2024ರ ಮೇ 1 ತಾರೀಖು ಗುರು ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಬದಲಾವಣೆ 3 ರಾಶಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆ ಅದೃಷ್ಟವಂತ ರಾಶಿಗಳು ಯಾವುದು? ಯಾವ ರಾಶಿ ಮೇಲೆ ಒಂದು ವರ್ಷ ಗುರು ದೆಸೆ ಇದೆ ಎಂದು ನೋಡೋಣ.
ಗುರು ಗ್ರಹ ಒಂದು ರಾಶಿ ಚಿಹ್ನೆಯಿಂದ ಇನ್ನೊಂದು ರಾಶಿ ಚಿಹ್ನೆಗೆ ಚಲಿಸಿದಾಗ ಜನರ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಗುರು ದೆಸೆಯಿಂದ ಉತ್ತಮ ಫಲಗಳು ಪಡೆಯಬಹುದು. 2024ರ ಮೇ ತಿಂಗಳಿನಲ್ಲಿ ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಅಕ್ಟೋಬರ್ 9ನೇ ತಾರೀಖು ಗುರು ಗ್ರಹ ಹಿಮ್ಮುಖ ಅಗುತ್ತದೆ. 2025ರ ಫೆಬ್ರವರಿ ತಿಂಗಳಿನಲ್ಲಿ ನೇರವಾಗಿ ಸಂಚಾರ ಮಾಡುತ್ತಾನೆ.
ಕಟಕ ರಾಶಿ, ಸಿಂಹ ರಾಶಿ ಮತ್ತು ಕನ್ಯಾ ರಾಶಿ ಆ ಅದೃಷ್ಟ ಪಡೆದ ರಾಶಿಗಳು.
ಗುರು ಸಂಚಾರದ ಸಂಪೂರ್ಣ ಗೆಲುವು ಸಾಧಿಸುವ ಸಾಧ್ಯತೆ ಇದೆ. ಎಲ್ಲಾ ರೀತಿಯ ಗುರು ಗ್ರಹದ ಲಾಭ ಪಡೆಯುವರು. ಹೆಚ್ಚು ಹಣದ ಒಳ ಹರಿವು ಹೆಚ್ಚಾಗುತ್ತದೆ.
ಆದಾಯ ಗಳಿಕೆ ವಿವಿಧ ಮೂಲಗಳಿಂದ ಬರುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುತ್ತದೆ ಮತ್ತು ಇಷ್ಟು ಕಾಲ ಇದ್ದ ಸಮಸ್ಯೆಗಳು ದೂರವಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಹುಡುಕಿ ಬರುವ ಸಾಧ್ಯತೆ ಹೆಚ್ಚಗೆ ಇದೆ. ಒಳ್ಳೆಯ ಉದ್ಯೋಗ ಸಿಗುತ್ತದೆ ಮತ್ತು ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯ ಇದೆ ಜೊತೆಗೆ ಒಳ್ಳೆಯ ಆದಾಯ ಕೂಡ ಸಿಗುತ್ತದೆ. ಸರ್ಕಾರಿ ನೌಕರಿ ಬೇಕು ಎನ್ನುವ ಜನರಿಗೆ ಕೂಡ ಉತ್ತಮ ಮಂಗಳಕರ ಫಲ ದೊರಕುತ್ತದೆ.
ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಮಾಡುವ ಯಾವ ಕೆಲಸವಾದರೂ ಅದಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ವಿವಾಹ ಭಾಗ್ಯ ಕೂಡ ಕೂಡಿ ಬರುತ್ತದೆ. 5, 7, 11 ಮನೆಗಳಲ್ಲಿ ಸಂಬಂಧ ಪಟ್ಟಂತೆ ಇರುವ ರಾಶಿಗಳ ಜನರ ವಿವಾಹ ಆಗುತ್ತದೆ. ಸಂಗಾತಿಗಾಗಿ ಹುಡುಕಾಟ ಮಾಡುವ ಜನರಿಗೆ ಈ ವರ್ಷ ಪೂರಾ ಅಂದರೆ 2024 ಮೇ ತಿಂಗಳಿನಿಂದ 2025ರ ಮೇ ತಿಂಗಳ ಒಳಗೆ ಮದುವೆ ಯೋಗ ಕೂಡಿ ಬರುತ್ತದೆ. ಪ್ರೀತಿ ಪ್ರೇಮ ಮಾಡಿದ್ದಾರೆ ಅದು ಕೂಡ ಸಫಲವಾಗುತ್ತದೆ. ಮಿಥುನ ರಾಶಿ, ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಕಟಕ ರಾಶಿಯವರ ವಿವಾಹ ನಡೆಯುತ್ತದೆ.
ವೃಷಭ ರಾಶಿ, ತುಲಾ ರಾಶಿ ಮತ್ತು ಧನಸ್ಸು ರಾಶಿಯವರ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡಬಹುದು. ಇದೆಲ್ಲಾ ಗುರು ಗ್ರಹದ ಬಲದಿಂದ ಆಗುವ ಸಾಧ್ಯತೆ ಇರುತ್ತದೆ. ಇವು ಕೇವಲ ಗೋಚರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಇದಕ್ಕೂ ಯಾವುದೇ ಸಂಬಂಧವಿಲ್ಲ. ಗ್ರಹಗಳ ರಾಶಿಚಕ್ರದಲ್ಲಿ ಬದಲಾವಣೆ ತರುತ್ತದೆ.