Home guard jobs Bengalore: ಗೃಹ ರಕ್ಷಕ ದಳದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ, ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿ, ಬೆಂಗಳೂರು ನಗರದಲ್ಲಿ, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ, ಪ್ರಸ್ತುತ ಖಾಲಿ ಇರುವ ಗೃಹರಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು, ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ ಜನವರಿ 5 ಆಗಿದ್ದು, ಈ ದಿನಾಂಕದ ಒಳಗೆ ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಗೃಹ ರಕ್ಷಕ ಹುದ್ದೆಗೆ ಅರ್ಜಿ ಹಾಕುವವರಿಗೆ ಇರಬೇಕಾದ ಅರ್ಹತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಅಭ್ಯರ್ಥಿಯ ವಯಸ್ಸು 19 ವರ್ಷ ತುಂಬಿರಬೇಕು, ಹಾಗೆಯೇ ಅವರಿಗೆ ಕನ್ನಡ ಮತ್ತು ಇಂಗ್ಲಿಷ್ ಕಂಪ್ಯೂಟರ್ ಟೈಪಿಂಗ್, ಡ್ರೈವರ್ ಗಳು, ಎಲೆಕ್ಟ್ರಿಷಿಯನ್, ಅಡುಗೆ ಭಟ್ಟರು, ಕಾರ್ಪೆಂಟರ್, ಹಾಗೂ ಪ್ಲಂಬರ್ ಇನ್ನಿತರ ಕೆಲಸಗಳು ಬರುವವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ.

ಈ ಹುದ್ದೆಯನ್ನು ಪಡೆಯಲು ಆಸಕ್ತಿ ಇರುವವರು ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ, ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಅಗ್ನಿಶಾಮಕ ಠಾಣೆ ಪಕ್ಕ, ರಾಜಾಜಿನಗರ, ಬೆಂಗಳೂರು-560010 ಈ ಅಡ್ರೆಸ್ ಗೆ ಅರ್ಜಿ ಸಲ್ಲಿಸಬಹುದು. ಜನವರಿ 5ನೇ ತಾರೀಕಿನ ವರೆಗು, ಮಧ್ಯಾಹ್ನ 2:30 ಇಂದ 5ಗಂಟೆ ವರೆಗು ಅರ್ಜಿಗಳನ್ನು ವಿತರಣೆ ಮಾಡಲಾಗುತ್ತದೆ.

ಇಲಾಖೆಯಲ್ಲಿ ಅರ್ಜಿ ಪಡೆಯಲು, ಅಭ್ಯರ್ಥಿಗಳು 10ನೇ ತರಗತಿಯ ಮಾರ್ಕ್ಸ್ ಕಾರ್ಡ್, ಅಥವಾ ಒರಿಜಿನಲ್ ಟಿಸಿ ತೆಗೆದುಕೊಂಡು ಹೋಗಬೇಕು. ಇದು ಜನ್ಮದಿನಾಂಕವನ್ನು ಖಚಿತಪಡಿಸಲು ಈ ದಾಖಲೆ ಬೇಕಾಗುತ್ತದೆ. ಇನ್ನು ಜಾಸ್ತಿ ಮಾಹಿತಿ ಪಡೆಯಲು, ಸಮಾದೇಷ್ಟರವರ ಕಚೇರಿ, ಗೃಹರಕ್ಷಕ ದಳ, ಬೆಂಗಳೂರು ಉತ್ತರ  ಜಿಲ್ಲೆ, ವೆಸ್ಟ್ ಆಫ್ ಕಾರ್ಡ್ ರೋಡ್, ರಾಜಾಜಿನಗರ, ಬೆಂಗಳೂರು-560010 ಇಲ್ಲಿಗೆ ಭೇಟಿ ನೀಡಬಹುದು. ಈ ನಂಬರ್ ಗೆ ಕಾಲ್ ಮಾಡಿ 080-23142542 ಹೆಚ್ಚಿನ ಮಾಹಿತಿ ಪಡೆಯಬಹುದು.

By AS Naik

Leave a Reply

Your email address will not be published. Required fields are marked *