ಹಿಮ್ಮಡಿ ನೋವು ಮತ್ತು ಹಿಮ್ಮಡಿ ಒಡಕು ಇದು ಈಗೀಗ ಎಲ್ಲರಿಗೂ ಸಾಮಾನ್ಯವಾಗಿದೆ. ಈ ಹಿಮ್ಮಡಿ ಒಡಕಿಗೆ ಕಾರಣ ಏನು ಎಂಬುದನ್ನು ನೋಡುವುದಾದರೆ , ದೇಹದ ತೂಕ ಹೆಚ್ಚಾಗಿರುವುದು . ಇದಕ್ಕೆ ನಾವು ಆಯುರ್ವೇದದ ಅಥವಾ ಯಾವುದೇ ನೈಸರ್ಗಿಕ ರೀತಿಯಲ್ಲಿ ಔಷಧಗಳನ್ನು ಮಾಡಬೇಕಾಗುತ್ತದೆ. ಈ ಲೇಖನದಲ್ಲಿ ತಿಳಿಸುವಂತಹ ಔಷಧವು ಹಿಮ್ಮಡಿ ಒಡಕು ಮತ್ತು ಹಿಮ್ಮಡಿ ನೋವು ಈ ಎರಡಕ್ಕೂ ಪ್ರಯೋಜನಕಾರಿ ಆಗಿರುತ್ತದೆ.
ಹಿಮ್ಮಡಿ ಒಡಕು ಬಿಡುವುದರಿಂದ ತಮ್ಮ ಸೌಂದರ್ಯಕ್ಕೆ ಎಲ್ಲಿ ತೊಂದರೆ ಆಗುತ್ತದೆಯೇನೋ ಎನ್ನುವ ಚಿಂತೆ ಕೆಲವರಲ್ಲಿ ಇರುತ್ತದೆ. ಇದರಿಂದ ಜೀವಕ್ಕೆ ಯಾವುದೆ ಅಪಾಯ ,ಹಾನಿ ಇಲ್ಲದೆ ಹೋದರೂ ಕೆಲವೊಮ್ಮೆ ಸೌಂದರ್ಯದ ದೃಷ್ಟಿಯಿಂದ ಈ ಹಿಮ್ಮಡಿ ಒಡಕನ್ನು ನಿವಾರಿಸಿಕೊಳ್ಳುವುದು ಒಳ್ಳೆಯದು. ಹೀಗೆ ಓಂದು ಸಂಶೋಧನೆ ಮಾಡುವಾಗ ಒಂದಿಷ್ಟು ಜನರಿಗೆ ಕಾಲು ನೋವು, ಮಂಡಿನೋವು ಇವುಗಳ ಸಲುವಾಗಿ ಒಮೆಗ 3 ಮಾತ್ರೆಗಳನ್ನು ನೀಡಲಾಗಿತ್ತು. ಇದರಿಂದಾಗಿ ಒಮೆಗ3 ತೆಗೆದುಕೊಂಡವರಿಗೆ ಮಂಡಿನೋವಿನ ಜೊತೆಗೆ ಹಿಮ್ಮಡಿ ಒಡಕು ಹಾಗೂ ಹಿಮ್ಮಡಿ ನೋವೂ ಸಹ ಕಡಿಮೆ ಆಗಿತ್ತು ಎಂದು ಒಂದು ರಿಸರ್ಚ್ ನಲ್ಲಿ ತಿಳಿದುಬಂದಿದೆ. ಇದರಿಂದ ತಿಳಿದು ಬಂದ ವಿಷಯ ಎಂದರೆ, ಒಮೆಗ3 ಇದು ಹಿಮ್ಮಡಿ ಒಡಕು ಹಾಗೂ ನೋವಿಗೂ ಪ್ರಯೋಜನಕಾರಿ ಆಗಿದೆ ಎಂದು. ಒಮೆಗ6 ಹೆಚ್ಚಾಗಿ ಒಮೆಗ3 ಕಡಿಮೆ ಇರುವುದೂ ಸಹ ಹಿಮ್ಮಡಿ ಒಡಕು ಬರಲು ಮುಖ್ಯ ಕಾರಣ ಆಗಿರುತ್ತದೆ.
