ಸಾಮಾನ್ಯವಾಗಿ ಶೀತ ಅನ್ನೋ ಸಮಸ್ಯೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಟೈಮ್ ನಲ್ಲಿ ಕಾಡುತ್ತದೆ, ಇದಕ್ಕೆ ಪರಿಹಾರ ಮಾರ್ಗವಾಗಿ ಮಾರುಕಟ್ಟೆಯಲ್ಲಿ ವಿವಿಧ ಔಷಧಿಗಳಿವೆ ಆದ್ರೆ ನಾವೇ ಸ್ವತಃ ಮನೆಯಲ್ಲಿ ಇರುವಂತ ಒಂದಿಷ್ಟು ಸಾಮಗ್ರಿಗಳನ್ನು ಬಳಸಿ ಮನೆಮದ್ದು ತಯಾರಿಸಿ ಅದರಿಂದ ಸೂಕ್ತ ಪರಿಹಾರ ಪಡೆದುಕೊಳ್ಳುವ ಕೆಲಸ ಮಾಡಬಹುದು.
ಹೌದು ಶೀತದಿಂದ ಮೂಗು ಕಟ್ಟಿದ್ರೆ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬಾರದೆ ಇರಬಹುದು, ಆದ್ದರಿಂದ ಈ ಸಮಸ್ಯೆಯಿಂದ ದೂರ ಉಳಿಯಲು ಈ ಚಿಕ್ಕ ಉಪಾಯ ಮಾಡಿ ಖಂಡಿತ ಪರಿಹಾರವಿದೆ, ಎಳ್ಳೆಣ್ಣೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುತ್ತದೆ, ಈ ಎಳ್ಳೆಣ್ಣೆಯನ್ನು ಮೂಗಿನ ಮೇಲೆ ಸ್ವಲ್ಪ ಹಚ್ಚಿಕೊಂಡು ಮಲಗಿದರೆ ಮೂಗು ಕಟ್ಟುವ ಸಮಸ್ಯೆ ಇರೋದಿಲ್ಲ ಸುಖವಾದ ನಿದ್ರೆ ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ.
ಇನ್ನು ಕೆಲವರಲ್ಲಿ ಈ ಸಮಸ್ಯೆಗಳು ಕೂಡ ಇರುತ್ತವೆ ಬಾಯಿಹುಣ್ಣು ಅಜೀರ್ಣತೆ, ಇದಕ್ಕೆ ಪರಿಹಾರ ಕಾಣಲು ಒಣಶುಂಠಿಯ ರಸದೊಂದಿಗೆ ಹಾಲನ್ನು ಬೆರಸಿ ಸೇವಿಸುತ್ತಾ ಬಂದರೆ ಅಜೀರ್ಣತೆ ಹಾಗೂ ಬಾಯಿ ಹುಣ್ಣು ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೆ ಗಂಟಲು ನೋವು ಏನಾದ್ರು ನಿಮ್ಮಲ್ಲಿ ಕಾಣಿಸಿಕೊಂಡರೆ ಅದಕ್ಕೆ ಪರಿಹಾರ ಮಾರ್ಗ ವಿನಿಗರ್ ಮತ್ತು ಈರುಳ್ಳಿ ರಸವನ್ನು ಸೇವಿಸುತ್ತಾ ಬಂದರೆ ಗಂಟಲು ನೋವು ದೂರವಾಗುತ್ತದೆ
ಹಾಲಿನಲ್ಲಿ ಹಸಿ ಶುಂಠಿಯ ರಸವನ್ನು ಮಿಶ್ರಣ ಮಾಡಿ ಸೇವನೆ ಮಾಡಿದ್ರೆ ಹೊಟ್ಟೆ ಸಂಬಂದಿ ತೊಂದರೆಗಳು ನಿವಾರಣೆಯಾಗುತ್ತವೆ. ನಿಮಗೆ ಈ ಉಪಯುಕ್ತ ವಿಚಾರ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಕೆಲವೊಮ್ಮೆ ಇಂಥ ಸಮಸ್ಯೆ ಬಂದಾಗ ಇದರ ಸದುಪಯೋಗ ಪಡೆದುಕೊಳ್ಳಲಿ.