ಒಂದು ಘಟನೆ ಬದುಕನ್ನು ಹೇಗೆ ಬದಲಾಯಿಸುತ್ತದೆ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಅಂಥದ್ದೊಂದು ಉದಾಹರಣೆ ಐಎಎಸ್ ಅಧಿಕಾರಿ ಪ್ರಿಯಾಂಕ ಶುಕ್ಲ ಅವರು. ಛತ್ತೀಸ್ಘಡದಲ್ಲಿ ಹುಟ್ಟಿ ಬೆಳೆದ ಹುಡುಗಿ ಪ್ರಿಯಾಂಕ, ಇವರಿಗೆ ಚಿಕ್ಕ ವಯಸ್ಸಿನಿಂದ ಡಾಕ್ಟರ್ ಆಗಬೇಕು ಎಂದು ಆಸೆ ಇತ್ತು, ಆದರೆ ಇವರ ತಂದೆಗೆ ಮಗಳು ಐಎಎಸ್ ಅಧಿಕಾರಿ ಆಗಬೇಕು ಎಂದು ಆಸೆ ಇತ್ತು..
ತಮ್ಮ ಆಸೆಯ ಹಾಗೆ ಪ್ರಿಯಾಂಕ ಅವರು ಲಕ್ನೌ ನಲ್ಲಿ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ ಗೆ ಸೇರಿ, ಡಾಕ್ಟರ್ ಆದರು. ಡಾಕ್ಟರ್ ಆಗಿ ಕೆಲಸ ಮಾಡುವುದರ ಜೊತೆಗೆ ಆಸ್ಪತ್ರೆಯ ಹತ್ತಿರ ಇದ್ದ ಕೊಳಗೇರಿಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದರು ಪ್ರಿಯಾಂಕ. ಹಾಗೆ ಒಂದು ದಿನ ಕೊಳಗೇರಿಗೆ ಹೋಗಿದ್ದಾಗ ಅಲ್ಲಿ ಒಬ್ಬ ಮಹಿಳೆ ತನ್ನ ಮಗುವಿಗೆ ಕಲುಷಿತ ನೀರನ್ನು ಕುಡಿಸುತ್ತಿದ್ದದ್ದು ನೋಡಿ, ಆ ನೀರನ್ನು ಕೊಡಬಾರದು ಎಂದು ಹೇಳುತ್ತಾರೆ ಪ್ರಿಯಾಂಕ.
ಆಗ ಆಕೆ ಇದೆಲ್ಲಾ ಹೇಳೋಕೆ ನೀನೀನು ಜಿಲ್ಲಾಧಿಕಾರಿನ ಎಂದು ಕೇಳಿದರಂತೆ. ಈ ಮಾತು ಪ್ರಿಯಾಂಕ ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿದೆ, ಅಂದು ಮನೆಗೆ ಹೋಗಿ ಜಿಲ್ಲಾಧಿಕಾರಿ ಆಗಬೇಕು ಎಂದು ಪರೀಕ್ಷೆ ಶುರು ಮಾಡಿ, ಮೊದಲ ಪ್ರಯತ್ನದಲ್ಲಿ ವಿಫಲರಾಗಿ, ಎರಡನೇ ಪ್ರಯತ್ನದಲ್ಲಿ UPSC ಪರೀಕ್ಷೆ ಕ್ಲಿಯರ್ ಮಾಡುತ್ತಾರೆ ಪ್ರಿಯಾಂಕ. 2009ರಲ್ಲಿ UPSC ಕ್ಲಿಯರ್ ಮಾಡಿ, ಇವರಿಗೆ ಛತ್ತೀಸ್ಘಡ ಕೇಡರ್ ನಲ್ಲೇ ಸಿಕ್ಕಿತು.
ಅಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಈಗ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನೃತ್ಯ, ಕವನ ಬರೆಯುವುದು ಮತ್ತು ಗಾಯನ ಎಲ್ಲದರಲ್ಲೂ ಆಸಕ್ತಿ ಇದೆ ಎಂದು ಖುದ್ದು ಪ್ರಿಯಾಂಕ ಶುಕ್ಲ ಅವರೇ ಹೇಳಿಕೊಂಡಿದ್ದಾರೆ.