ಹಿಮ್ಮಡಿ ಒಡಕಿಗೆ ಮನೆಯಲ್ಲಿಯೇ ಮಾಡುವ ಸುಲಭವಾದ ಮನೆಮದ್ದು ಎಂದರೆ ಬಿಸಿ ನೀರಿನಲ್ಲಿ ಕಾಲು ಇಟ್ಟುಕೊಳ್ಳುವುದು. ರಾತ್ರಿ ಮಲಗುವ ಮುನ್ನ ಅರ್ಧ ಬಕೆಟ್ ನೀರಿಗೆ ಒಂದು ಹಿಡಿ ಕಲ್ಲುಪ್ಪನ್ನು ಸೇರಿಸಿ 20 ನಿಮಿಷ ಕಾಲನ್ನು ನೀರಿನಲ್ಲಿ ಇಟ್ಟುಕೊಂಡರೆ ಹಿಮ್ಮಡಿ ನೋವು ಕಡಿಮೆ ಆಗುತ್ತದೆ. ಇದೆ ರೀತಿ ಪ್ರತೀ ದಿನ ಒಂದು ಅಥವಾ ಎರಡು ವಾಲ್ನಟ್ ಸೇವನೆ ಮಾಡುವುದರಿಂದ ಸಹ ಹಿಮ್ಮಡಿ ನೋವು ಹಾಗೂ ಒಡಕು ನಿವಾರಣೆ ಆಗುತ್ತದೆ. ಹಾಗೇ ಸ್ವಲ್ಪ ಹುರಿದು ಪುಡಿ ಮಾಡಿಕೊಂಡ ಅಗಸೆ ಬೀಜದ ಪುಡಿಯನ್ನು ಪ್ರತೀ ದಿನ ಎರಡು ಚಮಚ ಪುಡಿಯನ್ನು ತುಪ್ಪದ ಜೊತೆ ಸೇರಿಸಿ ತಿನ್ನುವುದರಿಂದ ಸಹ ಹಿಮ್ಮಡಿ ಒಡಕು ಕಡಿಮೆ ಆಗುತ್ತದೆ.
ಅಲೋವೆರ ಜೆಲ್ ಅನ್ನು ನಮ್ಮ ಹಿಮ್ಮಡಿಗಳಿಗೆ ಹಚ್ಚುವುದರಿಂದ ಹಿಮ್ಮಡಿ ಒಡಕು ಕಡಿಮೆ ಆಗುತ್ತದೆ. ಎಫ್ಸಮ್ ಸಾಲ್ಟ್ (ಮ್ಯಾಗ್ನಿಶಿಯಂ ಸಲ್ಫೇಟ್) ಇದೂ ಸಹಾಯಕಾರಿ ಆಗುತ್ತದೆ. ರಾತ್ರಿ ಮಲಗುವ ಮುನ್ನ ಅರ್ಧ ಬಕೆಟ್ ನೀರಿಗೆ 2 ಸ್ಪೂನ್ ಎಫ್ಸಮ್ ಸಾಲ್ಟ್ ಹಾಕಿಕೊಂಡು 20 ನಿಮಿಷಗಳ ಕಾಲು ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳುವುದರಿಂದ ಸಹ ಒಡಕು ನೋವು ಕಡಿಮೆ ಆಗುತ್ತದೆ. ಆದರೆ ಕಾಲನ್ನು ನೀರಿನಲ್ಲಿ ಇಟ್ಟುಕೊಳ್ಳುವ ಮುನ್ನ ಚೆನ್ನಾಗಿ ಸ್ವಚ್ಛವಾಗಿ ಕಾಲು ತೊಳೆದಿರಬೇಕು. ಹಾಗೂ ನೀರಿನಲ್ಲಿ ಇಟ್ಟುಕೊಂಡ ನಂತರ ಕೂಡಾ ಒಂದು ಬಟ್ಟೆಯಿಂದ ಚೆನ್ನಗಿ ಒರೆಸಿ ಮನೆಯಲ್ಲೇ ಮಾಡಿಕೊಂಡ ಈ ಮುಲಾಮ್ ಅನ್ನು ಹಚ್ಚಿಕೊಳ್ಳಬೇಕು. ಈ ಮುಲಾಮ್ ತಯಾರಿಸಿಕೊಳ್ಳೋಕೆ ಮುಖ್ಯವಾಗಿ ಬೇಕಾಗಿರುವುದು ಜೇನಿನ ಮೇಣ , ಕೊಬ್ಬರಿ ಎಣ್ಣೆ ಹಾಗೂ ಅರಿಶಿನ. ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಲು ಇಟ್ಟುಕೊಂಡು ಅದಕ್ಕೆ ಜೇನಿನ ಮೆಣವನ್ನು ಸೇರಿಸಿ ಸ್ವಲ್ಪ ಸಮಯದ ನಂತರ ಇದು ಒಂದು ರೀತಿಯ ಕ್ರೀಮ್ ತರ ಆದಾಗ ಅದಕ್ಕೆ ಅರಿಶಿನ ಸೇರಿಸಿಕೊಳ್ಳಬೇಕು . ಆಗ ಒಂದು ರೀತಿಯ ಅರಿಶಿನ ಬಣ್ಣದ ಮೂಲಾಂ ತಯಾರಾಗುತ್ತದೆ. ಇದನ್ನು ರಾತ್ರಿ ಬಿಸಿನೀರಿನಲ್ಲಿ ಕಾಲು ಇಟ್ಟುಕೊಂಡ ನಂತರ ಹಚ್ಚಬೇಕು. ಇದರಿಂದ ಹಿಮ್ಮಡಿ ಒಡಕು ನಿವಾರಣೆ ಆಗುತ್ತದೆ.
ಇನ್ನು ನಾವು ಸೇರಿಸುವಂತಹ ಆಹಾರದಲ್ಲಿ ಹಸಿ ಕಾಯಿ ಹಾಲು ಹಾಗೂ ತುಪ್ಪ ಇವುಗಳನ್ನು ಸೇವಿಸುವುದರಿಂದ ಸಹ ಹಿಮ್ಮಡಿ ಒಡಕನ್ನು ನಿವಾರಿಸುವಂತಹ ಪೋಷಕಾಂಶಗಳು ನಮಗೆ ಸಿಗುತ್ತವೆ. ವಿಟಮಿನ್ ಈ ಇರುವಂತಹ ಆಹಾರ ಬಾದಾಮಿಯನ್ನು 10 ರಿಂದ 15 ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದರಿಂದಲೂ ಸಹ ಹಿಮ್ಮಡಿ ಒಡಕು ಕಡಿಮೆ ಆಗುತ್ತದೆ. ಇದರ ಜೊತೆಗೆ ವಿಟಮಿನ್ ಸಿ ಸಹ ಅಗತ್ಯ ಇರುತ್ತದೆ ಅದಕ್ಕಾಗಿ ವಿಟಮಿನ್ ಸಿ ಇರುವಂತಹ , ಮುಸುಂಬೆ ಕಿತ್ತಳೆ , ನಿಂಬೆ ಹಣ್ಣು ಇವುಗಳನ್ನು ಸೇವಿಸಿ ಹೆಚ್ಚಿನ ವಿಟಮಿನ್ ಸಿ ಅಂಶವನ್ನು ಪಡೆದುಕೊಂಡು ಹಿಮ್ಮಡಿ ಒಡಕನ್ನು ಕಡಿಮೆ ಮಾಡಿ ಕೊಳ್ಳಬಹುದು. ಈ ಎಲ್ಲಾ ಮನೆಮದ್ದುಗಳಲ್ಲಿ ಯಾವುದೇ ಎರಡನ್ನು ಮಾಡಿದರೂ ಸಹ ಕೇವಲ ಮೂರು ತಿಂಗಳಿನಲ್ಲಿ ಹಿಮ್ಮಡಿ ನೋವು ಹಾಗೂ ಹಿಮ್ಮಡಿ ಒಡಕು ಕಡಿಮೆ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳುತ್ತಾರೆ ಶಿರಸಿಯ ನಿಸರ್ಗ ಆಸ್ಪತ್ರೆಯ ಆಯುರ್ವೇದ ವೈದ್ಯರಾದ ಡಾಕ್ಟರ್ ವೆಂಕಟರಮಣ ಹೆಗಡೆ ಅವರು.