Sheep and goat rearing, construction of agricultural pits get subsidies from the government: ಈ ವರ್ಷ ನಮ್ಮ ರಾಜ್ಯದಲ್ಲಿ ಮಳೆ ಇಲ್ಲದೆ ಕೃಷಿ ಕೆಲಸಗಳು ನಡೆಯದೇ, ರೈತರಿಗೆ ಸಿಕ್ಕಾಪಟ್ಟೆ ತೊಂದರೆ ಆಗಿದೆ. ರಾಜ್ಯದ ಪರಿಸ್ಥಿತಿ ಈಗ ಕಷ್ಟಕ್ಕೆ ಸಿಲುಕಿಕೊಂಡಿದೆ ಎಂದರೆ ತಪ್ಪಲ್ಲ. ರೈತರಿಗೆ ಈಗ ಕೃಷಿಗೆ ಮಾತ್ರವಲ್ಲದೆ, ಮೇಕೆ ಕುರಿಗಳು ಇದೆಲ್ಲದಕ್ಕೂ ಮೇವು ಹಾಕುವುದಕ್ಕೂ ಕೂಡ ಸಮಸ್ಯೆ ಉಂಟಾಗಿದೆ. ರೈತರು ದಿನದ ಊಟಕ್ಕೆ ಕೂಡ ಕಷ್ಟಪಡುವಂಥ ಪರಿಸ್ಥಿತಿ ಈಗ ಉಂಟಾಗಿದೆ. ಈ ರೀತಿ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ, ಸರ್ಕಾರ ಕೂಡ ಸಾಕಷ್ಟು ಯೋಜನೆಗಳನ್ನು ಕೂಡ ಜಾರಿಗೆ ತರುತ್ತಿದೆ.
ಇದಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಉದ್ಯೋಗ ಖಾತರಿ ಯೋಜನೆ ಯನ್ನು ಜಾರಿಗೆ ತಂದಿದೆ, ಇದರ ಬಗ್ಗೆ ಸರ್ಕಾರ ಜನರಲ್ಲಿ ಅರಿವು ಮೂಡಿಸಲಿದೆ. ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆ ಕಡೆಗೆ ಅಭಿಯಾನವನ್ನು ಜಿಲ್ಲಾ ಪಂಚಾಯಿತಿಗಳ ಕಡೆಯಿಂದ ನಡೆಸಲು ಸರ್ಕಾರ ಮುಂದಾಗಿದೆ. ಈ ಅಭಿಯಾನದಲ್ಲಿ ರೈತರಿಗೆ ಸಾಕಷ್ಟು ಪ್ರಯೋಜನ ಸಿಗಲಿದೆ. ಒಂದು ರೈತರ ಕುಟುಂಬ, ತಮ್ಮ ಕೆಲಸಕ್ಕಾಗಿ ಕುರಿ ಶೆಡ್ ನಿರ್ಮಾಣ, ದನದ ಕೊಟ್ಟಿಗೆ, ಬದು,, ಬಚ್ಚಲು ಹೊಂಡ, ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆ ಇದೆಲ್ಲದರಿಂದ ಕಾಮಗಾರಿಗಾಗಿ ನರೇಗಾ ಯೋಜನೆಯ ಅಡಿಯಲ್ಲಿ ಸುಮಾರು 5 ಲಕ್ಷ ರೂಪಾಯಿಯವರೆಗು ಸಾಲ ನೀಡಲಾಗುತ್ತದೆ.
ಇಷ್ಟು ದಿವಸ 2.5ಲಕ್ಷ ಸಾಲ ನೀಡಲಾಗುತ್ತಿತ್ತು, ಆದರೆ ಈಗ ಸಾಲದ ಮೊತ್ತ ಹೆಚ್ಚಾಗಿದ್ದು 5 ಲಕ್ಷದವರೆಗೂ ಸಾಲ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಹಳ್ಳಿ ಕಡೆಯ ಹುಡುಗರು ದಿನಕ್ಕೆ 315 ರೂಪಾಯಿಯ ವೇತನ ಬರುವ ಹಾಗೆ 100 ದಿನಗಳವರೆಗು ಈ ಯೋಜನೆಯ ಅಡಿಯಲ್ಲಿ ಕೆಲಸ ಪಡೆದುಕೊಳ್ಳಬಹುದು. ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ 2024-25ನೇ ವರ್ಷದ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಗೆ ಸಿದ್ಧಪಡಿಸಲಾಗುತ್ತಿದ್ದು, ರೈತರು ಕೂಲಿ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
ಈ ಯೋಜನೆಯ ಬಗ್ಗೆ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ, ಹಾಗಾಗಿ ರೋಜಗಾರ್ ದಿವಸ್ ಅಭಿಯಾನವನ್ನು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣಾಭಿವೃದ್ಧಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲಕ ನಡೆಸಲಾಗುತ್ತದೆ..18 ವರ್ಷದಿಂದ 65 ವರ್ಷ ವಯಸ್ಸಿನವರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ಕೆಲಸ ಪಡೆಯಲು, ಜಾಬ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಪಡೆದುಕೊಳ್ಳಬೇಕು. ಅಗತ್ಯವಿರುವ ದಾಖಲೆಗಳ ಜೊತೆಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಕಾಯಕಮಿತ್ರ ಆಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಸೌಲಭ್ಯ ಪಡೆಯಲು ಯಾರಿಗೆಲ್ಲಾ ಅರ್ಹತೆ ಇದೆ ಎಂದು ನೋಡುವುದಾದರೆ, ಎಸ್.ಸಿ/ಎಸ್.ಟಿ ಕ್ಯಾಟಗರಿಗೆ ಸೇರಿದವರು *ಅಲೆಮಾರಿ ಜನಾಂಗದವರು ಅಧಿಸೂಚನೆಯಿಂದ ಕೈಬಿಟ್ಟಿರುವ ಬುಡಕಟ್ಟು ಜನಾಂಗದವರು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದವರು ಮಹಿಳೆ ಮುಖ್ಯಸ್ಥೆ ಆಗಿರುವ ಕುಟುಂಬದವರು ವಿಕಲ ಚೇತನ ಕುಟುಂಬಗಳು ಭೂ ಸುಧಾರಣಾ ಫಲಾನುಭವಿಗಳು ವಸತಿ ಯೋಜನೆಯ ಫಲಾನುಭವಿಗಳು 2006ರ ಅರಣ್ಯ ಹಕ್ಕು ಕಾಯ್ದೆಯ ಫಲಾನುಭವಿಗಳು ಸಣ್ಣ ಹಾಗೂ ಅತಿಸಣ್ಣ ರೈತರು
ಅಗತ್ಯವಿರುವ ದಾಖಲೆಗಳು ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಪಾಸ್ ಪೋರ್ಟ್ ಸೈಜ್ ಫೋಟೋ, ಫೋನ್ ನಂಬರ್, ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯ್ತಿಯಲ್ಲಿ ಸಿಗುವ ನಮೂನೆ 6 ಕಾಮಗಾರಿ ಮಾಡಿಸಿಕೊಳ್ಳಬೇಕು ಎಂದರೆ ಅದಕ್ಕೆ ಬೇಕಾಗುವ ದಾಖಲೆಗಳು.