದು ಸಾಧ್ಯವಾಗದಿದ್ದರೆ ನಮ್ಮ ದೇಹವನ್ನ ಸ್ಟ್ರಾಚ್ ಮಾಡುವಂತಹ ಸ್ಟ್ರಚಿಂಗ್ ವ್ಯಾಯಾಮಗಳನ್ನ ಮಾಡುವುದು ಬಹಳ ಉತ್ತಮ.
ಇನ್ನು ಕೆಲ ಮಹಿಳೆಯರು ಪ್ರತಿದಿನ ಬೆಳಗ್ಗೆ ತಮ್ಮ ನಿತ್ಯ ಕರ್ಮಗಳನ್ನ ಮುಗಿಸಿದ ಬಳಿಕ ಮೊದಲು ಟೀ ಅಥವಾ ಕಾಫಿ ಕುಡಿಯುತ್ತಾರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊದಲು ಒಂದು ಬೆಳ್ಳುಳ್ಳಿ ಎಸಳನ್ನ ಸೇವಿಸಿ ಒಂದು ಲೋಟ ಬೆಚ್ಚಗಿನ ನೀರನ್ನ ಕುಡಿಯಬೇಕು ಸ್ವಲ್ಪ ಸಮಯದ ನಂತರ ನಿಮಗೆ ಇಷ್ಟವಾದ ಟೀ ಅಥವಾ ಕಾಫಿಯನ್ನ ಕುಡಿಯಬೇಕು. ಬೆಚ್ಚಗಿನ ನೀರನ್ನ ಕುಡಿಯುವುದರಿಂದ ದಿನವಿಡೀ ಉತ್ಸಾಹದಿಂದ ಇರಬಹುದು. ಮೊದಲನೆಯದಾಗಿ ಇಲ್ಲಿ ಗಮನಿಸಬೇಕಾದ ಈವಿಷಯ ಏನು ಅಂದ್ರೆ ಉತ್ಸಾಹವಾಗಿದ್ದರೆ ಇಡೀ ದಿನ ಮಾಡುವಂತ ಕೆಲಸದಲ್ಲಿ ದಣಿವು ಕಾಣಿಸೋದಿಲ್ಲ ಆದ್ದರಿಂದ ಇವುಗಳನ್ನು ಪಾಲನೆ ಮಾಡಿದರೆ ನಿಮ್ಮ ಅರೋಗ್ಯ ಉತ್ತಮ ರೀತಿಯಲ್ಲಿ ವೃದ್ದಿಯಾಗೋದ್ರಲ್ಲಿ ಯಾವುದೇ ಸಂಶಯ ಬೇಡ. ಇದರಿಂದ ದೈಹಿಕ ಹಾಗು ಮಾನಸಿಕ ಒತ್ತಡ ನಿವಾರಣೆಯಾಗಿ ಆರೋಗ್ಯವಂತರಿಗಿರಬಹುದು.